ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಸೂಪರ್ 4ನಲ್ಲಿ ಭಾರತದ ವಿರುದ್ಧ ಮತ್ತೆ ಆಡಲಿದೆ ಪಾಕ್; ಸೂಪರ್ 4 ವೇಳಾಪಟ್ಟಿ ಇಲ್ಲಿದೆ

Asia Cup 2022: Super 4 rounds complete schedule after Pakistan get qualified

ಇಂದು ( ಸೆಪ್ಟೆಂಬರ್ 2 ) ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಹಾಂಗ್‌ ಕಾಂಗ್ ವಿರುದ್ಧ ರನ್‌ಗಳ ಬೃಹತ್ ಜಯವನ್ನು ಸಾಧಿಸಿದ ಪಾಕಿಸ್ತಾನ ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿದೆ. ಈ ಮೂಲಕ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ, ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ಈ ನಾಲ್ಕು ತಂಡಗಳು ಸೂಪರ್ 4 ಸುತ್ತಿನಲ್ಲಿ ಕಣಿಯಲಿವೆ.

Asia Cup 2022: ಹಾಂಕಾಂಗ್ ಕೇವಲ 38 ರನ್‌ಗೆ ಆಲ್ಔಟ್; ಸೂಪರ್ 4ಗೆ ಪಾಕಿಸ್ತಾನ ಎಂಟ್ರಿ!Asia Cup 2022: ಹಾಂಕಾಂಗ್ ಕೇವಲ 38 ರನ್‌ಗೆ ಆಲ್ಔಟ್; ಸೂಪರ್ 4ಗೆ ಪಾಕಿಸ್ತಾನ ಎಂಟ್ರಿ!

ನಾಳೆ ( ಸೆಪ್ಟೆಂಬರ್ 3 ) ನಡೆಯಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಮೂಲಕವೇ ಸೂಪರ್ 4 ಸುತ್ತಿನ ಹಣಾಹಣಿಗಳು ಆರಂಭವಾಗಲಿದ್ದು, ಸೂಪರ್ 4 ಪ್ರವೇಶಿಸಿರುವ 4 ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಕಣಕ್ಕಿಳಿಯಲಿವೆ. ಸೂಪರ್ 4 ಸುತ್ತಿನಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 9ರಂದು ನಡೆಯಲಿರುವ ಪಂದ್ಯದ ಮೂಲಕ ಸೂಪರ್ 4 ಸುತ್ತು ಮುಕ್ತಾಯಗೊಳ್ಳಲಿದೆ.

Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!

ಈ ಸೂಪರ್ 4 ಸುತ್ತಿನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಫೈನಲ್ ಪಂದ್ಯಕ್ಕೆ ಆಯ್ಕೆಯಾಗಲಿವೆ. ಇನ್ನು ಅಂತಿಮವಾಗಿ ಸೂಪರ್ 4 ಸುತ್ತಿಗೆ ಪ್ರವೇಶಿಸಿರುವ ಪಾಕಿಸ್ತಾನ ಮತ್ತೊಮ್ಮೆ ಭಾರತ ತಂಡವನ್ನು ಎದುರಿಸಲಿದ್ದು ಸೂಪರ್ 4 ಸುತ್ತು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಹೀಗೆ ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯಗೊಂಡ ನಂತರ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಸುತ್ತಿನಲ್ಲಿ ಯಾವ ತಂಡಗಳು ಯಾವ ತಂಡಗಳ ವಿರುದ್ಧ ಯಾವ ದಿನದಂದು ಮುಕ್ತಾಯವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಸೂಪರ್ 4 ವೇಳಾಪಟ್ಟಿ

ಸೂಪರ್ 4 ವೇಳಾಪಟ್ಟಿ

ಪಂದ್ಯ 1, ಸೆಪ್ಟೆಂಬರ್ 3: ಅಫ್ಘಾನಿಸ್ತಾನ vs ಶ್ರೀಲಂಕಾ, ಶಾರ್ಜಾ, 7:30PM IST

ಪಂದ್ಯ 2, ಸೆಪ್ಟೆಂಬರ್ 4: ಭಾರತ vs ಪಾಕಿಸ್ತಾನ, ದುಬೈ, 7:30PM IST

ಪಂದ್ಯ 3, ಸೆಪ್ಟೆಂಬರ್ 6: ಶ್ರೀಲಂಕಾ vs ಭಾರತ, ದುಬೈ, 7:30PM IST

ಪಂದ್ಯ 4, ಸೆಪ್ಟೆಂಬರ್ 7: ಪಾಕಿಸ್ತಾನ vs ಅಫ್ಘಾನಿಸ್ತಾನ, ಶಾರ್ಜಾ, 7:30PM IST

ಪಂದ್ಯ 5, ಸೆಪ್ಟೆಂಬರ್ 8: ಭಾರತ ವಿರುದ್ಧ ಅಫ್ಘಾನಿಸ್ತಾನ, ದುಬೈ, 7:30PM IST

ಪಂದ್ಯ 6, ಸೆಪ್ಟೆಂಬರ್ 9: ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ದುಬೈ, 7:30PM IST

ಭಾನುವಾರ ಭಾರತ ಮತ್ತು ಪಾಕ್ ಮುಖಾಮುಖಿ

ಭಾನುವಾರ ಭಾರತ ಮತ್ತು ಪಾಕ್ ಮುಖಾಮುಖಿ

ಈ ಹಿಂದೆ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಸುತ್ತಿನಲ್ಲಿ ಸೆಪ್ಟೆಂಬರ್ 4ರಂದು ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಇದು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ತಂಡಗಳ ನಡುವಿನ ಎರಡನೇ ಮುಖಾಮುಖಿಯಾಗಿದೆ. ಒಂದುವೇಳೆ ಈ ಸೂಪರ್ 4 ಸುತ್ತಿನ ಅಂಕಪಟ್ಟಿಯಲ್ಲಿ ಭಾರತ ಮತ್ತು ಪಾಕ್ ಟಾಪ್ ಸ್ಥಾನಗಳನ್ನು ಪಡೆದುಕೊಂಡರೆ ಫೈನಲ್ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗಲಿವೆ.

ಸೂಪರ್ 4 ತಂಡಗಳ ಸ್ಕ್ವಾಡ್

ಸೂಪರ್ 4 ತಂಡಗಳ ಸ್ಕ್ವಾಡ್

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.

ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ದು ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದಾರೆ.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸನೈನ್, ಹಸನ್ ಅಲಿ.

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಝಲ್ಹಕ್ ಫಾರೂಕಿ, ಹಸ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜೀಬ್ ನವ್ರನ್, ಮುಜೀಬ್ ನವ್ರನ್, ಮುಜೀಬ್, ನವ್ರನ್, ಮುಜೀಬ್, ನವ್ರನ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ.

ಮೀಸಲು ಆಟಗಾರರು: ನಿಜತ್ ಮಸೂದ್, ಖೈಸ್ ಅಹ್ಮದ್, ಶರಫುದ್ದೀನ್ ಅಶ್ರಫ್.

ದಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾಡು ಪಾಷಾಣ, ಚಾಮಿಕ ಕರುಣಾಡು ಪಾಷಾಣ, ದ.ಕ. ಫೆರ್ನಾಂಡೊ, ನುವಾನ್ ತುಸಾರ, ದಿನೇಶ್ ಚಾಂಡಿಮಲ್.

Story first published: Saturday, September 3, 2022, 11:27 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X