ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ನಮಗೆ ಮುಖ್ಯ: ಹಾಂಗ್‌ಕಾಂಗ್ ವಿರುದ್ಧ ಪಾಂಡ್ಯಾ ಬದಲು ಪಂತ್ ಕಣಕ್ಕಿಳಿದದ್ದೇಕೆ ಎಂದು ತಿಳಿಸಿದ ರೋಹಿತ್!

Asia Cup 2022: Rohit Sharma revealed why Hardik Pandya is not playing against Hong Kong

ಪ್ರಸ್ತುತ ಯುಎಇ ನೆಲದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತನ್ನ ಚೊಚ್ಚಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದು ಶುಭಾರಂಭವನ್ನು ಮಾಡಿದೆ.

Asia Cup 2022: 14 ವರ್ಷಗಳ ಬಳಿಕ ಭಾರತ vs ಹಾಂಗ್‌ಕಾಂಗ್ ಪಂದ್ಯ; ಅಂದು 256 ರನ್‌ಗಳ ಜಯ!Asia Cup 2022: 14 ವರ್ಷಗಳ ಬಳಿಕ ಭಾರತ vs ಹಾಂಗ್‌ಕಾಂಗ್ ಪಂದ್ಯ; ಅಂದು 256 ರನ್‌ಗಳ ಜಯ!

ಪಾಕಿಸ್ತಾನ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 3 ವಿಕೆಟ್ ಕಬಳಿಸುವುದರ ಜತೆಗೆ 17 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸಿ, ಫಿನಿಶಿಂಗ್ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿಗೆ ಪ್ರಮುಖ ಕಾರಣಕರ್ತನಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಹಾರ್ದಿಕ್ ಪಾಂಡ್ಯ ಇಂದು ( ಆಗಸ್ಟ್ 31 ) ನಡೆಯುತ್ತಿರುವ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

Asia Cup 2022: ರೋಹಿತ್ ಕೊಹ್ಲಿಗಿಂತ ಬೆಸ್ಟ್ ಕ್ಯಾಪ್ಟನ್ ಆಗಲು ಇನ್ನೊಂದು ಪಂದ್ಯ ಸಾಕು!Asia Cup 2022: ರೋಹಿತ್ ಕೊಹ್ಲಿಗಿಂತ ಬೆಸ್ಟ್ ಕ್ಯಾಪ್ಟನ್ ಆಗಲು ಇನ್ನೊಂದು ಪಂದ್ಯ ಸಾಕು!

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಜಯ ಸಾಧಿಸಿದರೆ ಟೂರ್ನಿಯಲ್ಲಿ ಸೂಪರ್ 4 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು, ಇಂತಹ ಮಹತ್ವದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪಂದ್ಯದ ಆಡುವ ಬಳಗ ಘೋಷಣೆಯಾಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಬದಲಾಗಿ ರಿಷಭ್ ಪಂತ್ ಅವರಿಗೆ ಸ್ಥಾನ ನೀಡಿರುವ ಸಂಗತಿ ತಿಳಿದು ಬಂದಿದ್ದು ಕೆಲ ಕ್ರಿಕೆಟ್ ಪ್ರೇಮಿಗಳು ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಪಂದ್ಯದ ಟಾಸ್ ಮುಕ್ತಾಯದ ನಂತರ ಈ ವಿಷಯವನ್ನು ಬಹಿರಂಗಪಡಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಿರುವುದರ ಹಿಂದಿನ ಕಾರಣವನ್ನು ಸಹ ಬಹಿರಂಗಪಡಿಸಿದರು.

ಆತ ನಮಗೆ ಮುಖ್ಯ ಎಂದ ರೋಹಿತ್ ಶರ್ಮಾ

ಆತ ನಮಗೆ ಮುಖ್ಯ ಎಂದ ರೋಹಿತ್ ಶರ್ಮಾ

ಪಂದ್ಯದಲ್ಲಿ ಟಾಸ್ ಸೋತ ನಂತರ ಮಾತನಾಡಿದ ರೋಹಿತ್ ಶರ್ಮಾ ತಾವೂ ಸಹ ಬೌಲಿಂಗ್ ಆಯ್ದುಕೊಳ್ಳುವ ಯೋಜನೆಯಲ್ಲಿದ್ದೆವು ಎಂದು ಮಾತನಾಡಲಾರಂಭಿಸಿದರು. ನಂತರ ತಂಡದ ಆಡುವ ಬಳಗದ ಕುರಿತಾಗಿ ಮಾತನಾಡಿದ ರೋಹಿತ್ ಶರ್ಮಾ ಆಡುವ ಬಳಗದಲ್ಲಿ ಕೇವಲ ಒಂದು ಬದಲಾವಣೆಯಿದ್ದು, ಹಾರ್ದಿಕ್ ಪಾಂಡ್ಯ ಬದಲಾಗಿ ರಿಷಭ್ ಪಂತ್ ಕಣಕ್ಕಿಳಿಯುತ್ತಿದ್ದಾರೆ ಎಂದರು. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ಅತಿಮುಖ್ಯವಾದ ಆಟಗಾರ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯದಿಂದ ವಿಶ್ರಾಂತಿ ನೀಡಿರುವುದಾಗಿ ರೋಹಿತ್ ಶರ್ಮಾ ತಿಳಿಸಿದರು. ಈ ಮೂಲಕ ಮುಂದಿನ ಮುಖ್ಯ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ ಎಂಬ ವಿಷಯವನ್ನು ರೋಹಿತ್ ಶರ್ಮಾ ತಿಳಿಸಿದರು.

ಸೂಪರ್ 4 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಆಡಿಸುವ ಯೋಜನೆ

ಸೂಪರ್ 4 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಆಡಿಸುವ ಯೋಜನೆ

ರೋಹಿತ್ ಶರ್ಮಾ ಹೇಳಿಕೆಯ ಪ್ರಕಾರ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬರುವ ಸೂಪರ್ 4 ಸುತ್ತಿನ ಪಂದ್ಯಗಳಲ್ಲಿ ಕಣಕ್ಕಿಳಿಸಲಾಗುತ್ತದೆ. ಆ ಸುತ್ತಿನಲ್ಲಿ ಹೆಚ್ಚು ಗೆಲ್ಲಲಿರುವ ತಂಡ ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ಕಾರಣ ಪಂದ್ಯಗಳು ಮಹತ್ವದ್ದಾಗಿರಲಿದ್ದು, ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಸುವುದು ರೋಹಿತ್ ಯೋಜನೆಯಾಗಿದೆ.

ಆಡುವ ಬಳಗಗಳು

ಆಡುವ ಬಳಗಗಳು

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್

ಬೆಂಚ್ ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ

ಹಾಂಗ್ ಕಾಂಗ್ ಆಡುವ ಬಳಗ: ನಿಜಾಕತ್ ಖಾನ್ ( ನಾಯಕ ) ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಷಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್

ಬೆಂಚ್ ಅತೀಕ್ ಇಕ್ಬಾಲ್, ಮೊಹಮ್ಮದ್ ಹುಹ್ಸಾಯ್ ಅಫ್ತಾನಾ ವಹೀದ್, ರಾವ್, ಅಹಾನ್ ತ್ರಿವೇದಿ

Story first published: Wednesday, August 31, 2022, 20:49 [IST]
Other articles published on Aug 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X