ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಇಬ್ಬರು ಸ್ಟಾರ್‌ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ

Asia Cup 2022: Mahela Jayawardena said Virat Kohli, KL Rahuls inclusion in Asia Cup squad is concern

ಏಷ್ಯಾ ಕಪ್‌ಗಾಗಿ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು ಈ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದೀಗ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಕೂಡ ಏಷ್ಯಾ ಕಪ್‌ನಲ್ಲಿ ಆಡಲಿರುವ ಭಾರತ ತಂಡದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಬ್ಬರು ಸ್ಟಾರ್ ಆಟಗಾರರ ಬಗ್ಗೆ ಜಯವರ್ಧನೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದ 15 ಆಟಗಾರರ ಬಳಗವನ್ನು ಈಗಾಗಲೇ ಬಿಸಿಸಿಐ ಘೋಷಣೆ ಮಾಡಿದೆ. ಕೆಲ ಪ್ರತಿಭಾವಂತ ಆಟಗಾರರಿಗೆ ಈ ತಂಡದಲ್ಲಿ ಅವಕಾಶ ದೊರೆಯದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಹೇಲಾ ಜಯವರ್ಧನೆ ಇಬ್ಬರು ಸ್ಟಾರ್ ಆಟಗಾರರ ಸೇರ್ಪಡೆಗೆ ಪ್ರತಿಕ್ರಿಯೆ ನೀಡಿದ್ದು ಇದು ಕಳವಳಕಾರಿ ನಡೆಯಾಗಿದೆ ಎಂದಿದ್ದಾರೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

ಹಾಗಾದರೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೇಳಿದ ಟೀಮ್ ಇಂಡಿಯಾದ ಆ ಸ್ಟಾರ್ ಆಟಗಾರರು ಯಾರು? ಮುಂದೆ ಓದಿ..

ಕೊಹ್ಲಿ, ರಾಹುಲ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ

ಕೊಹ್ಲಿ, ರಾಹುಲ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ

ಶ್ರೀಲಮಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಏಷ್ಯಾ ಕಪ್‌ನಲ್ಲಿ ಭಗವಹಿಸುವ ಭಾರತ ತಂಡದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್‌ ಅವರನ್ನು ಸೇರಿಸಿಕೊಂಡಿರುವುದಕ್ಕೆ ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆಗೆ ಸಿಲುಕಿದ್ದರು. ಹೀಗಾಘಿ ಈ ಇಬ್ಬರಲ್ಲಿನ ಆತ್ಮ ವಿಶ್ವಾಸದ ಮಗ್ಗೆ ಲಂಕಾದ ದಿಗ್ಗಜ ಕ್ರಿಕೆಟಗ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಹೆಚ್ಚು ಕ್ರಿಕೆಟ್ ಆಡಿಲ್ಲ

ರಾಹುಲ್ ಹೆಚ್ಚು ಕ್ರಿಕೆಟ್ ಆಡಿಲ್ಲ

ಗಾಯದ ಸಮಸ್ಯೆಯ ಕಾರಣದಿಂದಾಗಿ ಕೆಎಲ್ ರಾಹುಲ್ ಇತ್ತೀಚೆಗೆ ಹೆಚ್ಚು ಕ್ರಿಕೆಟ್ ಆಡಿಲ್ಲ. ಅದರಲ್ಲೂ ಐಪಿಎಲ್ ಬಳಿಕ ಅವರು ಭಾರತ ತಂಡದಲ್ಲಿ ಯಾವುದೇ ಪಂದ್ಯವನ್ನು ಕೂಡ ಆಡಿಲ್ಲ. ಈ ವಿಚಾರವನ್ನು ಜಯವರ್ಧನೆ ಉಲ್ಲೇಖಿಸಿದ್ದಾರೆ. "ಐಪಿಎಲ್ ಬಳಿಕ ರಾಹುಲ್ ಕ್ರಿಕೆಟ್ ಆಡಿಲ್ಲ. ಏಷ್ಯಾ ಕಪ್‌ನಂಥಾ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಬೇಕಾದರೆ ಪಂದ್ಯಗಳ ಅಭ್ಯಾಸ ಸಾಕಷ್ಟು ಬೇಕಾಗಿರುತ್ತದೆ. ಅವರು ಹೆಚ್ಚು ಆತ್ಮವಿಶ್ವಾಸವನ್ನು ಮರಳಿ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಹಾಗೂ ತಂಡಕ್ಕೆ ನೆರವಾಗಲಿದೆ" ಎಂದಿದ್ದಾರೆ ಮಹೇಲ ಜಯವರ್ಧನೆ.

ಕೊಹ್ಲಿ ಬಗ್ಗೆ ಜಯವರ್ಧನೆ ವಿಶ್ವಾಸ

ಕೊಹ್ಲಿ ಬಗ್ಗೆ ಜಯವರ್ಧನೆ ವಿಶ್ವಾಸ

ಇನ್ನು ಮುಂದುವರಿದು ಮಾತನಾಡಿದ ಮಹೇಲಾ ಜಯವರ್ಧನೆ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿರುವುದು ದುರದೃಷ್ಟ. ಆದರೆ ಆತನೋರ್ವ ಗುಣಮಟ್ಟದ ಆಟಗಾರನಾಗಿದ್ದಾರೆ. ಈ ಕಳಪೆ ಫಾರ್ಮ್‌ನಿಂದ ಹೊರಬರಲು ಅವರಲ್ಲಿ ಅಸ್ತ್ರಗಳಿವೆ. ಅವರು ಖಂಡಿತವಾಗಿಯೂ ಇದರಿಂದ ವಾಪಾಸಾಗಲಿದ್ದಾರೆ. ಕ್ಲಾಸ್ ಈಸ್ ಪರ್ಮನೆಂಟ್ ಫಾರ್ಮ್ ಈಸ್ ಟೆಂಪರರಿ" ಎಂದಿದ್ದಾರೆ ಮಹೇಲಾ ಜಯವರ್ಧನೆ.

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada
ಭಾರತದ ಸ್ಕ್ವಾಡ್ ಹೀಗಿದೆ

ಭಾರತದ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

Story first published: Thursday, August 11, 2022, 10:23 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X