ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತ vs ಪಾಕಿಸ್ತಾನ ಪಂದ್ಯದ ಒತ್ತಡ ಕುರಿತು ಬಾಬರ್ ಅಜಮ್ ಹೇಳಿದ್ದೇನು?

Asia Cup 2022: What Did Babar Azam Say About The Pressure of India vs Pakistan Match?

ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಉಪ ನಾಯಕ ಕೆಎಲ್ ರಾಹುಲ್ ಸೋಮವಾರ (ಆಗಸ್ಟ್ 8)ದಂದು ಏಷ್ಯಾ ಕಪ್‌ಗಾಗಿ ಪ್ರಕಟಿಸಿದ 15 ಸದಸ್ಯರ ಭಾರತೀಯ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣದಿಂದ ಹೊರಗುಳಿದಿದ್ದಾರೆ.

ಈ ಬಾರಿ ಏಷ್ಯಾಕಪ್‌ನಲ್ಲಿ ಭಾನುವಾರ, ಆಗಸ್ಟ್ 28ರಂದು ಎರಡು ತಂಡಗಳು ಮತ್ತೆ ದುಬೈನಲ್ಲಿ ಹಣಾಹಣಿ ನಡೆಸಲು ಸಜ್ಜಾಗಿವೆ. ಆದರೆ, ಬಾಬರ್ ಅಜಮ್ ಇದನ್ನು ಸಾಮಾನ್ಯ ಪಂದ್ಯವೆಂದು ಪರಿಗಣಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಏಷ್ಯಾ ಕಪ್ 2022: ಈತನನ್ನು ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ; ಪಾರ್ಥಿವ್ ಪಟೇಲ್ಏಷ್ಯಾ ಕಪ್ 2022: ಈತನನ್ನು ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ; ಪಾರ್ಥಿವ್ ಪಟೇಲ್

ಏಷ್ಯಾ ಕಪ್ 2022 ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಘರ್ಷಣೆ ಆಗಸ್ಟ್ 28 ರಂದು (ಭಾನುವಾರ) ನಡೆಯಲಿದೆ.

ಎರಡು ಕಡೆಯ ಆಟಗಾರರಿಗೆ ವಿಭಿನ್ನ ಒತ್ತಡ

ಎರಡು ಕಡೆಯ ಆಟಗಾರರಿಗೆ ವಿಭಿನ್ನ ಒತ್ತಡ

ಮೆನ್ ಇನ್ ಬ್ಲ್ಯೂ ಮತ್ತು ಮೆನ್ ಇನ್ ಗ್ರೀನ್ ತಂಡಗಳ ಏಷ್ಯಾ ಕಪ್ ಪಂದ್ಯಗಳು ಎರಡು ಕಡೆಯ ಆಟಗಾರರಿಗೆ ವಿಭಿನ್ನ ಮಟ್ಟದ ಸವಾಲನ್ನು ಒಡ್ಡುತ್ತವೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಒಪ್ಪಿಕೊಂಡಿದ್ದಾರೆ.

ಎರಡು ತಂಡಗಳು ಕೊನೆಯ ಬಾರಿಗೆ 2021ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು, ದುಬೈನಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅಜೇಯ 150 ಪ್ಲಸ್ ಜೊತೆಯಾಟದ ನಂತರ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳಿಂದ ಗೆದ್ದಿತ್ತು.

ಆಗಸ್ಟ್ 28ರಂದು ಭಾರತ vs ಪಾಕಿಸ್ತಾನ ಪಂದ್ಯ

ಆಗಸ್ಟ್ 28ರಂದು ಭಾರತ vs ಪಾಕಿಸ್ತಾನ ಪಂದ್ಯ

ಈ ಬಾರಿ ಏಷ್ಯಾಕಪ್‌ನಲ್ಲಿ ಭಾನುವಾರ, ಆಗಸ್ಟ್ 28ರಂದು ಎರಡು ತಂಡಗಳು ಮತ್ತೆ ದುಬೈನಲ್ಲಿ ಹಣಾಹಣಿ ನಡೆಸಲು ಸಜ್ಜಾಗಿವೆ. ಆದರೆ, ಬಾಬರ್ ಅಜಮ್ ಇದನ್ನು ಸಾಮಾನ್ಯ ಪಂದ್ಯವೆಂದು ಪರಿಗಣಿಸಲು ಪ್ರಯತ್ನಿಸುವುದಾಗಿ ಹೇಳಿದರು.

