ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಇದನ್ನು ಮಾಡಬೇಕಿದೆ ಎಂದ ಸೌರವ್ ಗಂಗೂಲಿ

Asia Cup 2022: Virat Kohli Needs Practice To Return To Form Says Sourav Ganguly

2022ರ ಏಷ್ಯಾ ಕಪ್ ಇದೇ ಆಗಸ್ಟ್ 27ರಿಂದ ಯುಎಇಯಲ್ಲಿ ಕಿಕ್‌ಸ್ಟಾರ್ಟ್‌ ಪಡೆಯಲಿದ್ದು, ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ದುಬೈನಲ್ಲಿ ಸೆಣಸಾಟ ನಡೆಸಲಿದೆ. 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿದ್ದು, ಬದ್ಧ ಎದುರಾಳಿಗಳ ಕಾದಾಟ ವೀಕ್ಷಿಸಲು ಇಡೀ ವಿಶ್ವವೇ ಕಾಯುತ್ತಾ ಕುಳಿತಿದೆ.

Asia Cup 2022: ನನಗೆ ಇದು ಮತ್ತೊಂದು ಪಂದ್ಯವಷ್ಟೆ; IND vs PAK ಪಂದ್ಯದ ಕುರಿತು ಗಂಗೂಲಿ ಮಾತು

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಆರ್ಥಿಕ ಬಿಕ್ಕಟ್ಟಿನಿಂದಾಗಿ ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಸ್ಥಳಾಂತರಗೊಂಡಿದೆ.

2019ರ ನಂತರ ಕೊಹ್ಲಿ ಶತಕ ಬಾರಿಸಿಲ್ಲ

2019ರ ನಂತರ ಕೊಹ್ಲಿ ಶತಕ ಬಾರಿಸಿಲ್ಲ

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಮುಂಬರುವ ಏಷ್ಯಾಕಪ್ ಆವೃತ್ತಿಯಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ವಿರಾಟ್ ಕೊಹ್ಲಿ ಬಹುದಿನಗಳಿಂದ ಕಳಪೆ ಫಾರ್ಮ್‌ನಲ್ಲಿ ಸಾಗುತ್ತಿದ್ದಾರೆ. ಯಾವುದೇ ಮಟ್ಟದಲ್ಲಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ನವೆಂಬರ್ 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್ ನಂತರ ಅವರು ಒಂದೇ ಒಂದು ಶತಕವನ್ನು ಗಳಿಸಿಲ್ಲ ಎಂಬ ಅಂಶವು ವಿರಾಟ್ ಕೊಹ್ಲಿಯನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿದೆ.

ಭಾರತದ ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ಯಾವುದೇ ಕ್ರಿಕೆಟ್ ಆಡಿಲ್ಲ. ವೆಸ್ಟ್ ಇಂಡೀಸ್‌ನಲ್ಲಿನ ದ್ವಿಪಕ್ಷೀಯ ಸರಣಿಯಲ್ಲಿ ಅನುಭವಿ ಆಡಲಿಲ್ಲ ಮತ್ತು ಜಿಂಬಾಬ್ವೆಯಲ್ಲಿ ಮುಂಬರುವ ಏಕದಿನ ಪಂದ್ಯಗಳ ಭಾಗವಾಗುವುದಿಲ್ಲ. ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ದೊಡ್ಡ ಆಟಗಾರನಾಗಿರುವುದರಿಂದ ತಮ್ಮ ಲಯವನ್ನು ಕಂಡುಕೊಳ್ಳುವ ಮೊದಲು ಇದು ಅಭ್ಯಾಸ ಸಮಯದ ವಿಷಯವಾಗಿದೆ ಎಂದು ಹೇಳಿದರು.

ಪುನರಾಗಮನ ಮಾಡುತ್ತಾರೆ ಎಂಬ ಭರವಸೆ ನನಗಿದೆ

ಪುನರಾಗಮನ ಮಾಡುತ್ತಾರೆ ಎಂಬ ಭರವಸೆ ನನಗಿದೆ

"ವಿರಾಟ್ ಕೊಹ್ಲಿ ಅಭ್ಯಾಸ ಮಾಡಲಿ, ಹೆಚ್ಚು ಪಂದ್ಯಗಳನ್ನು ಆಡಲಿ. ಅವರು ದೊಡ್ಡ ಆಟಗಾರ ಮತ್ತು ಸಾಕಷ್ಟು ರನ್ ಗಳಿಸಿದ್ದಾರೆ. ಅವರು ಪುನರಾಗಮನ ಮಾಡುತ್ತಾರೆ ಎಂಬ ಭರವಸೆ ನನಗಿದೆ. ಅವರು ಕೇವಲ ಶತಕ ಗಳಿಸಲು ಸಾಧ್ಯವಾಗುತ್ತಿಲ್ಲ. ಅದರೆ ಇದೇ ವೇಳೆ, ಅವರು ಏಷ್ಯಾ ಕಪ್‌ನಲ್ಲಿ ತಮ್ಮ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ," ಎಂದು ಬಿಸಿಸಿಐ ಅಧ್ಯಕ್ಚರೂ ಆಗಿರುವ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಇನ್ನು ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ 60ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಅವರ ಬೆಲ್ಟ್ ಅಡಿಯಲ್ಲಿ ಇದುವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಗಸ್ಟ್ 28ರಂದು ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಐಸಿಸಿ ಅಧ್ಯಕ್ಷರಾಗುವ ಊಹಾಪೋಹಗಳಿಗೆ ತೆರೆ ಎಳೆದ ಗಂಗೂಲಿ

ಐಸಿಸಿ ಅಧ್ಯಕ್ಷರಾಗುವ ಊಹಾಪೋಹಗಳಿಗೆ ತೆರೆ ಎಳೆದ ಗಂಗೂಲಿ

ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮುಂದಿನ ಅಧ್ಯಕ್ಷರಾಗುವ ತಮ್ಮ ಉಮೇದುವಾರಿಕೆಯ ಬಗ್ಗೆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

"ನೋಡಿ, ಇವೆಲ್ಲಾ ಊಹಾಪೋಹಗಳು. ಇವು ಸರಿಯಲ್ಲ. ಇದು ಅಷ್ಟು ಬೇಗ ಆಗುವುದಿಲ್ಲ. ಇವೆಲ್ಲವೂ ಬಿಸಿಸಿಐ ಮತ್ತು ಸರ್ಕಾರದ ಕೈಯಲ್ಲಿವೆ," ಎಂದು ಸೌರವ್ ಗಂಗೂಲಿ ಹೇಳಿದರು.

ಏಷ್ಯಾಕಪ್‌ಗೆ ಭಾರತ ತಂಡ

ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.

Story first published: Monday, August 15, 2022, 23:09 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X