ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಏಷ್ಯಾಕಪ್‌ನಲ್ಲಿ ಕಣಕ್ಕಿಳಿದಿರುವ ಭಾರತದ ಈ ಆಟಗಾರ ಟಿ20ಯಲ್ಲಿ ಆಡಲು ಅರ್ಹನಲ್ಲ"

Asia Cup 2022: Rohan Gavaskar said Indian pacer Avesh Khan does not fit in t20 team

ಭಾರತದ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ರೋಹನ್ ಗವಾಸ್ಕರ್ ಟಿ20 ವಿಶ್ವಕಪ್ ತಂಡದ ಬಗ್ಗೆ ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಭಾರತ ತಂಡದ ಭಾಗವಾಗಿರುವ ಈ ಆಟಗಾರ ಮುಂಬರುವ ವಿಶ್ವಕಪ್‌ನ ತಂಡದಲ್ಲಿ ಸ್ಥಾನವನ್ನು ಪಡೆಯಲು ಅರ್ಹನಲ್ಲ ಎಂದಿದ್ದಾರೆ. ಅದಕ್ಕೆ ಪೂರಕ ಕಾರಣವನ್ನು ಕೂಡ ನೀಡಿದ್ದಾರೆ.

ರೋಹನ್ ಗವಾಸ್ಕರ್ ಹೀಗೆ ಹೇಳಿದ ಆಟಗಾರ ಬೇರೆ ಯಾರೂ ಅಲ್ಲ. ಯುವ ವೇಗಿ ಆವೇಶ್ ಖಾನ್. ಕಳೆದ ಜಿಂಬಾಬ್ವೆ ಪ್ರವಾಸದಲ್ಲಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪರಿಣಾಮಕಾರಿ ಎನಿಸದಿದ್ದರೂ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆವೇಶ್ ಖಾನ್ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು. ಆದರೆ ಮುಂದಿನ ವಿಶ್ವಕಪ್‌ನಲ್ಲಿ ಆವೇಶ್ ಖಾನ್ ಸ್ಥಾನ ಗಿಟ್ಟಿಸಿಕೊಳ್ಳಲು ಅರ್ಹನಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್.

Asia cup 2022: ಪಾಕಿಸ್ತಾನ vs ಹಾಂಕಾಂಗ್ ಡೂ or ಡೈ ಪಂದ್ಯ, ಸೂಪರ್ 4 ಪ್ರವೇಶಕ್ಕೆ ಇಂದು ಹೋರಾಟAsia cup 2022: ಪಾಕಿಸ್ತಾನ vs ಹಾಂಕಾಂಗ್ ಡೂ or ಡೈ ಪಂದ್ಯ, ಸೂಪರ್ 4 ಪ್ರವೇಶಕ್ಕೆ ಇಂದು ಹೋರಾಟ

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಬರೊಬ್ಬರಿ 53 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇನ್ನು ಪಾಕಿಸ್ತಾನದ ವಿರುದ್ಧ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿಯೂ ಆವೇಶ್ ಖಾನ್ ಕೇವಲ ಎರಡು ಓವರ್‌ಗಳಲ್ಲಿ 19 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

"ಟಿ20 ವಿಶ್ವಕಪ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಬೇಕಾದರೆ ತಂಡದ ಪರವಾಗಿ ಅವರ ಪ್ರದರ್ಶನ ಸುಧಾರಿಸುವುದು ಅಗತ್ಯವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವೇಶ್ ಈವರೆಗೆ ನೀಡಿದ ಪ್ರದರ್ಶನದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಜನರು ಯಾವ ರೀತಿಯ ಯೋಚನೆ ಮಾಡಡುತ್ತಿದ್ದಾರೋ ಅದೇ ರೀತಿ ಅವರು ಕೂಡ ಯೋಚಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಆವೇಶ್ ಖಾನ್ ಅವರು ಭಾರತದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ಅರ್ಹವಾಗಿಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಗುಜರಾತ್ ಜೈಂಟ್ಸ್‌ಗೆ ಸೆಹ್ವಾಗ್, ಇಂಡಿಯಾ ಕ್ಯಾಪಿಟಲ್ಸ್‌ಗೆ ಗಂಭೀರ್ ನಾಯಕಲೆಜೆಂಡ್ಸ್ ಲೀಗ್ ಕ್ರಿಕೆಟ್: ಗುಜರಾತ್ ಜೈಂಟ್ಸ್‌ಗೆ ಸೆಹ್ವಾಗ್, ಇಂಡಿಯಾ ಕ್ಯಾಪಿಟಲ್ಸ್‌ಗೆ ಗಂಭೀರ್ ನಾಯಕ

ವಿಶ್ವಕಪ್‌ಗೆ ಅವರಿಬ್ಬರು ಪ್ರಮುಖ ಎಂದ ರೋಹನ್: ಇನ್ನು ಈ ಸಂದರ್ಭದಲ್ಲಿ ಮುಂದಿನ ವಿಶ್ವಕಪ್‌ನಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ಮುನ್ನಡೆಸುವುದು ಬಹುತೇಕ ಖಚಿತ ಎಂದಿದ್ದಾರೆ. "ಜಸ್ಪ್ರಿತ್ ಬೂಮ್ರಾ ಸದ್ಯ ಈ ತಂಡದಲ್ಲಿ ಆಡುತ್ತಿಲ್ಲ. ವಿಶ್ವಕಪ್‌ನಲ್ಲಿ ಅವರು ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಇನ್ನು ಭುವನೇಶ್ವರ್ ಕುಮಾರ್ ಕೂಡ ಇರಲಿದ್ದು ವಿಶ್ವಕಪ್‌ನಲ್ಲಿ ಆಡುವ ಬಳಗದಲ್ಲಿ ಖಂಡಿತಾ ಸ್ಥಾನವನ್ನು ಪಡೆಯಲಿದ್ದಾರೆ. ಆದರೆ ಪ್ರಮುಖ ಸಂಗತಿಯೆಂದರೆ ಇವರಿಬ್ಬರು ಕೂಡ ಗಾಯಗೊಳ್ಳಬಾರದು" ಎಂದಿದ್ದಾರೆ ರೋಹನ್ ಗವಾಸ್ಕರ್.

ದೀಪಕ್ ಚಾಹರ್ ಮತ್ತು ಹರ್ಷಲ್ ಪಟೇಲ್‌ಗೆ ಸ್ಥಾನ ದೊರೆಯುವ ಸಾಧ್ಯತೆ: ಮುಂದುವರಿದು ಮಾತನಾಡಿದ ರೋಹನ್ ಗವಾಸ್ಕರ್ "ದೀಪಕ್ ಚಾಹರ್ ಹಾಗೂ ಹರ್ಷಲ್ ಪಟೇಲ್ ಅವರಂತಾ ಆಟಗಾರರು ಕೂಡ ಇದ್ದು ಆವೇಶ್ ಖಾನ್ ಬದಲಿಗೆ ಇವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ" ಎಂದಿದ್ದಾರೆ ರೋಹನ್ ಗವಾಸ್ಕರ್.

Story first published: Friday, September 2, 2022, 20:06 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X