ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಅತಿಹೆಚ್ಚು ಏಷ್ಯಾಕಪ್ ಪಂದ್ಯ ಆಡಿರುವ ಟಾಪ್ 6 ಕ್ರಿಕೆಟಿಗರು; ಒಬ್ಬನೇ ಭಾರತೀಯ!

Asia Cup 2022: Top 5 List of players who have played most number matches in Asia Cup history

1984ರಲ್ಲಿ ಆರಂಭವಾಗಿದ್ದ ಏಷ್ಯಾಕಪ್ ಟೂರ್ನಿ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಇಂದಿನಿಂದ ( ಆಗಸ್ಟ್ 27 ) ಹದಿನೈದನೆಯ ಆವೃತ್ತಿ ಆರಂಭಗೊಳ್ಳುತ್ತಿದೆ. ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?

ಟ್ರೋಫಿಗಾಗಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಪ್ರಥಮ ಪಂದ್ಯದಲ್ಲಿ ಬಿ ಗುಂಪಿನ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾದರೆ, ದ್ವಿತೀಯ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸದೆಬಡಿದು ಚಾಂಪಿಯನ್ ಆಗಿದ್ದ ಟೀಮ್ ಇಂಡಿಯಾ ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವುದರ ಮೂಲಕ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದರ ಜತೆಗೆ ಸತತ ಮೂರನೇ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ.

Asia Cup 2022: ನಾಯಕತ್ವದಲ್ಲಿ ಬಾಬರ್ ಗಿಂತ ರೋಹಿತ್ ಶರ್ಮಾ ಬೆಸ್ಟ್ ಎಂದ ಪಾಕ್ ಕ್ರಿಕೆಟಿಗ!Asia Cup 2022: ನಾಯಕತ್ವದಲ್ಲಿ ಬಾಬರ್ ಗಿಂತ ರೋಹಿತ್ ಶರ್ಮಾ ಬೆಸ್ಟ್ ಎಂದ ಪಾಕ್ ಕ್ರಿಕೆಟಿಗ!

ಏಷ್ಯಾ ಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರೆ, ಶ್ರೀಲಂಕಾದ ಆಟಗಾರರಾದ ಸನತ್ ಜಯಸೂರ್ಯ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹಾಗೂ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಹೀಗೆ ಏಷ್ಯಾ ಕಪ್ ಇತಿಹಾಸದಲ್ಲಿ ಬಹುತೇಕ ದಾಖಲೆಗಳು ಭಾರತ ಮತ್ತು ಶ್ರೀಲಂಕಾ ತಂಡಗಳ ಆಟಗಾರರ ಹೆಸರಿನಲ್ಲಿಯೇ ಇದ್ದು, ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿಯೂ ಸಹ ಈ 2 ತಂಡಗಳ ಆಟಗಾರರೇ ಮುಂಚೂಣಿಯಲ್ಲಿದ್ದಾರೆ. ಹಾಗಿದ್ದರೆ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಆಡಿರುವ ಆಟಗಾರರ ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಅತಿ ಹೆಚ್ಚು ಏಷ್ಯಾಕಪ್ ಆಡಿರುವ ಆಟಗಾರರ ಟಾಪ್ 6 ಪಟ್ಟಿ

ಅತಿ ಹೆಚ್ಚು ಏಷ್ಯಾಕಪ್ ಆಡಿರುವ ಆಟಗಾರರ ಟಾಪ್ 6 ಪಟ್ಟಿ

ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರರ ಟ‍ಾಪ್ 6 ಪಟ್ಟಿ ಇಲ್ಲಿದೆ.

