ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್: ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ; ನಂಬರ್ 1 ಯಾರು?

Asia Cup Records: Individual highest score in Asia Cup histrory; Virat Kohli tops the list

ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯು ಇದೇ ತಿಂಗಳ 27ರಂದು ನಡೆಯಲಿರುವ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭಗೊಳ್ಳಲಿದೆ. ಇನ್ನು 1984ರಲ್ಲಿ ಮೊದಲ ಬಾರಿಗೆ ನಡೆದಿದ್ದ ಏಷ್ಯಾಕಪ್ ಟೂರ್ನಿ ಕಳೆದ ಬಾರಿಯ ( 2018 ) ಟೂರ್ನಿಯವರೆಗೂ ಒಟ್ಟು 14 ಬಾರಿ ನಡೆದಿದ್ದು ಒಟ್ಟು 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಟೀಮ್ ಇಂಡಿಯಾ ಅತಿಹೆಚ್ಚು ಬಾರಿ ಏಷ್ಯಾಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತದ ಈ ಮೂವರಿಗೆ ಸಿಗುವುದಿಲ್ಲ ಟಿ20 ವಿಶ್ವಕಪ್‌ ಟಿಕೆಟ್!ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತದ ಈ ಮೂವರಿಗೆ ಸಿಗುವುದಿಲ್ಲ ಟಿ20 ವಿಶ್ವಕಪ್‌ ಟಿಕೆಟ್!

ಹೀಗೆ ಟೀಮ್ ಇಂಡಿಯಾ ಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಎನಿಸಿಕೊಂಡಿದ್ದರೆ, 5 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿರುವ ಶ್ರೀಲಂಕಾ ಅತಿಹೆಚ್ಚು ಬಾರಿ ಏಷ್ಯಾ ಕಪ್ ಟ್ರೋಫಿ ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ. ಇನ್ನು ಏಷ್ಯಾಕಪ್ ಇತಿಹಾಸದಲ್ಲಿ ಈ ಎರಡೂ ತಂಡಗಳೂ ಹೆಚ್ಚು ಬಾರಿ ಟ್ರೋಫಿಗಳನ್ನು ಗೆದ್ದಿದ್ದರೆ, ಈ ತಂಡಗಳ ಆಟಗಾರರೇ ಏಷ್ಯಾಕಪ್ ಇತಿಹಾಸದಲ್ಲಿ ಬಹುತೇಕ ಆಟಗಾರರ ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದಾರೆ.

ಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿ

ಹೌದು, ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಹಾಗೂ ಅತಿಹೆಚ್ಚು ಶತಕ ಗಳಿಸಿರುವ ಆಟಗಾರ ಎಂಬ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹೆಸರಿನಲ್ಲಿದ್ದರೆ, ಅತಿಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಶ್ರೀಲಂಕಾದ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಇನ್ನು ಏಷ್ಯಾಕಪ್ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಎಂಬ ದಾಖಲೆಯನ್ನು ಯಾರು ಹೊಂದಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿದೆ ದಾಖಲೆ

ವಿರಾಟ್ ಕೊಹ್ಲಿ ಹೆಸರಿನಲ್ಲಿದೆ ದಾಖಲೆ

2012ರ ಏಷ್ಯಾಕಪ್ ಟೂರ್ನಿಯಲ್ಲಿ ಮೀರ್‌ಪುರ್‌ನಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ 148 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 183 ರನ್ ಬಾರಿಸಿದ್ದರು. ಇದು ಏಷ್ಯಾಕಪ್ ಇತಿಹಾಸದಲ್ಲೇ ಆಟಗಾರನೋರ್ವ ಪಂದ್ಯವೊಂದರಲ್ಲಿ ಕಲೆಹಾಕಿದ್ದ ಅತಿಹೆಚ್ಚು ವೈಯಕ್ತಿಕ ರನ್ ಆಗಿದೆ.

