ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ 2022: ಈ ಐವರನ್ನು ಕಡೆಗಣಿಸಿ ತಪ್ಪು ಮಾಡಿತೇ ಟೀಂ ಇಂಡಿಯಾ!

Team india

ಆಗಸ್ಟ್ 28ರಿಂದ ಆರಂಭಗೊಳ್ಳುವ ಬಹು ನಿರೀಕ್ಷಿತ ಏಷ್ಯಾಕಪ್‌ ಟೂರ್ನಮೆಂಟ್‌ಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ಬಿಸಿಸಿಐ 15 ಸದಸ್ಯರನ್ನೊಳಗೊಂಡ ತಂಡ ಪ್ರಕಟಿಸಿದೆ. ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ, ಸ್ಟಾರ್ ಓಪನರ್ ಕೆ.ಎಲ್ ರಾಹುಲ್ ಕಂಬ್ಯಾಕ್ ಆಗಿದ್ದು ಕೆಲವು ಅಚ್ಚರಿಕೆಯ ಆಯ್ಕೆಯು ಸಹ ಆಗಿದೆ.

ಭಾರತದ ಏಸ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮೊಹಮ್ಮದ್ ಶಮಿ ಕೂಡ ತಂಡದಿಂದ ಹೊರಗುಳಿದಿರುವುದು ಆಶ್ಚರ್ಯ ಮೂಡಿಸಿದೆ. ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಆಯ್ಕೆಯಾಗಿಲ್ಲ. ಆದ್ರೆ ಚುಟುಕು ಅಂತರಾಷ್ಟ್ರೀಯ ಪಂದ್ಯಗಳನ್ನ ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚು ಆಡದ ರವಿಚಂದ್ರನ್ ಅಶ್ವಿನ್ ಆಯ್ಕೆಯು ಆಶ್ಚರ್ಯಕ್ಕೆ ಕಾರಣವಾಗಿದೆ.

ಏಕೆಂದರೆ ಏಷ್ಯಾಕಪ್‌ನಲ್ಲಿ ಆಡಿದ ಬಹುತೇಕ ಆಟಗಾರರನ್ನೇ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ. ಹೀಗಿರುವಾಗ ಆಯ್ಕೆ ಸಮಿತಿಯು ಅತ್ಯಂತ ಎಚ್ಚರಿಕೆಯಿಂದ ತಂಡವನ್ನ ಆಯ್ಕೆಮಾಡುವ ಜವಾಬ್ದಾರಿ ಹೊತ್ತಿತ್ತು. ಹೀಗಿರುವಾಗ ತಂಡದ ಸೆಲೆಕ್ಷನ್‌ನಲ್ಲಿ ಆಗಿರುವ ಐದು ಪ್ರಮುಖ ತಪ್ಪುಗಳೇನು ಎಂಬುದನ್ನ ಈ ಕೆಳಗೆ ಕಾಣಬಹುದು.

ಸ್ಕ್ವಾಡ್‌ನಲ್ಲಿಲ್ಲ ಮೂರನೇ ಓಪನರ್

ಸ್ಕ್ವಾಡ್‌ನಲ್ಲಿಲ್ಲ ಮೂರನೇ ಓಪನರ್

ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಕೆ.ಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ .ಆದರೆ ಅವರಲ್ಲಿ ಒಬ್ಬರು ಗಾಯಗೊಂಡು ಹೊರಬಿದ್ದರೂ ಸಹ ಮೂರನೇ ಓಪನರ್ ಆಯ್ಕೆಯ ವಿಷಯದಲ್ಲಿ ಪ್ರಮುಖ ಆಯ್ಕೆಯಿಲ್ಲ.

