ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಆಗಸ್ಟ್‌ 27ಕ್ಕೆ ಚಾಲನೆ, ಟಿ20 ಸ್ವರೂಪದ ಟೂರ್ನಿಗೆ ಶ್ರೀಲಂಕಾ ಆತಿಥ್ಯ

Asia cup 2022

ಏಷ್ಯಾ ಕಪ್‌ನ ಮುಂಬರುವ ಆವೃತ್ತಿಯನ್ನು ಈ ವರ್ಷದ ಕೊನೆಯಲ್ಲಿ ಆಗಸ್ಟ್ 27 ಮತ್ತು ಸೆಪ್ಟೆಂಬರ್ ನಡುವೆ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಶನಿವಾರ ಪ್ರಕಟಿಸಿದೆ.

ಕಳೆದ ಬಾರಿಯಂತೆ ಈ ಬಾರಿಯು ಟೂರ್ನಿಯನ್ನ ಟಿ20 ಸ್ವರೂಪದಲ್ಲಿ ಆಡಿಸಲಾಗುತ್ತದೆ ಮತ್ತು ಅರ್ಹತಾ ಪಂದ್ಯಗಳು ಆಗಸ್ಟ್ 20 ರಿಂದ ಪ್ರಾರಂಭವಾಗುತ್ತವೆ.

"ಏಷ್ಯಾ ಕಪ್ 2022 (ಟಿ20 ಸ್ವರೂಪ) ಈ ವರ್ಷದ ನಂತರ 27 ಆಗಸ್ಟ್ ಹಾಗೂ 11 ಸೆಪ್ಟೆಂಬರ್ ವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ. ಅದಕ್ಕಾಗಿ ಅರ್ಹತಾ ಪಂದ್ಯಗಳು 20 ಆಗಸ್ಟ್ 2022 ರಿಂದ ಆಡಲಾಗುತ್ತದೆ" ಎಂದು ACC ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಏಷ್ಯಾ ಕಪ್ ಟೂರ್ನಿ ನಡೆಯುತ್ತದೆ. ಆದ್ರೆ ಕೋವಿಡ್-19 ಕಾರಣಗಳಿಂದಾಗಿ 2020ರಲ್ಲಿ ನಡೆಯಬೇಕಿದ್ದ ಟೂರ್ನಿ ಮುಂದೂಡಲ್ಪಟ್ಟಿತ್ತು. 1984ರಿಂದ ಪ್ರಾರಂಭವಾದ ಈ ಟೂರ್ನಮೆಂಟ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆನಿಸಿದೆ. ಒಟ್ಟು 14 ಟೂರ್ನಿಗಳಲ್ಲಿ ಭಾರತ 7 ಟ್ರೋಫಿ ಗೆದ್ದಿತು.

ಕಳೆದ ಎರಡು ಏಷ್ಯಾ ಕಪ್ ಟೂರ್ನಮೆಂಟ್ ಸೇರಿದಂತೆ 1984, 1988, 1990/91, 1995, 2010 ಮತ್ತು 2016ನಲ್ಲಿ ಟೂರ್ನಮೆಂಟ್ ನಡೆದಿದೆ. ಕಳೆದ ಎರಡು ಟೂರ್ನಮೆಂಟ್ ಟಿ20 ಸ್ವರೂಪದಲ್ಲಿ ಜರುಗಿತು.

IPL 2022: ವಿರಾಟ್ ಕೊಹ್ಲಿಯ ಮಹತ್ವದ ರೆಕಾರ್ಡ್ ಮೇಲೆ ರೋಹಿತ್ ಶರ್ಮಾ ಕಣ್ಣು!IPL 2022: ವಿರಾಟ್ ಕೊಹ್ಲಿಯ ಮಹತ್ವದ ರೆಕಾರ್ಡ್ ಮೇಲೆ ರೋಹಿತ್ ಶರ್ಮಾ ಕಣ್ಣು!

ಕಳೆದ ಬಾರಿಯ ಏಷ್ಯಾಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿತು. 2016ರಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಡಾಕಾದಲ್ಲಿ ನಡೆದ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನ ಮಣಿಸಿತು.

RCB ಗೆ ಯಾರೂ ಸಾಟಿ ಇಲ್ಲಾ! | Oneindia Kannada

ಹೀಗೆ ಏಷ್ಯಾಕಪ್‌ಗೂ ಮುನ್ನ ಮಾರ್ಚ್‌ 26ರಿಂದ ಐಪಿಎಲ್ 15 ಆವೃತ್ತಿಯು ನಡೆಯಲಿದ್ದು, ಸಿಎಸ್‌ಕೆ ಮತ್ತು ಕೆಕೆಆರ್ ತಂಡಗಳು ಉದ್ಘಾಟನಾ ಪಂದ್ಯವನ್ನಾಡಲಿದೆ.

Story first published: Saturday, March 19, 2022, 16:48 [IST]
Other articles published on Mar 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X