ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ವಿರಾಟ್ ಕೊಹ್ಲಿ, ಬಾಬರ್ ಅಜಂ ನಡುವೆ ಯಾರು ಉತ್ತಮ ಟಿ20 ಬ್ಯಾಟರ್?; ಇಲ್ಲಿದೆ ಅಂಕಿಅಂಶ!

Asia Cup 2022: Who Is The Better T20 Batsman Between Virat Kohli And Babar Azam?; Here Are The Stats

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಏಷ್ಯಾ ಕಪ್‌ನಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಹವಣಿಸುತ್ತಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ವಿಶ್ವಕಪ್‌ ವೇದಿಕೆಯಲ್ಲಿ ಪಾಕಿಸ್ತಾನದ ಮೊದಲ ಗೆಲುವಾಗಿತ್ತು.

ಭಾನುವಾರ (ಆಗಸ್ಟ್ 28)ರಂದು 2022ರ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿದ್ದು, ಈ ಸಂದರ್ಭದಲ್ಲಿ ಎದುರಾಳಿ ಪಾಕಿಸ್ತಾನವು 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತೋರಿದ ಪ್ರದರ್ಶನವನ್ನು ಮುಂದುವರೆಸಲು ಎದುರು ನೋಡುತ್ತಿದೆ.

Asia Cup 2022 SL vs AFG Live: ಶ್ರೀಲಂಕಾ vs ಅಫ್ಘಾನಿಸ್ತಾನ ಪಂದ್ಯAsia Cup 2022 SL vs AFG Live: ಶ್ರೀಲಂಕಾ vs ಅಫ್ಘಾನಿಸ್ತಾನ ಪಂದ್ಯ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಂ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಮಾತನಾಡುವ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಎಲ್ಲಾ ಮೂರು ಸ್ವರೂಪಗಳಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗುವ ಸ್ಪರ್ಧೆಯಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಕೋಲ್ಕತ್ತಾದಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದ ನಂತರ ವಿರಾಟ್ ಕೊಹ್ಲಿ ನವೆಂಬರ್ 2019ರಿಂದ ಕಳಪೆ ಬ್ಯಾಟಿಂಗ್ ಫಾರ್ಮ್ ಮೂಲಕ ಸಾಗುತ್ತಿದ್ದಾರೆ. ಆದಾಗ್ಯೂ, ಮತ್ತೊಂದೆಡೆ, ಬಾಬರ್ ಅಜಮಂ ಕಳೆದ ಎರಡು ವರ್ಷಗಳಲ್ಲಿ ಅವರ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ವಿರಾಟ್ ಕೊಹ್ಲಿ ಸುಮಾರು 100 ಪಂದ್ಯಗಳೊಂದಿಗೆ 50 ಸರಾಸರಿ

ವಿರಾಟ್ ಕೊಹ್ಲಿ ಸುಮಾರು 100 ಪಂದ್ಯಗಳೊಂದಿಗೆ 50 ಸರಾಸರಿ

ಕಳೆದ ಎರಡು ವರ್ಷಗಳಲ್ಲಿ ಬಾಬರ್ ಅಜಂ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 400 ಪ್ಲಸ್ ರನ್ ಗಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕಳಪೆ ಫಾರ್ಮ್‌ನೊಂದಿಗೆ ವಿರಾಟ್ ಕೊಹ್ಲಿ, ಐಸಿಸಿ ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ 33ನೇ ಶ್ರೇಯಾಂಕಕ್ಕೆ ಕುಸಿದರು. ಆದರೆ ಬಾಬರ್ ಅಜಂ 818 ಅಂಕಗಳೊಂದಿಗೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಸುಮಾರು 100 ಪಂದ್ಯಗಳೊಂದಿಗೆ 50 ಸರಾಸರಿ ಹೊಂದಿದ್ದಾರೆ.

