ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್ ಫಿಟ್ ಇಲ್ಲದಿದ್ರೆ, ಈತನೇ ರೋಹಿತ್ ಜೊತೆಗೆ ಓಪನಿಂಗ್ ಬ್ಯಾಟರ್‌

KL Rahul

ಮುಂಬರುವ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ತಯಾರಿ ಜೋರಾಗಿಯೇ ನಡೆಯುತ್ತಿದೆ. ತಂಡದಲ್ಲಿ ಸ್ಟ್ರೆಂಥ್, ವೀಕ್ನೆಸ್ ಅರಿತು ಅಂತಿಮ ತಂಡವನ್ನ ಸೆಟ್‌ ಮಾಡಲು ನಾಯಕ ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

ಹೀಗಿರುವಾಗ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಕುರಿತಾಗಿ ಪ್ರಮುಖ ಹೇಳಿಕೆ ನೀಡಿದ್ದು ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿಯಬಹುದು ಎಂದು ಅಂದಾಜಿಸಿದ್ದಾರೆ.

ಏಷ್ಯಾಕಪ್‌ನಿಂದಲೇ ನಡೆಯಲಿದೆ ರೋಹಿತ್-ಕೊಹ್ಲಿ ಜುಗಲ್‌ಬಂದಿ

ಏಷ್ಯಾಕಪ್‌ನಿಂದಲೇ ನಡೆಯಲಿದೆ ರೋಹಿತ್-ಕೊಹ್ಲಿ ಜುಗಲ್‌ಬಂದಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಫಾರ್ಮ್‌ನಲ್ಲಿ ಇಲ್ಲದೆ ಇರಬಹುದು. ಆದ್ರೆ ಏಷ್ಯಾಕಪ್‌ ವೇಳೆಗೆ ವಿರಾಟ್ ತನ್ನ ಹಳೆಯ ಫಾರ್ಮ್‌ಗೆ ಮರಳಬಹುದು ಎಂದು ಅಂದಾಜಿಸಿದ್ದಾರೆ.

ಜಿಂಬಾಬ್ವೆ ಸರಣಿಯ ಬಳಿಕ ನಡೆಯಲಿರುವ ಏಷ್ಯಾಕಪ್ 15ನೇ ಆವೃತ್ತಿ ಟೂರ್ನಮೆಂಟ್‌ ಅನ್ನು ಯುಎಇನಲ್ಲಿ ಆಗಸ್ಟ್‌ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಸಲು ಆಯೋಜಿಸಲಾಗಿದೆ. ಟೂರ್ನಮೆಂಟ್ ಈ ಮೊದಲು ಶ್ರೀಲಂಕಾದಲ್ಲಿ ನಡೆಸಲು ಆಯೋಜಿಸಲಾಗಿತ್ತು. ಆದ್ರೆ ದೇಶದ ಆಂತರಿಕ ಸಮಸ್ಯೆಗಳಿಂದಾಗಿ ಟೂರ್ನಿಯು ಯುಎಇಗೆ ಸ್ಥಳಾಂತರಿಸಲಾಯಿತು.

2019ರಿಂದ ಒಂದು ಶತಕ ಸಿಡಿಸಿಲ್ಲ ವಿರಾಟ್ ಕೊಹ್ಲಿ

2019ರಿಂದ ಒಂದು ಶತಕ ಸಿಡಿಸಿಲ್ಲ ವಿರಾಟ್ ಕೊಹ್ಲಿ

ಅಂತರಾಷ್ಟ್ರೀಯ ಫಾರ್ಮೆಟ್‌ನಲ್ಲಿ 70 ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ 2019ರ ಬಳಿಕ ಒಂದೇ ಒಂದು ಶತಕ ದಾಖಲಿಸಿಲ್ಲ. ತನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯನ್ನ ಕೊಹ್ಲಿ ಎದುರಿಸಿದ್ದಾರೆ. ಕೊಹ್ಲಿ ಮೂರಂಕಿ ಗಡಿದಾಟಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ವಿರಾಟ್ ಕೊಹ್ಲಿಗೆ ಟಿ20ಯಲ್ಲಿ ನೆಚ್ಚಿನ ಕ್ರಮಾಂಕ ಓಪನಿಂಗ್‌ನಲ್ಲಿ ಕಣಕ್ಕಿಳಿಸುವ ಯೋಜನೆ ಮುಂದಿದೆ.

ಐಪಿಎಲ್ 2022ರ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 22.73ರ ಸರಾಸರಿಯಲ್ಲಿ 115.98ರ ಸ್ಟ್ರೈಕ್‌ರೇಟ್‌ನಲ್ಲಿ 341ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸಹ ಒಳಗೊಂಡಿದೆ.

CWG 2022: ಟಾಪ್ 10 ದೇಶಗಳ ಪದಕ ಪಟ್ಟಿ; 9 ಚಿನ್ನ ಗೆದ್ದಿರುವ ಭಾರತದ ಸ್ಥಾನವೇನು?

