ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಟಿ20 ಮಾದರಿಯಲ್ಲಿ ಡ್ವೇಯ್ನ್ ಬ್ರಾವೋ ಜೊತೆ ವಿಶೇಷ ಪಟ್ಟಿಗೆ ಸೇರಿಕೊಂಡ ಶಕೀಬ್ ಅಲ್ ಹಸನ್

Asia Cup 2022: Shakib Al Hasan completed 6000 T20 runs and joins Dwayne Bravo in elite list

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 24 ರನ್‌ಗಳನ್ನು ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪಂದ್ಯದ ಮೂಲಕ ಟಿ20 ಮಾದರಿಯಲ್ಲಿ ಶಕೀಬ್ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 6000 ರನ್ ಗಳಿಸಿದ ಬಾಂಗ್ಲಾದೇಶದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾ ಕಪ್ 2022 ರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಈ ವಿಶೇಷ ಸಾಧನೆ ಮಾಡಿದ್ದಾರೆ.

ಈ ಪಂದ್ಯದ ಆರಂಭಕ್ಕೂ ಮುನ್ನ ಶಕೀಬ್ ಅಲ್ ಹಸನ್ ಈ ಮೈಲಿಗಲ್ಲನ್ನು ತಲುಪಲು ಕೇವಲ 15 ರನ್‌ಗಳ ಅಗತ್ಯವಿತ್ತು. ಈ ಹಾದಿಯಲ್ಲಿ ಶಕೀಬ್ ಅಲ್ ಹಸನ್ ಒಂದು ಜೋವದಾನವನ್ನು ಕೂಡ ಪಡೆದುಕೊಂಡಿದ್ದಾರೆ. ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಶಕೀಬ್ ಚಮಿಕಾ ಕರುಣರತ್ನೆ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲ 6000 ರನ್‌ಗಳ ಗಡಿ ತಲುಪಿದರು.

ಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟುಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟು

ಇನ್ನು ಈ ಸಾಧನೆಯ ಮೂಲಕ ಶಕೀಬ್ ಅಲ್ ಹಸನ್ ವೆಸ್ಟ್ ಇಂಡೀಸ್‌ನ ದಿಗ್ಗಜ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರನ್ನು ಹೊಂದಿರುವ ವಿಶೇಷ ಪಟ್ಟಿಗೆ ಸೇರಿಕೊಂಡಿದ್ದಾರೆ. ಟಿ20 ಕ್ರಿಕೆಟ್ ಮಾದರಿಯಲ್ಲಿ 6000 ರನ್‌ಗಳನ್ನು ಮತ್ತು 400 ಪ್ಲಸ್ ವಿಕೆಟ್‌ಗಳನ್ನು ಪಡೆದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಶಕೀಬ್ ಪಾತ್ರರಾಗಿದ್ದಾರೆ. ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಭಾಗವಹಿಸುತ್ತಿರುವ ಬ್ರಾವೋ 6871 ರನ್ ಗಳಿಸಿದ್ದು 605 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ಮಾಡಿದ್ದು ಉತ್ತಮ ಪ್ರದರ್ಶನ ನೀಡಿದೆ. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 183 ರನ್‌ಗಳನ್ನು ಗಳಿಸಿದೆ. ಈ ಮೂಲಕ ಶ್ರೀಲಂಕಾಗೆ ದೊಡ್ಡ ಮೊತ್ತದ ಗುರಿ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಎರಡೂ ತಮಡಗಳುಗೂ ನಿರ್ಣಾಯಕವಾಗಿದ್ದು ಗೆಲ್ಲುವ ತಂಡ ಸೂಪರ್ 4 ಹಂತಕ್ಕೇರಲಿದೆ.

ಸೂರ್ಯಕುಮಾರ್ ಇನ್ನಿಂಗ್ಸ್ ನನ್ನನ್ನು ಬೆಚ್ಚಿಬೀಳಿಸಿದೆ ಎಂದ ವಿರಾಟ್ ಕೊಹ್ಲಿ: ವಿಶೇಷ ಸಂದರ್ಶನದ Videoಸೂರ್ಯಕುಮಾರ್ ಇನ್ನಿಂಗ್ಸ್ ನನ್ನನ್ನು ಬೆಚ್ಚಿಬೀಳಿಸಿದೆ ಎಂದ ವಿರಾಟ್ ಕೊಹ್ಲಿ: ವಿಶೇಷ ಸಂದರ್ಶನದ Video

ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ಆಡುವ 11ರ ಬಳಗ
ಶ್ರೀಲಂಕಾ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗಾ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್.

Story first published: Friday, September 2, 2022, 9:53 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X