ಇವುಗಳಲ್ಲಿ ಕೆಲವು ಅಂಕಿಅಂಶಗಳು ಬಾಬರ್ ಅಜಂ ಪರವಾಗಿದ್ದರೆ, ಇನ್ನು ಕೆಲವು ವಿರಾಟ್ ಕೊಹ್ಲಿ ಪರವಾಗಿವೆ. ಆದ್ದರಿಂದ ಈ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಯಾರು? ಎಂಬುದನ್ನು ಈ ಕಳೆಗಿನ ಅಂಕಿಅಂಶಗಳೊಂದಿಗೆ ಗಮನಿಸಿ.

ಇಬ್ಬರು ಬ್ಯಾಟ್ಸ್‌ಮನ್‌ಗಳ ಟಿ20 ರನ್‌ಗಳು

ಇಬ್ಬರು ಬ್ಯಾಟ್ಸ್‌ಮನ್‌ಗಳ ಟಿ20 ರನ್‌ಗಳು

ವಿರಾಟ್ ಕೊಹ್ಲಿ - 3308

ಬಾಬರ್ ಅಜಂ - 2686

ವಿರಾಟ್ ಕೊಹ್ಲಿ ಪಾಕಿಸ್ತಾನ ನಾಯಕ ಬಾಬರ್‌ ಅಜಂಗಿಂತ 25 ಪಂದ್ಯಗಳನ್ನು ಹೆಚ್ಚು ಆಡಿದ್ದಾರೆ ಮತ್ತು ಆ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಿಂತ 622 ರನ್ ಕಡಿಮೆ ಗಳಿಸಿದ್ದಾರೆ. ಆದಾಗ್ಯೂ, ಬಾಬರ್‌ ಅಜಂ ಅವರ ಇತ್ತೀಚಿನ ಫಾರ್ಮ್ ಬೇರೆಯದನ್ನು ಸೂಚಿಸುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಟಿ20 ರನ್

ಕಳೆದ ಎರಡು ವರ್ಷಗಳಲ್ಲಿ ಟಿ20 ರನ್

ಬಾಬರ್ ಅಜಂ
2022 - 482
2021 - 474

ವಿರಾಟ್ ಕೊಹ್ಲಿ
2022 - 81
2021 - 299

ಬಾಬರ್ ಅಜಂ ಕಳೆದ ಎರಡು ವರ್ಷ ಟಿ20ಯಲ್ಲಿ ವಿರಾಟ್‌ಗಿಂತ 576 ರನ್ ಹೆಚ್ಚು ಗಳಿಸಿದ್ದಾರೆ. ಆದಾಗ್ಯೂ, ಭಾರತದ ಬ್ಯಾಟ್ಸ್‌ಮನ್ ಸ್ಥಿರವಾಗಿ ಟಿ20 ಪಂದ್ಯಗಳನ್ನು ಆಡುತ್ತಿಲ್ಲ ಎಂದು ನಾವು ಪರಿಗಣಿಸಬೇಕಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಅನ್ನು ತಮ್ಮ ಪ್ರಮುಖ ಆದ್ಯತೆಯಾಗಿರಿಸಿಕೊಳ್ಳುವುದರಿಂದ ಅವರು ಟಿ20 ಕ್ರಿಕೆಟ್ ಸಮಯದಲ್ಲಿ ವಿರಾಮವನ್ನು ತೆಗೆದುಕೊಳ್ಳುತ್ತಾರೆ.

ಟಿ20 ಸರಾಸರಿ

ಟಿ20 ಸರಾಸರಿ

ವಿರಾಟ್ ಕೊಹ್ಲಿ - 50.12

ಬಾಬರ್ ಅಜಂ - 45.53

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟಿ20 ಪಂದ್ಯಗಳಲ್ಲಿ ಅದ್ಭುತವಾಗಿ ಸ್ಥಿರವಾಗಿದ್ದಾರೆ. ಕ್ರಮಾಂಕದ ಅಗ್ರಸ್ಥಾನದಲ್ಲಿ ಬ್ಯಾಟ್ ಮಾಡುವ ಬಾಬರ್ ಅಜಂ ಶ್ಲಾಘನೀಯ ಸರಾಸರಿ ಹೊಂದಿದ್ದರೆ, ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳ ನಂತರ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಳೆದ ಎರಡು ವರ್ಷಗಳಲ್ಲಿ ಸನ್ನಿವೇಶವು ವಿಭಿನ್ನವಾಗಿದೆ ಎಂದು ಭಾವಿಸಬಹುದು, ಆದರೆ ಸಂಖ್ಯೆಗಳು ಸುಳ್ಳಲ್ಲ.