ಇಂಗ್ಲೆಂಡ್‌ನಲ್ಲೂ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ

ಇಂಗ್ಲೆಂಡ್‌ನಲ್ಲೂ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ

33 ವರ್ಷದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ವಿಶ್ರಾಂತಿ ಪಡೆದ ಬಳಿಕ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಹಾಗೂ ಟಿ20 ಸರಣಿಯಲ್ಲಿ ಮಿಂಚಲು ವಿಫಲಗೊಂಡರು.

ಎಡ್ಜ್‌ಬಾಸ್ಟನ್‌ ಟೆಸ್ಟ್‌ನ್ಲಿ ವಿರಾಟ್‌ 11 ಮತ್ತು 20 ರನ್ ಕಲೆಹಾಕಿದ್ರೆ, ಮೊದಲೆರಡು ಟಿ20 ಪಂದ್ಯಗಳಲ್ಲಿ 1 ಮತ್ತು 11ರನ್ ಸಿಡಿಸಿದರು. ಇದಲ್ಲದೆ ಮೊದಲೆರಡು ಏಕದಿನ ಪಂದ್ಯಗಳಲ್ಲಿ 16 ಮತ್ತು 17 ರನ್ ಸಿಡಿಸಿದ್ರು. ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ಪಡೆದಿರುವ ವಿರಾಟ್ ಏಷ್ಯಾಕಪ್‌ನಲ್ಲಿ ನೇರವಾಗಿ ಭಾಗಿಯಾಗಲಿದ್ದಾರೆ.

ಟಿ20 ವಿಶ್ವಕಪ್‌ಗೆ ಭಾರತದ ಸ್ಪಿನ್ನರ್‌ಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್

ಆರ್‌ಸಿಬಿಗೆ ಓಪನಿಂಗ್ ಮಾಡಿರುವ ವಿರಾಟ್ ಕೊಹ್ಲಿ

ಆರ್‌ಸಿಬಿಗೆ ಓಪನಿಂಗ್ ಮಾಡಿರುವ ವಿರಾಟ್ ಕೊಹ್ಲಿ

ಆರ್‌ಸಿಬಿ ಪರ ಓಪನಿಂಗ್ ಮಾಡಿದ ಅದ್ಭುತ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಓಪನಿಂಗ್ ಬ್ಯಾಟಿಂಗ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಮಾಜಿ ವಿಕೆಟ್ ಕೀಪರ್ ಪಾರ್ಥವ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.

''ವಿರಾಟ್ ಕೊಹ್ಲಿ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಇದು ಕೇವಲ ಫಾರ್ಮ್ ಬಗ್ಗೆ ಸಮಸ್ಯೆಯಾಗಿದ್ದು, ಆತ ಯಾವ ಸ್ಥಾನದಲ್ಲಿ ಆಡಬೇಕೆಂದು ನಿರ್ಧರಿಸಲಾಗಿದೆ. ಅದಕ್ಕಾಗಿಯೇ ಏಷ್ಯಾ ಕಪ್ ಅವರಿಗೆ ಮಾತ್ರವಲ್ಲದೆ ಭಾರತದ ದೃಷ್ಟಿಕೋನಕ್ಕೂ ಸಹ, ಅವರು ಸರಿಯಾದ ಸಂಯೋಜನೆಯನ್ನು ಪಡೆಯಲಿ ಅಥವಾ ಇಲ್ಲದಿರಲಿ ಬಹಳ ನಿರ್ಣಾಯಕವಾಗುತ್ತದೆ. ನಾನು ಸಂಯೋಜನೆಯ ಬಗ್ಗೆ ಹೇಳುತ್ತಲೇ ಇರುತ್ತೇನೆ. ಏಕೆಂದರೆ ಅದು ಪ್ರಮುಖವಾಗಿರುತ್ತದೆ, "ಎಂದು ಕ್ರಿಕ್‌ಬಜ್‌ನಲ್ಲಿ ಪಾರ್ಥಿವ್ ಹೇಳಿದರು.

"ಕೆ.ಎಲ್ ರಾಹುಲ್ ಫಿಟ್ ಆಗಿಲ್ಲದ ಕಾರಣ ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಅನ್ನು ಸಹ ನೀವು ನೋಡಬಹುದು. ಅವರು ಏಷ್ಯಾ ಕಪ್‌ನಿಂದ ಲಭ್ಯವಿರುತ್ತಾರೆ ಮತ್ತು ಭಾರತವು ಇತರ ಅನೇಕ ಆರಂಭಿಕರನ್ನು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ವಿರಾಟ್ ಕೊಹ್ಲಿ ಆರ್‌ಸಿಬಿ ಜೊತೆ ಶುಭಾರಂಭ ಮಾಡಿದ್ದಾರೆ. ಆರಂಭಿಕರಾಗಿ ಬಂದು ಅವರು ಎಲ್ಲಾ ದೊಡ್ಡ ಸೀಸನ್‌ಗಳಲ್ಲಿ ಉತ್ತಮ ಆಟವಾಡಿದ್ದಾರೆ'' ಎಂದು ಅವರು ಸೇರಿಸಿದರು.

Story first published: Saturday, August 6, 2022, 12:59 [IST]
Other articles published on Aug 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X