ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

Asia Cup 2022: Pakistan Former Cricketer Salman Butt Supports Indias Dropout Of Mohammed Shami

ಸೋಮವಾರ (ಆಗಸ್ಟ್ 8)ದಂದು ಏಷ್ಯಾಕಪ್‌ಗಾಗಿ ಪ್ರಕಟಿಸಿದ 15 ಸದಸ್ಯರ ಭಾರತೀಯ ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮತ್ತೆ ಫಿಟ್ ಆಗಿರುವ ಉಪ ನಾಯಕ ಕೆಎಲ್ ರಾಹುಲ್ ಮರಳಿದ್ದಾರೆ. ಇದೇ ವೇಳೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣದಿಂದ ಹೊರಗುಳಿದಿದ್ದಾರೆ. ಇನ್ನು ಇನ್ನೊಬ್ಬ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಟಿ20 ಕ್ರಿಕೆಟ್‌ನಿಂದಲೇ ಹೊರಗಿಟ್ಟಾಂತಾಗಿದೆ.

Asia Cup 2022: ಭಾರತ vs ಪಾಕಿಸ್ತಾನ ಪಂದ್ಯದ ದಿನಾಂಕ, ಸಮಯ, ಪೂರ್ಣ ತಂಡಗಳುAsia Cup 2022: ಭಾರತ vs ಪಾಕಿಸ್ತಾನ ಪಂದ್ಯದ ದಿನಾಂಕ, ಸಮಯ, ಪೂರ್ಣ ತಂಡಗಳು

ಏಷ್ಯಾ ಕಪ್ 2022ರ ತಂಡದಿಂದ ಮೊಹಮ್ಮದ್ ಶಮಿಯನ್ನು ಕೈಬಿಡುವ ಭಾರತದ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಬೆಂಬಲಿಸಿದ್ದಾರೆ. ಬಲಗೈ ವೇಗಿ ಮೊಹಮ್ಮದ್ ಶಮಿ ಯುಎಇಯಲ್ಲಿ ಹೊಸ ಚೆಂಡಿನೊಂದಿಗೆ ಪ್ರಭಾವ ಬೀರಲು ಹೆಣಗಾಡಿದ್ದಾರೆ ಎಂದು ಕಾರಣ ತಿಳಿಸಿದ್ದಾರೆ.

ಅವೇಶ್ ಖಾನ್ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ

ಅವೇಶ್ ಖಾನ್ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ

ಭಾರತವು ಮುಂಬರುವ ಏಷ್ಯಾ ಕಪ್ ಟೂರ್ನಮೆಂಟ್‌ಗಾಗಿ ಆಗಸ್ಟ್ 8ರಂದು ಪ್ರಕಟಿಸಿದ ತಂಡದಲ್ಲಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅವರನ್ನು ಮುಖ್ಯ ವೇಗಿಗಳಾಗಿ ಸೇರಿಸಲಾಯಿತು. ದೀಪಕ್ ಚಾಹರ್ ಅವರನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ.

ಆಕಾಶ್ ಚೋಪ್ರಾ ಸೇರಿದಂತೆ ಅನೇಕ ಕ್ರಿಕೆಟ್ ತಜ್ಞರು ಐಪಿಎಲ್‌ನಲ್ಲಿ ಅವರ ಪ್ರದರ್ಶನಗಳನ್ನು ಗಮನಿಸಿದರೆ, ಮೊಹಮ್ಮದ್ ಶಮಿಯನ್ನು ಹೊರಗಿಡುವ ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರದಿಂದ ಆಶ್ಚರ್ಯಚಕಿತರಾಗಿದ್ದಾರೆ. ಅವೇಶ್ ಖಾನ್ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ.

ಯುಎಇಯಲ್ಲಿ ಹೊಸ ಚೆಂಡಿನೊಂದಿಗೆ ಗಮನಾರ್ಹ ಪರಿಣಾಮ ಬೀರಲಿಲ್ಲ

ಯುಎಇಯಲ್ಲಿ ಹೊಸ ಚೆಂಡಿನೊಂದಿಗೆ ಗಮನಾರ್ಹ ಪರಿಣಾಮ ಬೀರಲಿಲ್ಲ

ಆದರೆ, ಈ ನಿರ್ಧಾರದ ಹಿಂದಿನ ತರ್ಕವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಈಗ ವಿವರಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದಂತೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, "ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಕಳೆದ ಬಾರಿ ಯುಎಇಯಲ್ಲಿ ಆಡಿದ ಹೊಸ ಚೆಂಡಿನೊಂದಿಗೆ ಗಮನಾರ್ಹ ಪರಿಣಾಮ ಬೀರಲಿಲ್ಲ," ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.

