ಆತನ ಅಲಭ್ಯತೆ ಏಷ್ಯಾಕಪ್‌ನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಎಂದ ಪಾಕ್ ಮಾಜಿ ಕ್ರಿಕೆಟಿಗ!

ಏಷ್ಯಾ ಕಪ್‌ಗೆ ದಿನಗಣನೆ ಆರಂಭವಾಗಿದ್ದು ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡದ ಆಟಗಾರರ ಬಳಗವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಪ್ರತಿಭಾನ್ವುತ ಆಟಗಾರರ ಪಡೆಯೇ ಇರುವ ಕಾರಣ ಸಾಕಷ್ಟು ಅಳೆದು ತೂಗಿ ತಂಡವನ್ನು ಅಂತಿಮಗೊಳಿಸಲಾಗಿದೆ. ಹಾಗಿದ್ದರೂ ಈ ವಿಚಾರವಾಗಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಏಷ್ಯಾ ಕಪ್‌ಗೆ ಆಯ್ಕೆಯಾಘಿರುವ ಭಾರತ ತಂಡದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಪ್ರತಿಕ್ರಿಯೆ ನೀಡಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಿಂದ ಪ್ರಮುಖ ಆಟಗಾರ ಜಸ್ಪ್ರೀತ್ ಬೂಮ್ರಾ ಹೊರಬಿದ್ದಿದ್ದಾರೆ. ಗಾಯದ ಕಾರಣದಿಂದಾಗಿ ಏಷ್ಯಾ ಕಪ್‌ನಿಂದ ಜಸ್ಪ್ರೀತ್ ಬೂಮ್ರಾ ಹೊರಗುಳಿಯುವುದು ಅನಿವಾರ್ಯವಾಗಿದೆ. ಈ ವಿಚಾರವಾಗಿ ಸಲ್ಮಾನ್ ಬಟ್ ಪ್ರತಿಕ್ರಿಯೆ ನೀಡಿದ್ದು ಟೂರ್ನಿಯಲ್ಲಿ ಭಾರತಕ್ಕೆ ಈ ದೊಡ್ಡ ಹಿನ್ನಡೆಯಾಗಲಿದೆ ಎಂದಿದ್ದಾರೆ.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗAsia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

ಗಾಯದಿಂದ ಹೊರಗುಳಿದಿದ್ದಾರೆ ಇಬ್ಬರು ಆಟಗಾರರು

ಗಾಯದಿಂದ ಹೊರಗುಳಿದಿದ್ದಾರೆ ಇಬ್ಬರು ಆಟಗಾರರು

ಯುಎಇನಲ್ಲಿ ಆಗಸ್ಟ್ 28ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಗೆ ಆಯ್ಕೆ ಮಾಡಿರುವ ಭಾರತೀಯ ಆಟಗಾರರ ತಂಡದಲ್ಲಿ ಇಬ್ಬರು ಆಟಗಾರರು ಗಾಯದ ಕಾರಣದಿಂದಾಗಿ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಜಸ್ಪ್ರೀತ್ ಬೂಮ್ರಾ ಹಾಗೂ ಮತ್ತೋರ್ವ ವೇಗಿ ಹರ್ಷಲ್ ಪಟೇಲ್ ಗಾಯಗೊಂಡಿದ್ದು ಬೆಂಗಳೂರಿನ ಎನ್‌ಸಿಎನಲ್ಲಿ ರಿಹ್ಯಾಹ್ಯಾಬ್‌ನ್ಲಲಿ ಭಾಗವಿಯಾಗಿದ್ದಾರೆ ಎಂದು ಸ್ವತಃ ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ವಿಭಾಗವನ್ನು ಮು್ನನಡೆಸಲಿದ್ದು ಅರ್ಷ್‌ದೀಪ್ ಸಿಂಗ್ ಹಾಗೂ ಅವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಬೂಮ್ರಾ ಅಲಭ್ಯತೆ ಭಾರತಕ್ಕೆ ಹಿನ್ನಡೆ

