ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಿಮ ಓವರ್‌ನಲ್ಲಿ ನೋ ಬಾಲ್ ಎಸೆದ ಬೌಲರ್ ವಿರುದ್ಧ ಬಾಂಗ್ಲಾ ನಾಯಕ ಶಕೀಬ್ ಕೆಂಡ!

Asia cup 2022: Shakib Al Hasan disappointed on bowler side A spinner bowled a no ball is a crime

ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸೋಲು ಅನುಭವಿಸಿದೆ. ಅಂತಿಮ ಹಂತದವರೆಗೂ ಕಠಿಣ ಪೈಪೋಟಿ ನೀಡಿದ ಬಾಂಗ್ಲಾದೇಶ ತಂಡ ಗೆಲ್ಲುವ ಬಹುತೇಕ ಸಾಧ್ಯತೆಯಿತ್ತು. ಆದರೆ ಅಂತಿಮ ಎರಡು ಓವರ್‌ಗಳಲ್ಲಿ ಮಾಡಿದ ಎಡವಟ್ಟಿನಿಂದ ಬಾಂಗ್ಲಾದೇಶ ತಂಡ 2 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿದ್ದಾಗ ಬೌಲಿಂಗ್ ಮಾಡಲು ಕಣಕ್ಕಿಳಿದ ಮೆಹದಿ ಹಸನ್ ಕೇವಲ ಎರಡು ಎಸೆತಗಳಲ್ಲಿಯೇ ಈ ರನ್‌ಗಳನ್ನು ನೀಡಿದರು. ಮೂರನೇ ಎಸೆತ ನೋಬಾಲ್ ಆದ ಪರಿಣಾಮವಾಗಿ ಶ್ರೀಲಂಕಾ ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಈ ಆಘಾತಕಾರಿ ಸೋಲಿನ ಬಳಿಕ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿಭಾಗದ ಬೌಲಿಂಗ್‌ನಲ್ಲಿ ಅಶಿಸ್ತನ್ನು ಶಕೀಬ್ ಅಲ್ ಹಸನ್ ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ತಂಡ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು ಎಂದಿದ್ದಾರೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್.

ಭಾರತ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ತಂಡದಲ್ಲಿಲ್ಲ ಸ್ಟಾರ್ ಆಟಗಾರನಿಗೆ ಸ್ಥಾನ!ಭಾರತ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ತಂಡದಲ್ಲಿಲ್ಲ ಸ್ಟಾರ್ ಆಟಗಾರನಿಗೆ ಸ್ಥಾನ!

ಯಾವ ನಾಯಕನೂ ನೋ ಬಾಲ್ ಬಯಸಲ್ಲ

ಯಾವ ನಾಯಕನೂ ನೋ ಬಾಲ್ ಬಯಸಲ್ಲ

ಅಂತಿಮ ಓವರ್‌ನಲ್ಲಿ ಸ್ಪಿನ್ನರ್ ಮೆಹದಿ ಹಸನ್ ಅವರ ನೋ ಬಾಲ್ ಎಸೆತದ ಬಗ್ಗೆ ಶಕೀಬ್ ಅಲ್ ಹಸನ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಯಾವ ನಾಯಕ ಕೂಡ ನೋ ಬಾಲ್‌ಅನ್ನು ಬಯಸುವುದಿಲ್ಲ. ಅದರಲ್ಲೂ ಸ್ಪಿನ್ನರ್ ನೋ ಬಾಲ್ ಎಸೆಯುವುದೇ ಅಪರಾಧ. ನಾವು ಸಾಕಷ್ಟು ನೋಬಾಲ್ ಹಾಗೂ ವೈಡ್ ಎಸೆತಗಳನ್ನು ಎಸೆದಿದ್ದೇವೆ. ಇದು ಶಿಸ್ತಿನ ಬೌಲಿಂಗ್‌ ಅಲ್ಲ. ಇವೆಲ್ಲಾ ಒತ್ತಡದ ಪಂದ್ಯಗಳು. ಇವುಗಳಿಂದ ನಾವು ಸಾಕಷ್ಟು ಕಲಿಯಬೇಕಿದೆ" ಎಂದಿದ್ದಾರೆ ಶಕೀಬ್ ಅಲ್ ಹಸನ್.