ಆದರೆ, ಬೌಲಿಂಗ್ ಮಾಡುವ ಮತ್ತು ಬ್ಯಾಟ್‌ನಿಂದ ಕೆಳ ಕ್ರಮಾಂಕದಲ್ಲಿ ರನ್ ಕೊಡುಗೆ ನೀಡುವ ಆಟಗಾರರನ್ನು ಹುಡುಕಲು ಭಾರತವು ಪ್ರಾರಂಭಿಸಬೇಕಾಗುತ್ತದೆ ಎಂದು ಸಲ್ಮಾನ್ ಬಟ್ ಸಲಹೆ ನೀಡಿದರು. ಆಗಸ್ಟ್ 27ರಂದು ಪ್ರಾರಂಭವಾಗಲಿರುವ ಮುಂಬರುವ ಏಷ್ಯಾ ಕಪ್‌ಗೆ ಭಾರತವು ಸರಿಯಾದ ತಂಡವನ್ನು ಆಯ್ಕೆ ಮಾಡಿದೆ ಎಂದು 37 ವರ್ಷ ವಯಸ್ಸಿನ ಸಲ್ಮಾನ್ ಬಟ್ ತಿಳಿಸಿದರು.

ಹೆಚ್ಚು ಚುರುಕುಬುದ್ಧಿಯ ಆಟಗಾರರನ್ನು ಆಯ್ಕೆ ಮಾಡಿದೆ

ಹೆಚ್ಚು ಚುರುಕುಬುದ್ಧಿಯ ಆಟಗಾರರನ್ನು ಆಯ್ಕೆ ಮಾಡಿದೆ

ಏಷ್ಯಾ ಕಪ್‌ಗಾಗಿ ಭಾರತವು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿದೆ. ಏಕೆಂದರೆ ಅವರು ಕೊನೆಯ ಬಾರಿ ಯುಎಇಯಲ್ಲಿ ಆಡಿದಾಗ ಹೊಸ ಚೆಂಡಿನೊಂದಿಗೆ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಭಾರತವು ಮೈದಾನದಲ್ಲಿ ಹೆಚ್ಚು ಚುರುಕುಬುದ್ಧಿಯ ಆಟಗಾರರನ್ನು ಆಯ್ಕೆ ಮಾಡಿದೆ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟ್‌ನಿಂದ ಕೊಡುಗೆ ನೀಡವವರತ್ತ ಗಮನ ಹರಿಸಿದೆ ಎಂದು ವಿವರಿಸಿದರು.

"ಏಷ್ಯಾಕಪ್‌ನಿಂದ ಜಸ್ಪ್ರೀತ್ ಬುಮ್ರಾ ಕೂಡಾ ಹೊರಗುಳಿದಿದ್ದು, ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹೆಸರಿಸಿಲ್ಲ. ಅವರು ಅತ್ಯಂತ ಕಿರಿಯ ವೇಗದ ದಾಳಿಯನ್ನು ಹೊಂದಿದ್ದಾರೆ ಮತ್ತು ಭುವನೇಶ್ವರ್ ಕುಮಾರ್ ಅವರ ತಂಡದಲ್ಲಿ ಅತ್ಯಂತ ಅನುಭವಿ ವೇಗದ ಬೌಲರ್ ಆಗಿದ್ದಾರೆ. ತಂಡದಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳಿದ್ದಾರೆ. ಯುಎಇಯಲ್ಲಿನ ಪರಿಸ್ಥಿತಿಗಳನ್ನು ಪರಿಗಣಿಸಿ ಭಾರತ ಸರಿಯಾದ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ನಾನು ನಂಬುತ್ತೇನೆ,"ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.

Story first published: Tuesday, August 9, 2022, 22:43 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X