ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಮಾಡಿರುವ ವಿರಾಟ್ ಕೊಹ್ಲಿ: ವಿಶ್ವದ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆ

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದ್ದು, ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಆಟಗಾರರ ಆಯ್ಕೆ ಸಮಿತಿಯು ಸೋಮವಾರ (ಆ.8) 15 ಸದಸ್ಯರನ್ನೊಳಗೊಂಡ ತಂಡವನ್ನ ಪ್ರಕಟಿಸಿದ್ದು, ಬಹಳ ಸಮಯ ವಿಶ್ರಾಂತಿ ಬಳಿಕ ಕೊಹ್ಲಿ ತಂಡಕ್ಕೆ ವಾಪಸ್ಸಾಗಿದ್ದಾರೆ.

ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ ಫಾರ್ಮೆಟ್‌ಗೆ ಮರಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಮತ್ತು ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ವಿರಾಟ್, ಏಷ್ಯಾಕಪ್‌ 2022 ಮೆಗಾ ಟೂರ್ನಿಗೆ ಮರಳಿದ್ದಾರೆ.

ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಆಗಸ್ಟ್‌ 27ರಂದು ಮೊದಲ ಪಂದ್ಯದಲ್ಲಿ ಗ್ರೂಪ್‌ ಬಿ ತಂಡಗಳಾದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡವು ಮುಖಾಮುಖಿಯಾಗಲಿದ್ದು, ದುಬೈ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಉಭಯ ತಂಡಗಳು ಹೆಚ್ಚು ಯುವ ಆಟಗಾರರನ್ನ ಹೊಂದಿದ್ದು, ಗೆಲುವಿನ ಶುಭಾರಂಭ ಮಾಡುವ ಯೋಜನೆ ಹೊಂದಿವೆ.

ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅಖಾಡಕ್ಕಿಳಿಯುತ್ತಿದ್ದು, ಗ್ರೂಪ್ ಎನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಭಾನುವಾರ ನಡೆಯಲಿರುವ ಈ ಪಂದ್ಯವನ್ನ ನೋಡಲು ಇಡೀ ಕ್ರಿಕೆಟ್ ಅಭಿಮಾನಿಗಳು ಕಾತುರಾಗಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮೈಲಿಗಲ್ಲು

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮೈಲಿಗಲ್ಲು

ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ತನ್ನ 100ನೇ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಲಿರುವ ಕೊಹ್ಲಿ ಕ್ರಿಕೆಟ್‌ನ ಮೂರು ಫಾರ್ಮೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ವಿಶ್ವದ 2 ಕ್ರಿಕೆಟಿಗ ಎಂಬ ಸಾಧನೆ ಮಾಡಲಿದ್ದಾರೆ.

ಕೊಹ್ಲಿಗೂ ಮೊದಲು ನ್ಯೂಜಿಲೆಂಡ್‌ನ ಮಾಜಿ ಆಟಗಾರ ರಾಸ್‌ ಟೇಲರ್ ಮೂರು ಫಾರ್ಮೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದರು.

ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!

ವಿರಾಟ್ ಕೊಹ್ಲಿ ಅಂಕಿ-ಅಂಶಗಳು

ವಿರಾಟ್ ಕೊಹ್ಲಿ ಅಂಕಿ-ಅಂಶಗಳು

ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ನಲ್ಲಿ ನೂರು ಪಂದ್ಯಗಳನ್ನಾಡಿದ ಮೊದಲ ಭಾರತೀಯ ಎಂಬ ಸಾಧನೆಯ ಪಟ್ಟಿ ಸೇರಲಿದ್ದಾರೆ. ಈತನ ಅಂಕಿ ಅಂಶಗಳನ್ನ ಗಮನಿಸಿದ್ರೆ, 102 ಟೆಸ್ಟ್ ಪಂದ್ಯಗಳು, 262 ಏಕದಿನ ಪಂದ್ಯಗಳು ಹಾಗೂ 99 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಭಾಗವಹಿಸಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಳಿಕ 100 ಟಿ20 ಪಂದ್ಯವನ್ನಾಡಲಿರುವ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಸಾಧನೆಯು ವಿರಾಟ್ ಹೆಗಲಿಗೇರಲಿದೆ. ರೋಹಿತ್ ಶರ್ಮಾ ಇದುವರೆಗೂ 132 ಟಿ20 ಪಂದ್ಯಗಳನ್ನಾಡಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ.

ICC T20 Ranking: ನಂ.2 ಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ ಸ್ಟಾರ್; ನಂ.1 ಬ್ಯಾಟರ್ ಯಾರು?

3 ಪಾರ್ಮೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಆಟಗಾರ ರಾಸ್‌ ಟೇಲರ್

3 ಪಾರ್ಮೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಆಟಗಾರ ರಾಸ್‌ ಟೇಲರ್

ನ್ಯೂಜಿಲೆಂಡ್ ಲೆಜೆಂಡ್ ಕ್ರಿಕೆಟರ್ ರಾಸ್ ಟೇಲರ್ ಮೂರು ಫಾರ್ಮೆಟ್‌ನಲ್ಲಿ ನೂರು ಪಂದ್ಯಗಳನ್ನಾಡಿರುವ ಏಕೈಕ ಆಟಗಾರರಾಗಿದ್ದಾರೆ. ಈತ 112 ಟೆಸ್ಟ್ ಪಂದ್ಯಗಳು, 236 ಏಕದಿನ ಪಂದ್ಯಗಳು ಮತ್ತು 102 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಿವೀಸ್ ತಂಡವನ್ನ ಪ್ರತಿನಿಧಿಸಿದ್ದಾರೆ.

ವಿರಾಟ್ ಕೊಹ್ಲಿ ಇನ್ನೂ ಅನೇಕ ಪಂದ್ಯಗಳನ್ನಾಡುವಷ್ಟು ಸಾಮರ್ಥ್ಯ ಹೊಂದಿದ್ದು, ತನ್ನ ಕೆಟ್ಟ ಫಾರ್ಮ್‌ನಿಂದ ಹೊರಬಂದು ಟಿ20 ವಿಶ್ವಕಪ್‌ಗೂ ಮುನ್ನ ಏಷ್ಯಾ ಕಪ್‌ನಲ್ಲಿ ಮಿಂಚುವ ಅನಿವಾರ್ಯತೆಯಿದೆ.

Story first published: Wednesday, August 10, 2022, 19:14 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X