1. ಮಹೇಲಾ ಜಯವರ್ಧನೆ: 2000ದಿಂದ 2014ರವರೆಗಿನ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಮಹೇಲಾ ಜಯವರ್ಧನೆ ಒಟ್ಟು 28 ಪಂದ್ಯಗಳನ್ನಾಡಿದ್ದು, ಅತಿ ಹೆಚ್ಚು ಏಷ್ಯಾಕಪ್ ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

2. 1997ರಿಂದ 2017ರವರೆಗೆ 27 ಏಷ್ಯಾಕಪ್ ಪಂದ್ಯಗಳನ್ನಾಡಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

3. 2008ರಿಂದ 2018ರವರೆಗಿನ ಏಷ್ಯಾಕಪ್ ಟೂರ್ನಿಗಳಲ್ಲಿ ಒಟ್ಟು 27 ಪಂದ್ಯಗಳನ್ನಾಡಿರುವ ಭಾರತದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

4. 2008ರಿಂದ 2018ರವರೆಗಿನ ಏಷ್ಯಾಕಪ್ ಟೂರ್ನಿಗಳಲ್ಲಿ ಒಟ್ಟು 26 ಪಂದ್ಯಗಳನ್ನಾಡಿರುವ ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

5. 1990ರಿಂದ 2008ರವರೆಗಿನ ಏಷ್ಯಾಕಪ್ ಟೂರ್ನಿಗಳಲ್ಲಿ ಒಟ್ಟು 25 ಪಂದ್ಯಗಳನ್ನಾಡಿರುವ ಸನತ್ ಜಯಸೂರ್ಯ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

6. 2008ರಿಂದ 2018ರವರೆಗಿನ ಏಷ್ಯಾಕಪ್ ಟೂರ್ನಿಗಳಲ್ಲಿ ಒಟ್ಟು 25 ಪಂದ್ಯಗಳನ್ನಾಡಿರುವ ಮಹ್ಮದುಲ್ಲಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿರುವ ಏಕೈಕ ಭಾರತೀಯ ರೋಹಿತ್ ಶರ್ಮಾ

ಪಟ್ಟಿಯಲ್ಲಿರುವ ಏಕೈಕ ಭಾರತೀಯ ರೋಹಿತ್ ಶರ್ಮಾ

ರೋಹಿತ್ ಶರ್ಮಾ 2008ರ ಏಷ್ಯಾಕಪ್ ಟೂರ್ನಿಯಿಂದಲೂ ಸಹ ಭಾಗವಹಿಸುತ್ತಿದ್ದು ಏಷ್ಯಾ ಕಪ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಟಗಾರರ ಟಾಪ್ 5 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ಇತರೆ ಅನುಭವಿ ಆಟಗಾರರಿಗಿಂತ ಹೆಚ್ಚು ಏಷ್ಯಾ ಕಪ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿರುವ ಅನುಭವ ಹೊಂದಿದ್ದಾರೆ.

ರೋಹಿತ್ ಶರ್ಮಾ ಆಗಲಿದ್ದಾರೆ ನಂಬರ್ 1

ರೋಹಿತ್ ಶರ್ಮಾ ಆಗಲಿದ್ದಾರೆ ನಂಬರ್ 1

ಇನ್ನು 27 ಏಷ್ಯಾಕಪ್ ಪಂದ್ಯಗಳನ್ನಾಡಿ ಅತಿಹೆಚ್ಚು ಏಷ್ಯಾ ಕಪ್ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಈ ಬಾರಿಯ ಟೂರ್ನಿಯ ಮೂಲಕ ಅಗ್ರಸ್ಥಾನದಲ್ಲಿರುವ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ತಾವು ನಂಬರ್ 1 ಆಗಲಿದ್ದಾರೆ. ಈ ಬಾರಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಭಾಗವಹಿಸಲಿದ್ದು, ರೋಹಿತ್ ಶರ್ಮಾ 33ಕ್ಕೂ ಹೆಚ್ಚು ಏಷ್ಯಾಕಪ್ ಪಂದ್ಯಗಳನ್ನಾಡಿದ ದಾಖಲೆ ಬರೆಯಲಿದ್ದಾರೆ.

Story first published: Saturday, August 27, 2022, 18:13 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X