ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್‌ನನ್ನ ಕೆಣಕಿದ ಪಾಕಿಗಳು: ರಿಜ್ವಾನ್, ಶದಾಬ್ ಸ್ಲೆಡ್ಜಿಂಗ್ ವೀಡಿಯೋ

Suryakumar yadav and shadab khan

ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಭಾರತದ 360 ಡಿಗ್ರಿ ಬ್ಯಾಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ತನ್ನ ಸಾಮರ್ಥ್ಯ ಏನು ಎಂಬುದನ್ನ ಪ್ರದರ್ಶಿಸಿದ್ರು. ಸ್ಫೋಟಕ ಅರ್ಧಶತಕ ದಾಖಲಿಸಿದ್ದ ಸೂರ್ಯ 26 ಎಸೆತಗಳಲ್ಲಿ ಅಜೇಯ 68 ರನ್ ಕಲೆಹಾಕಿ ಹಾಂಕಾಂಗ್ ಬೌಲರ್‌ಗಳ ಬೆವರಿಳಿಸಿದ್ರು.

ಆದ್ರೆ ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಸೂರ್ಯನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. 10 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 13 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್ ನಿರಾಸೆ ಮೂಡಿಸಿದ್ರು. ಆದ್ರೆ ಈ ಇನ್ನಿಂಗ್ಸ್‌ ಆಡುವ ವೇಳೆಯಲ್ಲಿ ಸೂರ್ಯಕುಮಾರ್ ಅನ್ನು ಕೆಣಕುವ ಕೆಲಸವನ್ನ ಪಾಕ್ ಆಟಗಾರರು ಮಾಡಿರುವ ಘಟನೆ ನಡೆದಿದೆ.

ಮೊದಲ ಎಸೆತದಲ್ಲೇ ಶದಾಬ್‌ಗೆ ಬೌಂಡರಿ ಸಿಡಿಸಿದ್ದ ಸೂರ್ಯಕುಮಾರ್

ಮೊದಲ ಎಸೆತದಲ್ಲೇ ಶದಾಬ್‌ಗೆ ಬೌಂಡರಿ ಸಿಡಿಸಿದ್ದ ಸೂರ್ಯಕುಮಾರ್

ಕೆ.ಎಲ್ ರಾಹುಲ್ 28 ರನ್‌ಗಳಿಸಿ ಔಟಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದ್ರು. ಸ್ಪಿನ್ನರ್ ಶದಾಬ್ ಖಾನ್ ದಾಳಿಯಲ್ಲಿ ಅತ್ಯಂತ ಸೊಗಸಾದ ಬೌಂಡರಿ ದಾಖಲಿಸಿದ ಸೂರ್ಯಕುಮಾರ್ ಯಾದವ್ ಸ್ವಲ್ಪವೂ ಅಳುಕದೇ ಮೊದಲ ಎಸೆತದಲ್ಲೇ ಚೆಂಡನ್ನ ಬೌಂಡರಿ ಗೆರೆ ದಾಟಿಸಿದ್ರು.

ಇದಾದ ಬಳಿಕ ಪಾಕ್ ತಂಡಕ್ಕೆ ಡೇಂಜರಸ್ ಆಗಿ ಕಾಣಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್‌ ಅನ್ನು ಹೇಗಾದ್ರೂ ಮಾಡಿ ಔಟ್ ಮಾಡಬೇಕೆಂದು ಪಾಕಿಸ್ತಾನ ತಂಡದ ಉಪನಾಯಕ ಶದಾಬ್ ಖಾನ್ ನಿರ್ಧರಿಸಿದ್ದು, ಸ್ಲೆಡ್ಜಿಂಗ್ ಮೂಲಕ ಸೂರ್ಯನನ್ನು ಕೆಣಕಿದ್ದಾರೆ.

