ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವು

Pakistan has scored highest total and Bangladesh has scored low total record in Asia Cup histoty

2018ರಲ್ಲಿ ಕೊನೆಯ ಬಾರಿಗೆ ನಡೆದಿದ್ದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಮರಳಿ ಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ 2020ರಲ್ಲಿಯೇ ಈ ಟೂರ್ನಿ ನಡೆಯಬೇಕಿತ್ತು. ಆದರೆ ಅಂದು ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಈ ವರ್ಷ ಶ್ರೀಲಂಕಾದಲ್ಲಿ ನಡೆಯುವುದರಲ್ಲಿತ್ತು. ಆದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಶ್ರೀಲಂಕಾ ಟೂರ್ನಿಯನ್ನು ನಡೆಸಲಾಗಲಿಲ್ಲ. ಇದೀಗ ಟೂರ್ನಿ ಯುಎಇಗೆ ಸ್ಥಳಾಂತರಿಸಲ್ಪಟ್ಟಿದ್ದು, ಆಗಸ್ಟ್ 27ರಂದು ನಡೆಯಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಗಳ ನಡುವಿನ ಲೀಗ್ ಹಂತದ ಪಂದ್ಯದ ಮೂಲಕ ಟೂರ್ನಿ ಆರಂಭವಾಗಲಿದೆ.

Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!

ಇನ್ನು ಏಷ್ಯಾ ಕಪ್ ಟೂರ್ನಮೆಂಟ್ ಮೊದಲ ಬಾರಿಗೆ 1984ರಲ್ಲಿ ಇದೇ ಯುಎಇಯಲ್ಲಿ ನಡೆದಿತ್ತು. ಅಂದಿನಿಂದ 2018ರವರೆಗೆ ಒಟ್ಟು 14 ಬಾರಿ ಏಷ್ಯಾಕಪ್ ಟೂರ್ನಿ ಆಯೋಜನೆಯಾಗಿದ್ದು, ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಟೀಂ ಇಂಡಿಯಾ ಏಳನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ತಂಡ ಎನಿಸಿಕೊಂಡಿದೆ.

ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್

ಇನ್ನು ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ಹೊಂದಿದ್ದರೆ, ಅತಿ ಹೆಚ್ಚು ರನ್ ಹಾಗೂ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಗಳನ್ನು ಸನತ್ ಜಯಸೂರ್ಯ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಶ್ರೀಲಂಕಾದ ಬೌಲರ್ ಲಸಿತ್ ಮಲಿಂಗಾ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಹೀಗೆ ಇಷ್ಟು ವರ್ಷಗಳ ಏಷ್ಯಾ ಕಪ್ ಟೂರ್ನಿಗಳಲ್ಲಿ ವಿವಿಧ ತಂಡಗಳು ಹಾಗೂ ಅವುಗಳ ಆಟಗಾರರು ತಮ್ಮದೇ ಆದ ದಾಖಲೆಯನ್ನು ಹೊಂದಿದ್ದು, ಪಾಕಿಸ್ತಾನ ಅತಿ ಹೆಚ್ಚು ಮೊತ್ತ ದಾಖಲಿಸಿದ ತಂಡ ಎನಿಸಿಕೊಂಡಿದ್ದರೆ, ಬಾಂಗ್ಲಾದೇಶ ಅತೀ ಕಡಿಮೆ ರನ್ ದಾಖಲಿಸಿದ ತಂಡ ಎನಿಸಿಕೊಂಡಿದೆ. ಈ ಕುರಿತ ಮಾಹಿತಿ ಕೆಳಕಂಡಂತಿದೆ.

ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಪಾಕಿಸ್ತಾನ

ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಪಾಕಿಸ್ತಾನ

2010ರ ಏಷ್ಯಾ ಕಪ್ ಟೂರ್ನಿಯಲ್ಲಿ ಡಂಬುಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿತ್ತು. ಇದು ಏಷ್ಯಾ ಕಪ್ ಇತಿಹಾಸದಲ್ಲಿ ತಂಡವೊಂದು ಕಲೆಹಾಕಿದ ಅತಿ ಹೆಚ್ಚು ಮೊತ್ತವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ 17 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 60 ಎಸೆತಗಳಲ್ಲಿ 124 ರನ್ ಚಚ್ಚಿದ್ದರು.

ಬಾಂಗ್ಲಾದೇಶ ಅತಿ ಕಡಿಮೆ ಮೊತ್ತ ಕಲೆ ಹಾಕಿದ ತಂಡ

ಬಾಂಗ್ಲಾದೇಶ ಅತಿ ಕಡಿಮೆ ಮೊತ್ತ ಕಲೆ ಹಾಕಿದ ತಂಡ

2000ದ ಏಷ್ಯಾಕಪ್ ಟೂರ್ನಿಯಲ್ಲಿ ನಡೆದಿದ್ದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 34.2 ಓವರ್‌ಗಳಲ್ಲಿ 87 ರನ್ ಗಳಿಸಿ ಆಲ್ ಔಟ್ ಆಗಿತ್ತು. ಇದು ಏಷ್ಯಾ ಕಪ್ ಇತಿಹಾಸದಲ್ಲಿ ತಂಡವೊಂದು ಕಲೆಹಾಕಿದ ಅತಿ ಕಡಿಮೆ ಮೊತ್ತ ಎಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 321 ರನ್‌ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಪಾಕಿಸ್ತಾನದ ವೇಗಿಗಳ ಎದುರು ಮಣ್ಣು ಮುಕ್ಕಿತ್ತು.

Ishan Kishan ಹಾಗು KL Rahul ಅವರ ವೀಡಿಯೋ ಎಲ್ಲೆಡೆ ವೈರಲ್ | *Cricket | OneIndia Kannada
ಈ ಬಾರಿಯ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ

ಈ ಬಾರಿಯ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ vs ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್‌: ಭಾರತ vs ಪಾಕಿಸ್ತಾನ (ದುಬೈ)
30 ಆಗಸ್ಟ್‌: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್‌: ಭಾರತ vs ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ vs ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ vs ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್‌ (ದುಬೈ)

Story first published: Friday, August 19, 2022, 16:06 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X