ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್: ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಫಿಟ್‌ನೆಸ್ ಟೆಸ್ಟ್; ಯಾವಾಗ ಯುಎಇ ಪ್ರಯಾಣ?

Asia Cup 2022: Team India to undergo fitness test in NCA Bengaluru before flying to Dubai

ಒಂದೆಡೆ ಕೆಎಲ್ ರಾಹುಲ್ ನಾಯಕತ್ವದಡಿಯಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಏಷ್ಯಾಕಪ್ ಆಡಲಿರುವ ಕೆಲ ಆಟಗಾರರು ಈ ಸರಣಿಯಿಂದ ಹೊರಗುಳಿದು ವಿಶ್ರಾಂತಿಯಲ್ಲಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಚಟುವಟಿಕೆಗಳು ಗರಿಗೆದರಿವೆ. ಇದೇ ತಿಂಗಳ 28ರಂದು ನಡೆಯಲಿರುವ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ತನ್ನ ಏಷ್ಯಾಕಪ್ ಭಾಗವಹಿಸುವಿಕೆಯನ್ನು ಆರಂಭಿಸಲಿದ್ದು, ಈ ಬಾರಿಯೂ ಸಹ ಚಾಂಪಿಯನ್ ಆಗಿ ಹೊರಹೊಮ್ಮಿ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದರ ಜತೆಗೆ ಸತತ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವತ್ತ ಚಿತ್ತ ನೆಟ್ಟಿದೆ.

Asia Cup 2022: 12 ದಿನ ತಡವಾಗಿ ಕೊನೆಗೂ ಏಷ್ಯಾಕಪ್‌ಗೆ 20 ಆಟಗಾರರ ತಂಡ ಪ್ರಕಟಿಸಿದ ಶ್ರೀಲಂಕಾ!Asia Cup 2022: 12 ದಿನ ತಡವಾಗಿ ಕೊನೆಗೂ ಏಷ್ಯಾಕಪ್‌ಗೆ 20 ಆಟಗಾರರ ತಂಡ ಪ್ರಕಟಿಸಿದ ಶ್ರೀಲಂಕಾ!

ಇನ್ನು ಮೊದಲಿಗೆ ಶ್ರೀಲಂಕಾದಲ್ಲಿ ಆಯೋಜನೆಯಾಗಿದ್ದ ಈ ಬಾರಿಯ ಏಷ್ಯಾಕಪ್ ಟೂರ್ನಿ ಲಂಕಾದ ಆರ್ಥಿಕ ಸಮಸ್ಯೆಯ ಕಾರಣ ಯುಎಇಗೆ ಸ್ಥಳಾಂತರಗೊಂಡಿದ್ದು, ಟೂರ್ನಿಯ ಮೊದಲ ಪಂದ್ಯ ಆಗಸ್ಟ್ 27ರಂದು ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯಲಿದೆ. ಬಿಸಿಸಿಐ ಏಷ್ಯಾಕಪ್ ಟೂರ್ನಿಗೆ ಹದಿನೈದು ಆಟಗಾರರನ್ನು ಈಗಾಗಲೇ ಪ್ರಕಟಿಸಿದ್ದು, ಕೆಲ ಆಟಗಾರರು ಜಿಂಬಾಬ್ವೆ ಸರಣಿಯಲ್ಲಿ ನಿರತರಾಗಿದ್ದು, ಉಳಿದ ಆಟಗಾರರು ಇಂದು ( ಆಗಸ್ಟ್ 20 ) ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ತಲುಪಿ ದುಬೈಗೆ ಹಾರುವ ಮುನ್ನ ಸಣ್ಣ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಕುರಿತಾದ ಮಾಹಿತಿ ಕೆಳಕಂಡಂತಿದೆ.

ದ್ರಾವಿಡ್ ನೇತೃತ್ವದಲ್ಲಿ ಫಿಟ್‌ನೆಸ್ ಪರೀಕ್ಷೆ

ದ್ರಾವಿಡ್ ನೇತೃತ್ವದಲ್ಲಿ ಫಿಟ್‌ನೆಸ್ ಪರೀಕ್ಷೆ

ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಆಟಗಾರರು ಕಿರು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದು, ಈ ಪರೀಕ್ಷೆ ಮುಕ್ತಾಯವಾದ ನಂತರ ಮುಂದಿನ ಬುಧವಾರ ( ಆಗಸ್ಟ್ 24 ) ದುಬೈ ತಲುಪಲಿದ್ದಾರೆ. ಇನ್ನು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ದುಬೈನಲ್ಲಿ ಟೀಮ್ ಇಂಡಿಯಾದ ಫಿಟ್‌ನೆಸ್ ಕ್ಯಾಂಪ್ ಇರಲಿದೆ ಎಂಬ ಮಾಹಿತಿಯೂ ಸಹ ಹೊರಬಿದ್ದಿದೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ದೀಪಕ್ ಚಹರ್, ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಐಯ್ಯರ್

ಏಷ್ಯಾಕಪ್ ವೇಳಾಪಟ್ಟಿ

ಏಷ್ಯಾಕಪ್ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)

28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)

30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)

31 ಆಗಸ್ಟ್‌: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)

1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)

2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)

3 ಸೆಪ್ಟೆಂಬರ್: B1 vs B2 (ಶಾರ್ಜಾ)

4 ಸೆಪ್ಟೆಂಬರ್: A1 vs A2 (ದುಬೈ)

6 ಸೆಪ್ಟೆಂಬರ್: A1 vs B1 (ದುಬೈ)

7 ಸೆಪ್ಟೆಂಬರ್: A2 vs B2 (ದುಬೈ)

8 ಸೆಪ್ಟೆಂಬರ್: A1 vs B2 (ದುಬೈ)

9 ಸೆಪ್ಟೆಂಬರ್: B1 vs A2 (ದುಬೈ)

11 ಸೆಪ್ಟೆಂಬರ್: ಫೈನಲ್‌ (ದುಬೈ)

Story first published: Saturday, August 20, 2022, 18:01 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X