ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ಟಿ20 ಗೆಲುವು: ಕೊಹ್ಲಿಯನ್ನು ಹಿಂದಿಕ್ಕಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡ ರೋಹಿತ್ ಶರ್ಮಾ!

Asia Cup 2022: Rohit Sharma surpassed Virat Kohli in most t20 wins as captain record

ಆಗಸ್ಟ್ 31ರ ಬುಧವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಹಾಂಕಾಂಗ್ ತಂಡಗಳ ನಡುವಿನ ಈ ಬಾರಿಯ ಏಷ್ಯಾಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ಹಾಂಕಾಂಗ್ ವಿರುದ್ಧ 40 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸೂಪರ್ 4 ಸುತ್ತಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ಏಷ್ಯಾಕಪ್ ಮುಗಿಯುವ ಮುನ್ನವೇ ಭಾರತ vs ಆಸ್ಟ್ರೇಲಿಯಾ ಟಿ20 ಸರಣಿಯ ತಂಡ ಘೋಷಣೆ; ವೇಳಾಪಟ್ಟಿ ಇಲ್ಲಿದೆಏಷ್ಯಾಕಪ್ ಮುಗಿಯುವ ಮುನ್ನವೇ ಭಾರತ vs ಆಸ್ಟ್ರೇಲಿಯಾ ಟಿ20 ಸರಣಿಯ ತಂಡ ಘೋಷಣೆ; ವೇಳಾಪಟ್ಟಿ ಇಲ್ಲಿದೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ತಂಡ ಫೀಲ್ಡಿಂಗ್ ಆಯ್ದುಕೊಂಡು ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 192 ರನ್ ಕಲೆಹಾಕಿ ಹಾಂಕಾಂಗ್ ತಂಡಕ್ಕೆ ಗೆಲ್ಲಲು 193 ರನ್‌ಗಳ ಗುರಿಯನ್ನು ನೀಡಿತ್ತು.

Asia Cup 2022: 14 ವರ್ಷಗಳ ಬಳಿಕ ಭಾರತ vs ಹಾಂಗ್‌ಕಾಂಗ್ ಪಂದ್ಯ; ಅಂದು 256 ರನ್‌ಗಳ ಜಯ!Asia Cup 2022: 14 ವರ್ಷಗಳ ಬಳಿಕ ಭಾರತ vs ಹಾಂಗ್‌ಕಾಂಗ್ ಪಂದ್ಯ; ಅಂದು 256 ರನ್‌ಗಳ ಜಯ!

ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಹಾಂಕಾಂಗ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿ 40 ರನ್‌ಗಳ ಸೋಲನ್ನು ಕಂಡಿದೆ. ಇನ್ನು ಈ ಗೆಲುವು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿನ ಟೀಮ್ ಇಂಡಿಯಾದ ಸತತ ಎರಡನೇ ಜಯವಾಗಿದೆ ಹಾಗೂ ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಸೂಪರ್ 4 ಸುತ್ತಿನ ಅರ್ಹತೆಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಗೆಲುವು ನಾಯಕ ರೋಹಿತ್ ಶರ್ಮಾ ಪಾಲಿಗೆ ತುಂಬಾ ವಿಶೇಷವಾಗಿದ್ದು, ಈ ಗೆಲುವಿನ ಮೂಲಕ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯ ಗೆಲ್ಲಿಸಿದ ಭಾರತದ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

