ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia cup 2022: ಬಾಂಗ್ಲಾ ವಿರುದ್ಧ ರಹಸ್ಯ ಕೋಡ್ ಅನ್ನು ಬಳಸಿದ ಶ್ರೀಲಂಕಾದ ಹೆಡ್ ಕೋಚ್‌

Srilanka vs Bangladesh

ಏಷ್ಯಾಕಪ್‌ 2022ರ ಗ್ರೂಪ್ ಬಿ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ರೋಚಕವಾಗಿ ಪಂದ್ಯ ಗೆಲ್ಲುವ ಮೂಲಕ ಸೂಪರ್ 4 ಅನ್ನು ಪ್ರವೇಶಿಸಿದೆ. ಬಾಂಗ್ಲಾದೇಶ ನೀಡಿದ್ದ 184 ರನ್‌ಗಳ ಗುರಿಯನ್ನ ಬೆಂಬಿಡದೆ ಬೆನ್ನತ್ತಿದ ಲಂಕನ್ನರು, ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಜಯಿಸಿದೆ.

ಏಷ್ಯನ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಹೊಸ ತಂತ್ರವನ್ನು ಅಳವಡಿಸಿಕೊಂಡಿದೆ. ಈ ಹಿಂದೆ ಸಹ ಆಟಗಾರರು ತಪ್ಪು ಮಾಡಿದರೆ ಕೋಚ್‌ಗಳು ಆಟಗಾರರಿಗೆ ಡ್ರೆಸ್ಸಿಂಗ್ ರೂಂನಿಂದಲೇ ಇಲ್ಲವೇ ಡಗೌಟ್‌ನಿಂದಲೇ ಸಂದೇಶ ನೀಡುತ್ತಿದ್ದರು.

ಹೊಸ ಮಾದರಿಯಲ್ಲಿ ಸಂದೇಶ ನೀಡುವ ಕ್ರಿಸ್ ಸಿಲ್ವರ್‌ವುಡ್‌

ಹೊಸ ಮಾದರಿಯಲ್ಲಿ ಸಂದೇಶ ನೀಡುವ ಕ್ರಿಸ್ ಸಿಲ್ವರ್‌ವುಡ್‌

ಟಿ20 ಕ್ರಿಕೆಟ್‌ನಲ್ಲಿ ಆಟದ ವಾತಾವರಣವು ಓವರ್‌ನಿಂದ ಓವರ್‌ಗೆ ಬದಲಾಗುತ್ತದೆ. ಈ ಹಿಂದೆ ಡ್ರಿಂಕ್ಸ್‌ ಬ್ರೇಕ್‌ನಲ್ಲಿ, ಇಲ್ಲವೆ ನೀರಿನ ಬಾಟಲಿಗಳೊಂದಿಗೆ ಹೆಚ್ಚುವರಿ ಆಟಗಾರರ ಮೂಲಕ ಕ್ರೀಸ್‌ನಲ್ಲಿದ್ದ ಆಟಗಾರರಿಗೆ ಸಂದೇಶಗಳನ್ನು ತಲುಪಿಸುವ ದಿನಗಳು ಮುಗಿದಿವೆ. ಈ ಹಂತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಬಂದಿದೆ. ಇಂಗ್ಲೆಂಡ್ ತಂಡದ ಕೋಚ್ ಆಗಿದ್ದ ಕ್ರಿಸ್ ಸಿಲ್ವರ್ ವುಡ್ ಎರಡು ಕಾಗದದ ಮೇಲೆ ಅಕ್ಷರ ಮತ್ತು ಸಂಖ್ಯೆಯನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಈ ರಹಸ್ಯ ಪದಗಳನ್ನು ಬಳಸಿ ಕ್ಯಾಪ್ಟನ್ ಅದಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾನೆ.