ಕಳೆದ ಎರಡು ವರ್ಷಗಳಲ್ಲಿ ಟಿ20 ಸರಾಸರಿ

ಕಳೆದ ಎರಡು ವರ್ಷಗಳಲ್ಲಿ ಟಿ20 ಸರಾಸರಿ

ವಿರಾಟ್ ಕೊಹ್ಲಿ - 47.5

ಬಾಬರ್ ಆಜಮ್ - 41.5

ಟಿ20 ಸ್ಟ್ರೈಕ್ ರೇಟ್
ವಿರಾಟ್ ಕೊಹ್ಲಿ - 137.66

ಬಾಬರ್ ಅಜಂ - 129.45

ಟಿ20 ಕ್ರಿಕೆಟ್‌ನಲ್ಲಿ ಕಳಪೆ ಸ್ಟ್ರೈಕ್ ರೇಟ್‌ಗಾಗಿ ಬಾಬರ್ ಅಜಂ ಟೀಕೆಗೊಳಗಾಗಿದ್ದಾರೆ. ಕೆಲವೊಮ್ಮೆ ಅವರ ತಂಡವು ಪಂದ್ಯವನ್ನು ಕಳೆದುಕೊಳ್ಳುತ್ತದೆ, ಆದರೆ ಡೆತ್ ಓವರ್‌ಗಳಲ್ಲಿ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಫಲರಾದ ಕಾರಣ ಅವರು ಔಟಾಗದೆ ಉಳಿದಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಯಾವಾಗಲೂ ತನ್ನ ತಂಡಕ್ಕಾಗಿ ಆಟವನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಂಡಿದ್ದಾನೆ ಮತ್ತು ಕೊಹ್ಲಿ ತನ್ನ ಇನ್ನಿಂಗ್ಸ್‌ನಲ್ಲಿ ಕ್ರಮೇಣ ತನ್ನ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸುವಲ್ಲಿ ಗಮನಹರಿಸುತ್ತಾನೆ.

ಕಳೆದ ಎರಡು ವರ್ಷಗಳಲ್ಲಿ ಟಿ20 ಸ್ಟ್ರೈಕ್ ರೇಟ್

ಕಳೆದ ಎರಡು ವರ್ಷಗಳಲ್ಲಿ ಟಿ20 ಸ್ಟ್ರೈಕ್ ರೇಟ್

ವಿರಾಟ್ ಕೊಹ್ಲಿ - 130

ಬಾಬರ್ ಅಜಂ - 190

ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಹಳಷ್ಟು ಕುಸಿದಿದೆ, ಆದರೆ ಬಾಬರ್ ಅಜಂ ದೊಡ್ಡ ಜಿಗಿತವನ್ನು ತೆಗೆದುಕೊಂಡಿದ್ದಾರೆ. ಅವರು 200ರ ಆಸುಪಾಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅತ್ಯಧಿಕ ಟಿ20 ಸ್ಕೋರ್

ಅತ್ಯಧಿಕ ಟಿ20 ಸ್ಕೋರ್

ವಿರಾಟ್ ಕೊಹ್ಲಿ - 94

ಬಾಬರ್ ಅಜಂ- 122

ಟಿ20ಯಲ್ಲಿ ಶತಕ (100), ಅರ್ಧಶತಕ (50)
ವಿರಾಟ್ ಕೊಹ್ಲಿ - 0, 30

ಬಾಬರ್ ಅಜಂ - 1, 26

Story first published: Saturday, August 27, 2022, 11:06 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X