ಪಾಕಿಸ್ತಾನದ ವಿರುದ್ಧ ನಡೆದ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ 30ನೇ ಟಿ ಟ್ವೆಂಟಿ ಗೆಲುವನ್ನು ಕಂಡಿತ್ತು. ಈ ಮೂಲಕ ರೋಹಿತ್ ಶರ್ಮಾ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆಲ್ಲಿಸಿದ ನಾಯಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಂಕಿಅಂಶಕ್ಕೆ ಸರಿಸಮನಾಗಿದ್ದರು. ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿಯೂ ಕೂಡ 30 ಟಿ ಟ್ವೆಂಟಿ ಪಂದ್ಯಗಳನ್ನು ಗೆದ್ದಿತ್ತು. ಆದರೆ ಇದೀಗ ಹಾಂಕಾಂಗ್ ವಿರುದ್ಧದ ಜಯ ರೋಹಿತ್ ಶರ್ಮ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ಗೆದ್ದಿರುವ 31ನೇ ಟಿ ಟ್ವೆಂಟಿ ಗೆಲುವಾಗಿದ್ದು ಈ ಅಂಕಿಅಂಶದಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಅತಿ ಹೆಚ್ಚು ಪಂದ್ಯ ಗೆಲ್ಲಿಸಿದ ಟೀಮ್ ಇಂಡಿಯಾ ನಾಯಕರ ಪಟ್ಟಿ

ಅತಿ ಹೆಚ್ಚು ಪಂದ್ಯ ಗೆಲ್ಲಿಸಿದ ಟೀಮ್ ಇಂಡಿಯಾ ನಾಯಕರ ಪಟ್ಟಿ

• ಎಂಎಸ್ ಧೋನಿ ನಾಯಕತ್ವದಡಿಯಲ್ಲಿ 72 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ 41 ಟಿ ಟ್ವೆಂಟಿ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಎಂಎಸ್ ಧೋನಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆಲ್ಲಿಸಿದ ಭಾರತದ ನಾಯಕ ಎನಿಸಿಕೊಂಡಿದ್ದಾರೆ.

• ರೋಹಿತ್ ಶರ್ಮಾ ನಾಯಕತ್ವದ ಅಡಿಯಲ್ಲಿ ಒಟ್ಟು 37 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ 31 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ.

• ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಒಟ್ಟು 50 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಭಾರತ 30 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ.

ವಿರಾಟ್ ಕೊಹ್ಲಿ ಬೌಲಿಂಗ್ ನೋಡಿ ಅಭಿಮಾನಿಗಳೆಲ್ಲ ಫುಲ್ ಖುಷ್ | Oneindia Kannada
ರೋಹಿತ್ ಶರ್ಮಾ ಯಶಸ್ವಿ ಟಿ ಟ್ವೆಂಟಿ ನಾಯಕ

ರೋಹಿತ್ ಶರ್ಮಾ ಯಶಸ್ವಿ ಟಿ ಟ್ವೆಂಟಿ ನಾಯಕ

ಇನ್ನು ಈ ಮೇಲಿನ ಪಟ್ಟಿಯನ್ನು ಗಮನಿಸಿದರೆ ರೋಹಿತ್ ಶರ್ಮ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಗಿಂತ ಅತಿ ಯಶಸ್ವಿ ಟಿ ಟ್ವೆಂಟಿ ನಾಯಕ ಎಂಬುದು ಸುಲಭವಾಗಿ ತಿಳಿದು ಬರಲಿದೆ. ಏಕೆಂದರೆ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಗೆಲುವಿನ ಶೇಕಡಾಂಶಕ್ಕಿಂತ ರೋಹಿತ್ ಶರ್ಮಾ ನಾಯಕತ್ವದ ಗೆಲುವಿನ ಶೇಕಡಾಂಶ ಹೆಚ್ಚಿದ್ದು, ರೋಹಿತ್ ಭಾರತ ಕ್ರಿಕೆಟ್ ಕಂಡ ಅತಿ ಯಶಸ್ವಿ ಟಿ ಟ್ವೆಂಟಿ ನಾಯಕ ಎನಿಸಿಕೊಂಡಿದ್ದಾರೆ ಹಾಗೂ ಶೀಘ್ರದಲ್ಲಿಯೇ ಈ ಅಂಕಿಅಂಶದಲ್ಲಿ ಎಂಎಸ್ ಧೋನಿ ಅವರನ್ನು ಸಹ ರೋಹಿತ್ ಹಿಂದಿಕ್ಕುವುದು ಖಚಿತ.

Story first published: Wednesday, August 31, 2022, 23:52 [IST]
Other articles published on Aug 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X