Asia Cup 2022: ರೋಹಿತ್ ಶರ್ಮಾ ದುರ್ಬಲವಾಗಿ ಕಾಣುತ್ತಿದ್ದಾರೆ ಎಂದ ಪಾಕ್ ಮಾಜಿ ನಾಯಕ

ಇಂಗ್ಲೆಂಡ್ ಕೋಚ್ ಆಗಿದ್ದಾಗಲೂ ಇದೇ ರೀತಿಯಲ್ಲಿ ಕೋಡ್ ಬಳಸುತ್ತಿದ್ದ ಸಿಲ್ವರ್‌ವುಡ್‌

ಪ್ರಸ್ತುತ, ಕ್ರಿಸ್ ಸಿಲ್ವರ್‌ವುಡ್‌ ಶ್ರೀಲಂಕಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೊದಲು ಇಂಗ್ಲೆಂಡ್ ಕೋಚ್ ಆಗಿದ್ದಾಗಲೂ ಇದೇ ರೀತಿಯ ತಂತ್ರಗಾರಿಕೆಯನ್ನ ಸಿಲ್ವರ್‌ವುಡ್ ಮಾಡುತ್ತಿದ್ದರು. ಹೀಗಾಗಿ ಶ್ರೀಲಂಕಾ ತಂಡಕ್ಕೂ ತಮ್ಮ ತಂತ್ರಗಾರಿಕೆಯನ್ನು ಜಾರಿಗೆ ತಂದಿದ್ದಾರೆ. ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಪೇಪರ್ ಮೇಲೆ 2 D ಎನ್ನುವ ಅಕ್ಷರಗಳು ಕಾಣುತ್ತಿತ್ತು. ಇದರ ಅರ್ಥವೇನೆಂದು ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕ್ರಿಸ್‌ ಸಿಲ್ವರ್‌ವುಡ್‌ ಈ ರೀತಿಯಾಗಿ ನೀಡಿರುವ ರಹಸ್ಯ ಸಂದೇಶಗಳನೇನು ಎಂಬುದನ್ನ ಅಭಿಮಾನಿಗಳು ಡಿಕೋಡ್ ಮಾಡುತ್ತಿದ್ದಾರೆ. D5 ಎಂದು ಕರೆಯಲ್ಪಡುವ ಇದೇ ರೀತಿಯ ಕೋಟ್ ಅನ್ನು ಕ್ರಿಸ್ ಸಿಲ್ವರ್‌ವುಡ್‌ ಕೂಡ ಬಳಸಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕ್ರಿಸ್‌ ಈ ರೀತಿಯಾದ ಬಳಕೆಗೆ ಕಾರಣವೇನು ಎಂಬುದನ್ನ ಹುಡುಕಲಾಗುತ್ತಿದೆ.

ರೋಚಕ ಗೆಲುವಿನ ಬಳಿಕ ಬಾಂಗ್ಲಾದೇಶವನ್ನು 'ನಾಗಿಣಿ ಡಾನ್ಸ್' ಮೂಲಕ ಕುಟುಕಿದ ಲಂಕಾ ಕ್ರಿಕೆಟರ್!

Asiacup 2022: ಟೀಮ್ ಇಂಡಿಯಾದ ನಾಲ್ಕು ದೊಡ್ಡ ನ್ಯೂನತೆಗಳು || Big Flaws of Team India | *Cricket | OneIndia
2 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದ ಶ್ರೀಲಂಕಾ

2 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದ ಶ್ರೀಲಂಕಾ

ದಸನು ಶನಕ ನೇತೃತ್ವದ ಶ್ರೀಲಂಕಾ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 184 ರನ್‌ಗಳ ಸವಾಲಿನ ಗುರಿ ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ಸಫಲವಾದ ಶ್ರೀಲಂಕಾ 19.2 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ 2 ವಿಕೆಟ್‌ಗಳ ರೋಚಕ ದಾಖಲಿಸಿತು.

ಶ್ರೀಲಂಕಾ ಪರ ಓಪನರ್ ಕುಸಾಲ್ ಮೆಂಡೀಸ್ 37 ಎಸೆತಗಳಲ್ಲಿ 60 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡಿದ್ದವು. ಇನ್ನು ನಾಯಕ ದಸನು ಶನಕ 45, ಚಮಿಕಾ ಕರುಣರತ್ನೆ 16, ಅಸಿತಾ ಫರ್ನಾಂಡೊ 3 ಎಸೆತಗಳಲ್ಲಿ ಅಜೇಯ 10ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನ ಮೂಲಕ ಶ್ರೀಲಂಕಾ ಶ್ರೀಲಂಕಾ ತಂಡವು ಸೂಪರ್ 4 ಪ್ರವೇಶಿಸಿದೆ.

Story first published: Friday, September 2, 2022, 13:13 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X