ಇತ್ತೀಚೆಗೆ ವಿಂಡೀಸ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಬಂದರೂ, ದೀಪಕ್ ಹೂಡಾ ಮತ್ತು ಪಂತ್ ಕೂಡ ಆರಂಭಿಕರಾಗಿ ಕಾಣಿಸಿಕೊಂಡರೂ ಸಹ ಸ್ಪೆಷಲಿಸ್ಟ್ ಓಪನರ್ ಇವರಾಗಿಲ್ಲ. ಇವರೆಲ್ಲಾ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಆಟಗಾರರು. ಹೀಗಗಿ ರೋಹಿತ್ ಅಥವಾ ರಾಹುಲ್ ತಂಡದಿಂದ ಹೊರಗುಳಿದರೆ ಮತ್ತೆ ತಂಡದ ಸಂಯೋಜನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಮೂರನೇ ಆರಂಭಿಕ ಆಯ್ಕೆಯಾಗಿ ತೆಗೆದುಕೊಳ್ಳಬೇಕು. ಹೆಚ್ಚುವರಿ ಸ್ಪಿನ್ನರ್ ಬದಲಿಗೆ ಇಶಾನ್ ಕಿಶನ್ ಅವರನ್ನ ಮೂರನೇ ಆಯ್ಕೆಯ ಆರಂಭಿಕ ಆಟಗಾರನಾಗಿ ತೆಗೆದುಕೊಂಡರೆ ತಂಡದ ಸಂಯೋಜನೆಗೆ ತೊಂದರೆಯಾಗುತ್ತಿರಲಿಲ್ಲ.

ಸ್ಪಿನ್ನರ್‌ಗಳಿಗೆ ಹೆಚ್ಚಿನ ಮಣೆ

ಸ್ಪಿನ್ನರ್‌ಗಳಿಗೆ ಹೆಚ್ಚಿನ ಮಣೆ

ಈ ಬಾರಿ ಆಯ್ಕೆ ಸಮಿತಿಯು ನಾಲ್ಕು ಸ್ಪಿನ್ನರ್‌ಗಳನ್ನು ತೆಗೆದುಕೊಂಡಿದೆ. ಆದರೆ ವೇಗದ ವಿಭಾಗದಲ್ಲಿ ಕೇವಲ ಮೂವರನ್ನ ಮಾತ್ರ ಪರಿಗಣಿಸಿದೆ. ಆದರೆ ನಾಲ್ಕನೇ ವೇಗಿಯಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಬಳಸಿಕೊಳ್ಳುವುದು ಉತ್ತಮವಾದರೂ ಸಹ, ಅವರನ್ನ ಸಂಪೂರ್ಣ ನಾಲ್ಕು ಓವರ್ ಬೌಲಿಂಗ್ ಮಾಡಿಸುವುದು ಅಪಾಯಕಾರಿಯಾಗಬಹುದು. ಏಕೆಂದರೆ ಪ್ರಮುಖ ಸರಣಿಗಳ ಮೊದಲು ಅವರು ಕೆಲವು ಬಾರಿ ಗಾಯಗೊಂಡಿದ್ದಾರೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಒಮ್ಮೊಮ್ಮೆ ಪೂರ್ಣ ಪ್ರಮಾಣದ ಕೋಟಾವನ್ನು ಬೌಲಿಂಗ್ ಮಾಡಲು ಸಾಧ್ಯವಾಗದೆ ತೊಂದರೆಯನ್ನೂ ಅನುಭವಿಸುತ್ತಿದ್ದರು.

ಹೀಗಿರುವಾಗ ಹೆಚ್ಚುವರಿ ಸ್ಪಿನ್ನರ್‌ಗಳ ಬದಲಿಗೆ ಪೇಸ್ ಆಲ್ ರೌಂಡರ್ ದೀಪಕ್ ಚಹಾರ್ ಅವರನ್ನು ಕಣಕ್ಕಿಳಿಸಿದರೆ ಸ್ವಲ್ಪ ಮಟ್ಟಿಗಾದರೂ ಸಮಸ್ಯೆ ನೀಗಿಸಬಹುದಿತ್ತು. ಇತ್ತೀಚೆಗಿನ ದಿನಗಳಲ್ಲಿ ದೀಪಕ್ ಚಾಹರ್ ಕ್ರಿಕೆಟ್ ಆಡಲು ಸಾಧ್ಯವಾಗದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ ಇವರನ್ನ ಸ್ಟ್ಯಾಂಡ್ ಬೈ ಆಟಗಾರನಾಗಿ ಪರಿಗಣಿಸಲಾಗಿದೆ.