ಬೂಮ್ರಾ ಅಲಭ್ಯತೆ ಭಾರತಕ್ಕೆ ಹಿನ್ನಡೆ

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಜಸಪ್ರೀತ್ ಬೂಮ್ರಾ ಅಲಭ್ಯತೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಭಾರತ ತಂಡ ಖಂಡಿತವಾಗಿಯೂ ಜಸ್ಪ್ರೀತ್ ಬೂಮ್ರಾ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಬೂಮ್ರಾ ಅವರಂತಾ ಪ್ರಮುಖ ಬೌಲರ್ ಅಲಭ್ಯವಾಗಿದ್ದಾರೆ ಎಂದರೆ ಅದು ತಂಡದಲ್ಲಿ ಸಾಕಷ್ಟು ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗಲಿದೆ. ಆತನೋರ್ವ ಉತ್ಕೃಷ್ಟ ದರ್ಜೆಯ ಬೌಲರ್ ಆಗಿದ್ದು ಸಾಕಷ್ಟು ಅನುಭವವೂ ಅವರಲ್ಲಿದೆ. ಡೆತ್ ಓವರ್‌ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅವರು ಬೌಲಿಂಗ್ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು ಹೊಸ ಚೆಂಡಿನಲ್ಲಿಯೂ ತಂಡಕ್ಕೆ ಮೇಲುಗೈ ಒದಗಿಸುವ ಆಟಗಾರ. ಆತನೋರ್ವ ಮ್ಯಾಚ್ ವಿನ್ನರ್" ಎಂದಿದ್ದಾರೆ ಸಲ್ಮಾನ್ ಬಟ್.

ಯುವ ಆಟಗಾರರಿಗೆ ಉತ್ತಮ ಅವಕಾಶ

ಯುವ ಆಟಗಾರರಿಗೆ ಉತ್ತಮ ಅವಕಾಶ

ಇನ್ನು ಈ ಸಂದರ್ಭದಲ್ಲಿ ಭಾರತ ತಂಡದಲ್ಲಿ ಯುವ ಬೌಲರ್‌ಗಳಿಗೆ ದೊರೆತ ಉತ್ತಮ ಪ್ರಮಾಣದ ಅವಕಾಶದ ಬಗ್ಗೆಯೂ ಸಲ್ಮಾನ್ ಬಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬೂಮ್ರಾ ಈ ಟೂರ್ನಿಯಲ್ಲಿ ಆಡಲು ಸಾಧ್ಯವಾಗದ ಕಾರಣದಿಂದಾಗಿ ಅರ್ಷದೀಪ್ ಹಾಗೂ ಆವೇಶ್ ಖಾನ್‌ಗೆ ಅವಕಾಶ ದೊರೆತಿದೆ. ಆದರೆ ಈ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರಲ್ಲ ಎಂದಿದ್ದಾರೆ ಬಟ್. "ಭಾರತ ಯುವ ಆಟಗಾರರಿಗೆ ಸಾಕಷ್ಟು ಅವಕಾಶವನ್ನು ನೀಡುತ್ತಿದೆ. ಅವರೆಲ್ಲರೂ ಯುವ ಆಟಗಾರರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರೆಲ್ಲಾ ಸಾಕಷ್ಟು ಪ್ರಮಾಣಸಲ್ಲಿ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದು ಸಾಕಷ್ಟು ಆತ್ಮವಿಶ್ವಾಸದಲ್ಲಿದ್ದಾರೆ" ಎಂದು ಭಾರತೀಯ ಯುವ ಬೌಲರ್‌ಗಳ ಬಗ್ಗೆ ಸಲ್ಮಾನ್ ಬಟ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತ ಸ್ಕ್ವಾಡ್

ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 10, 2022, 13:44 [IST]
Other articles published on Aug 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X