"ನಾವು ಯಾವಾಗಲೂ ಇದನ್ನು ಸಾಮಾನ್ಯ ಪಂದ್ಯದಂತೆ ಆಡಲು ಪ್ರಯತ್ನಿಸುತ್ತೇವೆ. ಆದರೆ, ಖಂಡಿತವಾಗಿ ನಮ್ಮ ಮೇಲೆ ವಿಭಿನ್ನ ಒತ್ತಡವಿದೆ," ಎಂದು ಪಾಕಿಸ್ತಾನ ತಂಡ ನೆದರ್ಲ್ಯಾಂಡ್ಸ್ ಪ್ರವಾಸದ ಮೊದಲು ನಾಯಕ ಬಾಬರ್ ಅಜಮ್ ಹೇಳಿದ್ದಾರೆ.

ಇದಕ್ಕೂ ಮೊದಲು, ಅನುಭವಿ ಬ್ಯಾಟರ್ ಸೊಹೈಬ್ ಮಕ್ಸೂದ್ ಅವರು 'ಅತಿಯಾದ ಉತ್ಸಾಹ'ದಿಂದಾಗಿ ಪಾಕಿಸ್ತಾನವು ಭಾರತದ ವಿರುದ್ಧ ದೊಡ್ಡ ಪಂದ್ಯಗಳನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.

ಪಾಕಿಸ್ತಾನ ತಂಡವು ಅತಿಯಾಗಿ ಉತ್ಸುಕರಾಗುವುದು ಸೋಲಿಗೆ ಕಾರಣ

ಪಾಕಿಸ್ತಾನ ತಂಡವು ಅತಿಯಾಗಿ ಉತ್ಸುಕರಾಗುವುದು ಸೋಲಿಗೆ ಕಾರಣ

"ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಹಸಿರು ಜೆರ್ಸಿ ಆಟಗಾರರ ಸತತ ಸೋಲಿಗೆ ಕಾರಣ ಪಾಕಿಸ್ತಾನಿ ತಂಡವು ಅತಿಯಾಗಿ ಉತ್ಸುಕರಾಗಿರುವುದು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ನಮ್ಮ ತಂಡವು ಭಾರತ-ಪಾಕಿಸ್ತಾನ ಪಂದ್ಯಗಳನ್ನು ಸಾಮಾನ್ಯವಾಗಿ ಪರಿಗಣಿಸಲು ಪ್ರಾರಂಭಿಸಿದೆ ಮತ್ತು ಇದು ನಮ್ಮ ಪ್ರದರ್ಶನವನ್ನು ಸುಧಾರಿಸಿದೆ," ಎಂದು ಸೊಹೈಬ್ ಮಕ್ಸೂದ್ ಹೇಳಿದರು.

ಸೊಹೈಬ್ ಮಕ್ಸೂದ್ ಕೊನೆಯದಾಗಿ ಆಗಸ್ಟ್ 2021ರಲ್ಲಿ ಆಡಿದರು ಮತ್ತು ನಂತರ ಗಾಯದ ಕಾರಣ ಒಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ವಿಶ್ವಕಪ್‌ನಿಂದ ಹೊರಗುಳಿದಿದ್ದರು

2018ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋತಿತ್ತು

2018ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋತಿತ್ತು

ಪಾಕಿಸ್ತಾನ ತಂಡದ ಮಟ್ಟಿಗೆ ಹೇಳುವುದಾದರೆ, ಏಷ್ಯಾಕಪ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸುವ ಮೊದಲು, ಬಾಬರ್ ಅಜಮ್ ನಾಯಕತ್ವದ ಭಾರತ ತಂಡ, ರೋಟರ್‌ಡ್ಯಾಮ್‌ನ ಹ್ಯಾಝೆಲಾರ್‌ವೆಗ್‌ನಲ್ಲಿ ಆಗಸ್ಟ್ 16ರಿಂದ ಆಗಸ್ಟ್ 21ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.

2018ರ ಏಷ್ಯಾಕಪ್‌ನಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನವು ಭಾರತದ ವಿರುದ್ಧ ಸೋತಿತ್ತು. ಪಾಕಿಸ್ತಾನದ ಬೌಲರ್‌ಗಳು ಚಾಂಪಿಯನ್‌ಶಿಪ್‌ನಲ್ಲಿ ಎರಡು ಪಂದ್ಯಗಳಲ್ಲಿ ಕೇವಲ ಮೂರು ಭಾರತೀಯ ವಿಕೆಟ್‌ಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada
ಭಾರತ ಮತ್ತು ಪಾಕಿಸ್ತಾನ ಪೂರ್ಣ ತಂಡಗಳು

ಭಾರತ ಮತ್ತು ಪಾಕಿಸ್ತಾನ ಪೂರ್ಣ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್.

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.

Story first published: Friday, August 12, 2022, 10:27 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X