ಆದ್ರೆ ಅದೇನಾದ್ರೂ ನಾಲ್ವರು ಸ್ಪಿನ್ನರ್‌ಗಳ ಆಯ್ಕೆ ಏಕೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅದ್ರಲ್ಲೂ ರವಿ ಬಿಷ್ಣೋಯಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯುವುದು ಅನುಮಾನ ಮೂಡಿಸಿದೆ.

Asia Cup 2022: ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ; ಬುಮ್ರಾ ಔಟ್!

ಅಕ್ಷರ್ ಪಟೇಲ್‌ಗಿಂತ ಅಶ್ವಿನ್ ಉತ್ತಮ ಆಯ್ಕೆಯೇ?

ಅಕ್ಷರ್ ಪಟೇಲ್‌ಗಿಂತ ಅಶ್ವಿನ್ ಉತ್ತಮ ಆಯ್ಕೆಯೇ?

ಸದ್ಯದ ಫಾರ್ಮ್ ನೋಡಿದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್ ಎಷ್ಟು ಚೆನ್ನಾಗಿ ಆಡಬಲ್ಲರು ಎಂದು ಎಲ್ಲರಿಗೂ ತಿಳಿದಿದೆ. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಆಟಗಾರರಾಗಿ ಮಿಂಚುತ್ತಾರೆ. ಅದ್ರಲ್ಲೂ ರವೀಂದ್ರ ಜಡೇಜಾ ಅವರಿಗಿಂತ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚುತ್ತಾರೆ. ಅಶ್ವಿನ್ ಮತ್ತು ಜಡೇಜಾ ಅವರು ಅನುಭವಿ ಸ್ಪಿನ್ನರ್ಸ್‌ ಎಂಬ ಕಾರಣಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಸ್ಪಷ್ಟವಾಗಿದೆ. ಆದ್ರೆ ಉತ್ತಮ ಫಾರ್ಮ್ ನಲ್ಲಿರುವ ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್ ಬೈ ಆಗಿ ಇರಿಸಲಾಗಿದೆ. ಅಶ್ವಿನ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸಿದ್ರೆ ಬ್ಯಾಟಿಂಗ್‌ನಲ್ಲೂ ಮಿಂಚಬಹುದಿತ್ತು.

Asia Cup 2022: ಏಷ್ಯಾಕಪ್‌ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ

ದಿನೇಶ್ ಕಾರ್ತಿಕ್‌ರನ್ನ ಯಾವ ಕ್ರಮಾಂಕದಲ್ಲಿ ಆಡಿಸಲು ಸಾಧ್ಯವಿದೆ?

ದಿನೇಶ್ ಕಾರ್ತಿಕ್‌ರನ್ನ ಯಾವ ಕ್ರಮಾಂಕದಲ್ಲಿ ಆಡಿಸಲು ಸಾಧ್ಯವಿದೆ?

ಇಲ್ಲಿಯೇ ಆಯ್ಕೆ ಸಮಿತಿಯ ನಿರ್ಧಾರವೇ ಅರ್ಥವಾಗದ ರೀತಿಯಲ್ಲಿದೆ. 2019ರ ಐಸಿಸಿ ವಿಶ್ವಕಪ್‌ನಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್‌ರನ್ನು ಕರೆದೊಯ್ಯಲಾಗಿತ್ತು. ಆದ್ರೀಗ ಫಿನಿಷರ್ ಆಗಿ ಕಾರ್ತಿಕ್‌ರನ್ನ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಪರಿಗಣಿಸಿದ್ದೇ ಆದಲ್ಲಿ ಯಾವ ಕ್ರಮಾಂಕದಲ್ಲಿ ಕಾರ್ತಿಕ್‌ರನ್ನ ಆಡಿಸಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.