ಕೆಟ್ಟ ಶಾಟ್‌ ಹೊಡೆದು ಔಟಾದ ರಿಷಭ್ ಪಂತ್‌: ತರಾಟೆಗೆ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ

ಸೂರ್ಯನನ್ನ ಕೆಣಕಿದ ಶದಾಬ್- ರಿಜ್ವಾನ್, ವೀಡಿಯೋ ವೈರಲ್

ಸೂರ್ಯನನ್ನ ಕೆಣಕಿದ ಶದಾಬ್- ರಿಜ್ವಾನ್, ವೀಡಿಯೋ ವೈರಲ್

ಸೂರ್ಯಕುಮಾರ್ ಯಾದವ್ ಎರಡು ಬೌಂಡರಿ ಸಿಡಿಸಿದ ಬಳಿಕ ಶದಾಬ್ ಖಾನ್ ಬೌಲಿಂಗ್ ಸತತ ಎರಡು ಬಾರಿ ಆಫ್‌ ಸೈಡ್ ಬಾಲ್ ಅನ್ನು ಬೌಂಡರಿಗೆ ಅಟ್ಟುವ ಪ್ರಯತ್ನ ನಡೆಸಿದ್ರು. ಆದ್ರೆ ಚೆಂಡನ್ನ ಕನೆಕ್ಟ್‌ ಮಾಡುವಲ್ಲಿ ಸೂರ್ಯಕುಮಾರ್ ಯಾದವ್ ವಿಫಲಗೊಂಡರು.

ಈ ವೇಳೆಯಲ್ಲಿ ಶದಾಬ್‌ ಖಾನ್‌ ವಿಕೆಟ್ ಕೀಪರ್ ರಿಜ್ವಾನ್‌ಗೆ ಹೇಳುವ ರೀತಿಯಲ್ಲಿ ಸೂರ್ಯಕುಮಾರ್ ಯಾದವ್‌ಗೆ ಸ್ಲೆಡ್ಜಿಂಗ್ ಮಾಡಿರುವ ವೀಡಿಯೋ ಸೆರೆಯಾಗಿದೆ. ಶದಾಬ್‌ಗೆ ಸಾಥ್ ಕೊಟ್ಟಿರುವ ರಿಜ್ವಾನ್ ಕೂಡ ಸೂರ್ಯನನ್ನು ಕೆಣಕುವ ಪ್ರಯತ್ನ ನಡೆಸಿದ್ದಾರೆ.

IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!

ಎದುರಾಳಿಯ ಸ್ಲೆಡ್ಜಿಂಗ್‌ಗೆ ಉತ್ತರ ನೀಡದೆ ಮೌನವಾಗಿದ್ದ ಸೂರ್ಯ

ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟರ್ ಆಗಿದ್ದರೂ, ಪಾಕ್ ತಂಡದ ಆಟಗಾರರು ಮಾಡಿದ ಸ್ಲೆಡ್ಜಿಂಗ್‌ಗೆ ಯಾವುದೇ ಉತ್ತರ ಕೊಡದೇ ಮೌನವಾಗಿರುವುದು ಕಂಡುಬಂದಿತು. ತಲೆಯನ್ನೇ ಎತ್ತದೇ ಪಿಚ್ ಕಡೆಗೆ ನೋಡುತ್ತಾ ಸಾಗಿದ್ದನ್ನ ವೀಡಿಯೋದಲ್ಲಿ ಕಾಣಬಹುದು. ಆದ್ರೆ ಇದೇ ವೇಳೆಯಲ್ಲಿ ಪಾಕಿಗಳ ಉತ್ಸಾಹ ಹೆಚ್ಚಾಗೇ ಇದ್ದು, ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡವು ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆ ಮಾಡಿತ್ತು. ಇಂಜ್ಯುರಿಯಾಗಿದ್ದ ಶಹನವಾಜ್ ದವಾನಿ ಬದಲು ಮೊಹಮ್ಮದ್ ಹಸ್ನೈನ್ ಸ್ಥಾನ ಪಡೆದರು. ಇನ್ನು ಟೀಂ ಇಂಡಿಯಾ ಪಾಳಯದಲ್ಲಿ ಮೂವರು ಆಟಗಾರರನ್ನ ಬದಲಾಯಿಸಿದ್ದು, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ ಮತ್ತು ಅವೇಶ್ ಖಾನ್ ಬದಲು ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವಿ ಬಿಷ್ಣೋಯಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದರು.

Story first published: Monday, September 5, 2022, 14:59 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X