ಅತ್ಯಧಿಕ ರನ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ( ಏಕದಿನ ಮಾದರಿ )

ಅತ್ಯಧಿಕ ರನ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ( ಏಕದಿನ ಮಾದರಿ )

1984ರಲ್ಲಿ ಆರಂಭವಾಗಿದ್ದ ಏಷ್ಯಾಕಪ್ 2014ರ ಆವೃತ್ತಿಯವರೆಗೂ ಏಕದಿನ ಮಾದರಿಯಲ್ಲಿಯೇ ನಡೆದಿತ್ತು. 2015ರಲ್ಲಿ ಏಷ್ಯಾಕಪ್ ಕೌನ್ಸಿಲ್ ಸಭೆ ನಡೆಸಿ ಮುಂಬರುವ ಟೂರ್ನಿಗಳನ್ನು ಒಮ್ಮೆ ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ ಮತ್ತೊಮ್ಮೆ ಏಕದಿನ ಮಾದರಿಯಲ್ಲಿ ನಡೆಸಲು ತೀರ್ಮಾನಿಸಿತು. ಹೀಗಾಗಿಯೇ 2016ರ ಏಷ್ಯಾಕಪ್ ಟೂರ್ನಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ 2018ರ ಏಷ್ಯಾಕಪ್ ಆವೃತ್ತಿಯನ್ನು ಏಕದಿನ ಮಾದರಿಯಲ್ಲಿ ನಡೆಸಲಾಗಿತ್ತು ಮತ್ತು ಇದೀಗ ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲಿದೆ. ಹೀಗಾಗಿ ಏಷ್ಯಾಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಮಾದರಿಯಲ್ಲಿದ್ದು ಏಕದಿನ ಮಾದರಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಆಟಗಾರರ ಟಾಪ್ 5 ಪಟ್ಟಿ ಇಲ್ಲಿದೆ.

1. ವಿರಾಟ್ ಕೊಹ್ಲಿ 148 ಎಸೆತಗಳಲ್ಲಿ 183 ರನ್‌ಗಳು
2. ಯೂನಸ್ ಖಾನ್ 122 ಎಸೆತಗಳಲ್ಲಿ 144 ರನ್‌ಗಳು
3. ಮುಸ್ತಫಿಜರ್ ರಹಮಾನ್ 150 ಎಸೆತಗಳಲ್ಲಿ 144 ರನ್‌ಗಳು
4. ಶೊಯೆಬ್ ಮಲಿಕ್ 127 ಎಸೆತಗಳಲ್ಲಿ 143 ರನ್‌ಗಳು
5. ವಿರಾಟ್ ಕೊಹ್ಲಿ 122 ಎಸೆತಗಳಲ್ಲಿ 136 ರನ್‌ಗಳು

ಟಿ ಟ್ವೆಂಟಿ ಮಾದರಿಯಲ್ಲಿ ಅತ್ಯಧಿಕ ರನ್ ಬಾರಿಸಿದವರು

ಟಿ ಟ್ವೆಂಟಿ ಮಾದರಿಯಲ್ಲಿ ಅತ್ಯಧಿಕ ರನ್ ಬಾರಿಸಿದವರು

ಏಷ್ಯಾಕಪ್ 2016ರಲ್ಲಿ ಮಾತ್ರ ಟಿ ಟ್ವೆಂಟಿ ಮಾದರಿಯಲ್ಲಿ ನಡೆದಿದ್ದು ಆ ಮಾದರಿಯ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ
1. ಬಾಬರ್ ಹಯಾತ್, ಹಾಂಗ್‌ಕಾಂಗ್ 60 ಎಸೆತಗಳಲ್ಲಿ 122 ರನ್‌ಗಳು
2. ರೋಹಿತ್ ಶರ್ಮಾ 55 ಎಸೆತಗಳಲ್ಲಿ 83 ರನ್‌ಗಳು
3. ಸಬ್ಬೀರ್ ರಹಮಾನ್ ಬಾಂಗ್ಲಾದೇಶ 54 ಎಸೆತಗಳಲ್ಲಿ 80 ರನ್‌ಗಳು
4. ರಹಾನ್ ಮುಸ್ತಫಾ ಯುಎಇ 50 ಎಸೆತಗಳಲ್ಲಿ 77 ರನ್‌ಗಳು
5. ತಿಲಕರತ್ನೆ ದಿಲ್‌ಶನ್ 56 ಎಸೆತಗಳಲ್ಲಿ ಅಜೇಯ 75 ರನ್‌ಗಳು

Story first published: Wednesday, August 24, 2022, 14:09 [IST]
Other articles published on Aug 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X