ಪಂದ್ಯ ತಿರುವು ಪಡೆದದ್ದೆಲ್ಲಿ ಎಂದ ಶಕೀಬ್

ಪಂದ್ಯ ತಿರುವು ಪಡೆದದ್ದೆಲ್ಲಿ ಎಂದ ಶಕೀಬ್

ಇನ್ನು ಈ ಪಂದ್ಯ ತಿರುವು ಪಡೆದುಕೊಂಡಿದ್ದು ಎಲ್ಲಿ ಎಂಬ ಅಂಶವನ್ನು ಶಕೀಬ್ ಅಲ್ ಹಸನ್ ಹಂಚಿಕೊಂಡಿದ್ದಾರೆ. "ಈ ಪಂದ್ಯ ತಿರುವು ಪಡೆದುಕೊಂಡಿದ್ದು ನಿರ್ಣಾಯಕ ಘಟ್ಟದಲ್ಲಿ ನಮ್ಮ ಬ್ಯಾಟರ್‌ಗಳು ವಿಕೆಟ್ ಕಳೆದುಕೊಂಡಾಗ ಮತ್ತು ಸ್ಪಿನ್ನರ್‌ಗಳು ನೋ ಬಾಲ್ ಎಸೆದಾಗ. ನಾವು ಒತ್ತಡದ ಸಂದರ್ಭವನ್ನು ಮೆಟ್ಟಿನಿಲ್ಲಬೇಕಾಗಿತ್ತು ಎಂಬುದನ್ನು ಇದು ಸಾಬೀತುಪಡಿಸುತ್ತದೆ" ಎಂದಿದ್ದಾರೆ ಬಾಂಗ್ಲಾದೇಶ ತಂಡದ ನಾಯಕ.

"ಬೌಲಿಂಗ್‌ನಲ್ಲಿ ಕೌಶಲ್ಯ ಮತ್ತಷ್ಟು ಬೇಕು"

ಇನ್ನು ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಬೌಲಿಂಗ್ ಕೌಶಲ್ಯದ ಬಗ್ಗೆ ಸ್ವತಃ ನಾಯಕ ಶಕೀಬ್ ಅಲ್ ಹಸನ್ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಕೌಶಲ್ಯದ ವಿಚಾರವಾಗಿ ಬೆಳವಣಿಗೆಯನ್ನು ಸಾಧಿಸಲೇಬೇಕಿದೆ. ಅಲ್ಲದೆ ಯಾವಾಗೆಲ್ಲಾ ನಾವು ಒತ್ತಡವನ್ನು ಅನುಭವಿಸುತ್ತೇವೋ ಆಗ ಪಂದ್ಯವನ್ನು ಸೋಲುತ್ತೇವೆ. ಡೆತ್ ಓವರ್‌ನಲ್ಲಿ ಬೌಲಿಂಗ್‌ನ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕು" ಎಂದಿದ್ದಾರೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್.

Asiacup 2022: ಟೀಮ್ ಇಂಡಿಯಾದ ನಾಲ್ಕು ದೊಡ್ಡ ನ್ಯೂನತೆಗಳು || Big Flaws of Team India | *Cricket | OneIndia
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಶ್ರೀಲಂಕಾ ಪ್ಲೇಯಿಂಗ್ XI: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ಅಶೇನ್ ಬಂಡಾರ, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಣ

ಬಾಂಗ್ಲಾದೇಶ ಪ್ಲೇಯಿಂಗ್ XI: ಸಬ್ಬಿರ್ ರೆಹಮಾನ್, ಮೊಸದ್ದೆಕ್ ಹೊಸೈನ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್
ಬೆಂಚ್: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಪರ್ವೇಜ್ ಹುಸೇನ್ ಎಮನ್

Story first published: Friday, September 2, 2022, 14:20 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X