ಏಕೆಂದರೆ ರೋಹಿತ್, ರಾಹುಲ್ ಆರಂಭಿಕರು, ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಆರು ಬ್ಯಾಟ್ಸ್‌ಮನ್‌ಗಳ ಕ್ರಮಾಂಕದಲ್ಲಿ ಆಡುವರು. ಏಳನೇ ಬ್ಯಾಟ್ಸ್‌ಮನ್ ಆಗಿ ರವೀಂದ್ರ ಜಡೇಜಾ ಮುಂದುವರಿಯಲಿದ್ದಾರೆ. ಆದ್ರೀಗ ದಿನೇಶ್ ಕಾರ್ತಿಕ್‌ರನ್ನು ಎಂಟನೇ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಆಡಿಸಲು ಸಾಧ್ಯವೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಏಕೆಂದರೆ ಅಗ್ರ ಕ್ರಮಾಂಕದಲ್ಲಿ ಯಾರನ್ನೂ ಬಿಡಲಾಗದ ಪರಿಸ್ಥಿತಿ ಎದುರಿಗಿದೆ.

ಅದ್ಭುತ ಪ್ರದರ್ಶನ ನೀಡಿದ್ರೂ ಆತನಿಗಿಲ್ಲ ಸ್ಥಾನ: ಅನುಭವಿ ಆಟಗಾರನನ್ನು ಹೊರಗಿಟ್ಟ ಬಗ್ಗೆ ಚೋಪ್ರ ಕಿಡಿ

ಅಗ್ರ ಕ್ರಮಾಂಕದಲ್ಲಿ ಪಾರ್ಟ್‌ ಟೈಂ ಬೌಲರ್ ಇಲ್ಲ!

ಅಗ್ರ ಕ್ರಮಾಂಕದಲ್ಲಿ ಪಾರ್ಟ್‌ ಟೈಂ ಬೌಲರ್ ಇಲ್ಲ!

ಅಗ್ರ ಕ್ರಮಾಂಕದಲ್ಲಿ ಒಬ್ಬ ಅರೆಕಾಲಿಕ ಬೌಲರ್ ಕೂಡ ಇಲ್ಲದೇ ಇರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ದೀಪಕ್ ಹೂಡಾ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಅನುಮಾನ. ಹೀಗಿರುವಾಗ ರೋಹಿತ್, ಸೂರ್ಯಕುಮಾರ್ ಅಥವಾ ಕೊಹ್ಲಿ ಯಾರೂ ಕೂಡ ಬೌಲಿಂಗ್ ಮಾಡುವುದಿಲ್ಲ. ಹೀಗಾಗಿ ಓರ್ವ ಪಾರ್ಟ್‌ ಟೈಂ ಬೌಲರ್‌ ಐವರು ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಭಾರತ ಪರ ಕಣಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿ ಬಿಷ್ಣೋಯ್, ರವಿಚಂದ್ರನ್ ಅಶ್ವಿನ್ ಬೆಂಚ್ ಗೆ ಸೀಮಿತವಾಗುವ ಸಾಧ್ಯತೆ ಇದೆ.

Chris Gayle ಅಭಿಮಾನಿಗಳಿಗೆ ಸಂತಸದ ಸುದ್ದಿ | *Cricket | OneIndia Kannada
ಏಷ್ಯಾಕಪ್ 2022ಕ್ಕೆ ಭಾರತದ ಸ್ಕ್ವಾಡ್‌

ಏಷ್ಯಾಕಪ್ 2022ಕ್ಕೆ ಭಾರತದ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

Story first published: Wednesday, August 10, 2022, 11:33 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X