ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಈ ಆವೃತ್ತಿಯಲ್ಲಿ ಧ್ವಂಸವಾಗಲಿದೆ ಏಷ್ಯಾ ಕಪ್‌ನ ಈ ಮೂರು ದಾಖಲೆಗಳು!

Asia Cup 2022: These three records could broken broken in this Asia Cup tourney

ಆಗಸ್ಟ್ 27ರಿಂದ ಯುಎಇನಲ್ಲಿ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು ಕುತೂಹಲಕಾರಿ ಕದನವನ್ನು ನಡೆಸಲಿದೆ. 2016 ಹಾಗೂ 2018ರ ಏಷ್ಯಾಕಪ್ ಟೂರ್ನಿಯನ್ನು ಗೆದ್ದಿರುವ ಭಾರತ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ.

1984ರಿಂದ ಈ ಏಷ್ಯಾಕಪ್ ಟೂರ್ನಿ ಆರಂಭವಾಗಿದ್ದು ಈವರೆಗೆ 1 ಆವೃತ್ತಿಗಳು ನಡೆದಿದೆ. ಇದರಲ್ಲಿ ಅತಿ ಹೆಚ್ಚು ಬಾರಿ ಭಾರತ ತಂಡ ಗೆಲುವು ಸಾಧಿಸಿದ್ದು ಏಷ್ಯಾಕಪ್‌ನ ಯಶಸ್ವಿ ತಂಡ ಎನಿಸಿದೆ. ಇನ್ನು ಏಷ್ಯಾದ ಪ್ರಮುಖ ತಂಡಗಳು ಮಾತ್ರವೇ ಭಾಗವಹಿಸುವ ಟೂರ್ನಿ ಇದಾಗಿದ್ದು ಇದರಲ್ಲಿ ಸಾಕಷ್ಟು ದಾಖಲೆಗಳು ಈ ಟೂರ್ನಿಯಲ್ಲಿ ಈವರೆಗೆ ನಿರ್ಮಾಣವಾಗಿದೆ. ಇನ್ನು ಈ ಟೂರ್ನಿಯಲ್ಲಿ ದಾಖಲಾಗಿರುವ ಕೆಲ ಪ್ರಮುಖ ದಾಖಲೆಗಳು ಈ ಬಾರಿಯ ಆವೃತ್ತಿಯಲ್ಲಿ ಮುರಿಯುವ ಸಾಧ್ಯತೆಗಳು ದಟ್ಟವಾಗಿದೆ. ಅಂಥಾ ಮೂರು ಪ್ರಮುಖ ದಾಖಲೆಗಳ ಮಾಹಿತಿ ಇಲ್ಲಿದೆ.

ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!

ಜಯಸೂರ್ಯ ಹೆಸರಿನಲ್ಲಿರುವ ದಾಖಲೆ

ಜಯಸೂರ್ಯ ಹೆಸರಿನಲ್ಲಿರುವ ದಾಖಲೆ

ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ದಾಖಲೆ ಪ್ರಸ್ತುತ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಹೆಸರಿನಲ್ಲಿದೆ. 1990ರಿಂದ 2008ರವರೆಗೆ ಏಷ್ಯಾ ಕಪ್‌ನ್ಲಲಿ ಆಡಿರುವ ಜಯಸೂರ್ಯ 25 ಪಂದ್ಯಗಳನ್ನು ಈ ಟೂರ್ನಿಯಲ್ಲಿ ಆಡಿದ್ದು ಇದರಲ್ಲಿ 1220 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕ ಹಾಗೂ ಆರು ಶತಕಗಳು ಸೇರಿದೆ. ಈ ಬಾರಿ ಈ ದಾಖಲೆ ಮುರಿಯುವ ಸಾಧ್ಯತೆಯಿದೆ. ಭಾರತದ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಈ ದಾಖಲೆ ಮುರಿಯುವ ಅವಕಾಶಗಳಿದೆ. 2008ರಿಂದ ಏಷ್ಯಾ ಕಪ್‌ನಲ್ಲಿ ಆಡುತ್ತಿರುವ ರೋಹಿತ್ ಶರ್ಮಾ 883 ರನ್‌ಗಳನ್ನು ಗಳಿಸಿದ್ದಾರೆ. ಇನ್ನು 2010ರಿಂದ ಏಷ್ಯಾ ಕಪ್‌ನಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ 766 ರನ್‌ಗಳನ್ನು ಗಳಿಸಿದ್ದಾರೆ. ಈ ಇಬ್ಬರು ಕೂಡ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಲು ಸಾಧ್ಯವಾದರೆ ಈ ದಾಖಲೆ ಮುರಿಯುವ ಅವಕಾಶಗಳಿದೆ.

ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ದಾಖಲೆ

ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ದಾಖಲೆ

ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಪ್ರಸ್ತುತ ಶ್ರೀಲಂಕಾದ ದಿಗ್ಗಜ ಬೌಲರ್ ಲಸಿತ್ ಮಲಿಂಗಾ ಹೆಸರಿನಲ್ಲಿದೆ. 29 ಪಂದ್ಯಗಳನ್ನು ಆಡಿರುವ ಲಸಿತ್ ಮಲಿಂಗಾ 33 ವಿಕೆಟ್ ಸಂಪಾದಿಸಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಈ ದಾಖಲೆ ಮುರಿಯುವ ಅವಕಾಶ ಇಬ್ಬರು ಆಟಗಾರರಿಗೆ ಇದೆ. ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಹಾಘೂ ಭಾರತದ ಆಲ್‌ರೌಂಡರ್ ರವಿಂದ್ರ ಜಡೇಜಾಗೆ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ. 24 ವಿಕೆಟ್‌ಗಳನ್ನು ಏಷ್ಯಾ ಕಪ್‌ನಲ್ಲಿ ಪಡೆದುಕೊಂಡಿದ್ದು ರವೀಂದ್ರ ಜಡೇಜಾ 22 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಯುಎಇನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದರೆ ಈ ಇಬ್ಬರು ಆಟಗಾರರ ಪೈಕಿ ಯಾರಾದರೂ ಈ ದಾಖಲೆ ಮುರಿಯುವ ಅದ್ಭುತ ಅವಕಾಶವಿದೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್

ಏಷ್ಯಾ ಕಪ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ, ಶಾಹಿದ್ ಅಫ್ರಿದಿ ಹಾಗೂ ಶಕೀಬ್ ಅಲ್ ಹಸನ್ 300ಕ್ಕೂ ಅಧಿಕ ರನ್ ಹಾಗೂ 15ಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ ಆಟಗಾರರು ಎನಿಸಿದ್ದಾರೆ. ನಾಲ್ವರ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸುವ ಅವಕಾಶ ಶಕೀಬ್ ಅಲ್ ಹಸನ್‌ಗೆ ಇದೆ. ಆದರೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಸನತ್ ಜಯಸೂರ್ಯ ಹಾಗೂ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯುವುದು ಶಕೀಬ್‌ಗೆ ಅಸಾಧ್ಯ. 2010ರಿಂದ ಏಷ್ಯಾ ಕಪ್‌ನಲ್ಲಿ ಭಾಗಿಯಾಗುತ್ತಿರುವ ಶಕೀಬ್ ಅಲ್ ಹಸನ್ 402 ರನ್‌ಗಳನ್ನು ಗಳಿಸಿದ್ದಾರೆ. ಹೆಚ್ಚೆಂದರೆ 32 ರನ್‌ಗಳಿಸಿರುವ ಶಾಹಿದ್ ಅಫ್ರಿದಿಯನ್ನು ಈ ಪಟ್ಟಿಯಲ್ಲಿ ಶಕೀಬ್ ಹಿಂದಿಕ್ಕುವ ಸಾಧ್ಯತೆಯಿದೆ.

Story first published: Sunday, August 14, 2022, 10:53 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X