ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ ಬಾಲ್ ಗೆ ಸಿಕ್ಸ್ ಬೀಸಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಜಾವೆದ್!

Asia Cup history: Javed Miandad, last ball six and Austral-Asia Cup

ಬೆಂಗಳೂರು, ಸೆಪ್ಟೆಂಬರ್ 11: ಕ್ರಿಕೆಟ್ ಮೆಲ್ಲಗೆ ಜನಪ್ರಿಯಗೊಳ್ಳುತ್ತಿದ್ದ 1980ರ ಕಾಲವದು. ಕ್ರಿಕೆಟ್ ಜನಪ್ರಿಯಗೊಳ್ಳುತ್ತಿದ್ದ ಕಾಲ ಅನ್ನುವುದಕ್ಕಿಂತ ಕ್ರಿಕೆಟ್ ದುಡ್ಡಿನ ಆಟವಾಗಿ ಮೆಲ್ಲಗೆ ಬದಲಾಗುತ್ತಿದ್ದ ಕಾಲ. ದೂರದರ್ಶನದೊಳಗೂ ಕ್ರಿಕೆಟ್ ಮೆತ್ತಗೆ ಲಗ್ಗೆಯಿಡುತ್ತಿತ್ತು.

ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್!ಇಂಗ್ಲೆಂಡ್ ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಪಂತ್!

ಏಷ್ಯ ಕಪ್ ನಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಹೆಚ್ಚು ಗುರುತಿಸಿಕೊಂಡಿದ್ದವು. ಏಷ್ಯಕಪ್ ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿದ್ದ ತಂಡಗಳೂ ಇವೆ. ಮೂರೂ ತಂಡಗಳಲ್ಲೂ ಪ್ರತಿಭಾನ್ವಿತ ಆಟಗಾರರು ಇದ್ದರೆನ್ನುವುದಕ್ಕೆ ಅನೇಕ ಪಂದ್ಯಗಳು ಸಾಕ್ಷಿಯಾಗಿದ್ದಿದೆ. ಅದರಲ್ಲಿ 1986ರ ಆಸ್ಟ್ರೇಲ್-ಏಷ್ಯಕಪ್ ಪಂದ್ಯಕೂಡ ಒಂದು.

ಕ್ರಿಕೆಟ್ ದುಡ್ಡಿನ ಆಟವಾಗುತ್ತ ಸಾಗಿದ್ದೇ ಒಂದರ್ಥದಲ್ಲಿ ಆಸ್ಟ್ರೇಲ್-ಏಷ್ಯಕಪ್ ಉದಯಗೊಳ್ಳಲು ಕಾರಣ. ಹೀಗಾಗಿ ಆಸ್ಟ್ರೇಲ್-ಏಷ್ಯಕಪ್ 1986ರಲ್ಲಿ ಆರಂಭಗೊಂಡಿತು. ಐಸಿಸಿ ವರ್ಲ್ಡ್ ಕಪ್ ಗೆ ಹೊರತಾಗಿ ಮೊದಲ ವಿಶ್ವಮಟ್ಟದ ಟೂರ್ನಿಯಾಗಿ ಇದು ಗುರುತಿಸಿಕೊಂಡಿತು. ಐಸಿಸಿ ಚಾಂಪಿಯನ್ಸ್ ಟ್ರೋಫಿಯಂತೆ ಇರದಲ್ಲೂ ಹಲವು ರಾಷ್ಟ್ರಗಳು ಪಾಲ್ಗೊಳ್ಳಲು ಅವಕಾಶವಿತ್ತು.

ಯುಎಇಯ ಶಾರ್ಜಾದಲ್ಲೇ ನಡೆದಿದ್ದ ಆಸ್ಟ್ರೇಲ್-ಏಷ್ಯ ಕಪ್ ಮೊದಲ ಆವೃತ್ತಿಯಲ್ಲಿ ಶ್ರೀಲಂಕಾ ತಂಡಕ್ಕೆ ಸೆಮಿಗೆ ನೇರ ಪ್ರವೇಶ ಅವಕಾಶ ನೀಡಲಾಗಿತ್ತು, ಆದರೆ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಿದ್ದು ಭಾರತ ಮತ್ತು ಪಾಕಿಸ್ತಾನ ತಂಡಗಳು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿದ್ದ ಭಾರತದಿಂದ ಮೂವರು ಅರ್ಧಶತಕ ಬಾರಿಸಿದ್ದರು. ಸುನೀಲ್ ಗವಾಸ್ಕರ್ 92, ಕೆ ಶ್ರೀಕಾಂತ್ 75, ದಿಲೀಪ್ ವೆಂಗ್ ಸರ್ಕಾರ್ 50 ರನ್ ನೆರವಿನೊಂದಿಗೆ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದು 245 ರನ್ ಪೇರಿಸಿತ್ತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ಬೇಗನೆ ವಿಕೆಟ್ ಕಳೆದುಕೊಳ್ಳುತ್ತ ಬಂತು. ಅಂತಿಮ ಓವರ್ ವೇಳೆ ಪಂದ್ಯ ರೋಚಕ ಹಂತಕ್ಕೆ ತಲುಪಿತು. ಚೇತನ್ ಶರ್ಮಾ ಅವರ ಕೊನೆಯ ಎಸೆತ ಉಳಿದಿದ್ದಾಗ ಪಾಕ್ 9 ವಿಕೆಟ್ ಕಳೆದು 242 ರನ್ ಪೇರಿಸಿತ್ತು. ಗೆಲುವಿಗೆ ಕೊನೆಯ ಎಸೆತಕ್ಕೆ 4 ರನ್ ಬೇಕಿತ್ತು.

ಅಂತಿಮ ಎಸೆತ ಎದುರಿಸಲು ಎದುರಿನಲ್ಲಿ ಜಾವೆದ್ ಮಿಯಾಂದಾದ್ ನಿಂತಿದ್ದರು. ಚೆಂಡು ತನ್ನೆಡೆ ಬರುತ್ತಲೇ ಬ್ಯಟ್ ಬೀಸಿದರು. ಚೆಂಡು ಸಿಕ್ಸ್ ಗೆರೆ ದಾಟಿತ್ತು. ಪಾಕಿಸ್ತಾನ 1ರನ್ ರೋಚಕ ಗೆಲುವು ದಾಖಲಿಸಿತ್ತು. ಜಾವೆದ್ ಅವತ್ತು 114 ಎಸೆತಕ್ಕೆ 116 ರನ್ ಸಿಡಿಸಿದ್ದರು!

Story first published: Wednesday, September 12, 2018, 2:02 [IST]
Other articles published on Sep 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X