ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022 SL vs BAN: ಶ್ರೀಲಂಕಾಗೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

Asia Cup 2022 SL vs BAN: Sri Lanka Needs To Win 184 Runs Against Bangladesh

ಸದ್ಯ ಯುಎಇಯಲ್ಲಿ ನಡೆಯುತ್ತಿರುವ 2022ರ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಬಿ ಗುಂಪಿನ ಹಣಾಹಣಿಯಲ್ಲಿ ಇಂದು (ಗುರುವಾರ, ಆಗಸ್ಟ್ 1) ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪರಸ್ಪರ ಸೆಣಸಾಡುತ್ತಿವೆ.

ಉಭಯ ತಂಡಗಳು ತಮ್ಮ ಆರಂಭಿಕ ಹಣಾಹಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನ್ನು ಕಂಡಿದ್ದು, ಇದೀಗ ತಮ್ಮ ಮೊದಲ ಗೆಲುವು ಕಾಣಲು ಎದುರು ನೋಡುತ್ತಿದ್ದು, ಇಂದಿನ ಹಣಾಹಣಿಯ ವಿಜೇತರು ಸೂಪರ್ 4 ಹಂತದಲ್ಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿದ್ದು, ಶ್ರೀಲಂಕಾ ಗೆಲ್ಲಲು 184 ರನ್‌ಗಳ ಗುರಿಯನ್ನು ನೀಡಿದೆ.

Asia Cup 2022: ವಿರಾಟ್ ಕೊಹ್ಲಿ ಅಲ್ಲ, ಈತ 3ನೇ ಕ್ರಮಾಂಕದಲ್ಲಿ ಆಡಲಿ; ಗೌತಮ್ ಗಂಭೀರ್Asia Cup 2022: ವಿರಾಟ್ ಕೊಹ್ಲಿ ಅಲ್ಲ, ಈತ 3ನೇ ಕ್ರಮಾಂಕದಲ್ಲಿ ಆಡಲಿ; ಗೌತಮ್ ಗಂಭೀರ್

ಅಫೀಫ್ ಹೊಸೈನ್ ಮತ್ತು ಮೆಹಿದಿ ಹಸನ್ ಮಿರಾಜ್ ಅವರು 39 ಮತ್ತು 38 ರನ್‌ಗಳ ಕೊಡಗೆ ನಿಡಿದ ಕಾರಣ ಏಷ್ಯಾ ಕಪ್ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗೆ 183 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಬಾಂಗ್ಲಾದೇಶ 4 ವಿಕೆಟ್‌ಗೆ 87 ರನ್‌ಗೆ ತತ್ತರಿಸುತ್ತಿರುವಾಗ ಅಫೀಫ್ ಹೊಸೈನ್ ಅವರು ಮಹಮ್ಮದುಲ್ಲಾ ಅವರೊಂದಿಗೆ 57 ರನ್ ಜೊತೆಯಾಟ ನಡೆಸಿದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಪತನಗೊಂಡರೂ ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ನೀಡಿದರು. ಮಹಮ್ಮದುಲ್ಲಾ 27 ರನ್ ಗಳಿಸಿದರೆ, ಮೊಸಾದೆಕ್ ಹೊಸೈನ್ 24 ರನ್ ಗಳಿಸಿದರು.

ಚೊಚ್ಚಲ ಪಂದ್ಯ ಆಡುತ್ತಿರುವ ಅಸಿತಾ ಫೆರ್ನಾಂಡೋ ಅವರು ಶಬ್ಬಿರ್ ರೆಹಮಾನ್ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಮೊದಲ ಮುನ್ನಡೆಯನ್ನು ಒದಗಿಸಿದ್ದರು. ಐದು ರನ್ ಗಳಿಸಿದ ನಂತರ ಬ್ಯಾಟರ್ ಶಬ್ಬಿರ್ ರೆಹಮಾನ್ ನಿರ್ಗಮಿಸಿದರು.

Asia Cup 2022: ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ, ಲೈವ್ ಸ್ಕೋರ್Asia Cup 2022: ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ, ಲೈವ್ ಸ್ಕೋರ್

ನಾಲ್ಕು ರನ್ ಗಳಿಸಿದ್ದಾಗ ಕುಸಾಲ್ ಮೆಂಡಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಮುಶ್ಫಿಕರ್ ರಹೀಮ್ ಅವರನ್ನು ಚಮಿಕಾ ಕರುಣಾರತ್ನೆ ಔಟ್ ಮಾಡಿದರು. ಇದಕ್ಕೂ ಮುನ್ನ 38 ರನ್‌ ಗಳಿಸಿ ಅಪಾಯಕಾರಿಯಾಗಿದ್ದ ಮೆಹಿದಿ ಹಸನ್ ಮಿರಾಜ್ ಅವರನ್ನು ವನಿಂದು ಹಸರಂಗ ಔಟ್ ಮಾಡಿದರು. ಪ್ರಸ್ತುತ, 9.0 ಓವರ್‌ಗಳ ನಂತರ ಬಾಂಗ್ಲಾದೇಶ ಸ್ಕೋರ್ 70/3 ಆಗಿತ್ತು.

ಏಷ್ಯಾಕಪ್ ಬಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. 24 ರನ್ ಗಳಿಸಿದ್ದಾಗ ಬಾಂಗ್ಲಾದೇಶದ ನಾಯಕ ಶಕಿನ್ ಅಲ್ ಹಸನ್ ಅವರನ್ನು ಮಹೀಶ್ ತೀಕ್ಷಣ ಔಟ್ ಮಾಡಿದರು.

ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾದ ಚಮಿಕಾ ಕರುಣಾರತ್ನೆ ನಾಲ್ಕು ಓವರ್‌ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದರು. ವನಿಂದು ಹಸರಂಗಾ ನಾಲ್ಕು ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ ಮತ್ತು ಅಸೀತಾ ಫರ್ನಾಂಡೊ ತಲಾ ಒಂದು ವಿಕೆಟ್ ಪಡೆದರು.

Asia Cup 2022: ಈತನೇ ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್Asia Cup 2022: ಈತನೇ ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್

ಇದಕ್ಕೂ ಮುನ್ನ ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಉಭಯ ತಂಡಗಳು ತಮ್ಮ ಆರಂಭಿಕ ಹಣಾಹಣಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲನ್ನು ಎದುರಿಸಿದ್ದು, ಇದೀಗ ತಮ್ಮ ಮೊದಲ ಗೆಲುವಿನತ್ತ ಎದುರು ನೋಡುತ್ತಿವೆ. ಇಂದಿನ ಹಣಾಹಣಿಯ ವಿಜೇತರು ಸೂಪರ್ 4 ಹಂತದಲ್ಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ಆಡುವ 11ರ ಬಳಗ
ಶ್ರೀಲಂಕಾ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗಾ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಅಸೀತಾ ಫರ್ನಾಂಡೊ

ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್.

Story first published: Thursday, September 1, 2022, 21:40 [IST]
Other articles published on Sep 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X