ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಆತಿಥ್ಯಕ್ಕೆ ಶ್ರೀಲಂಕಾ ತಯಾರಿದೆ: ಶ್ರೀಲಂಕಾ ಕ್ರಿಕೆಟ್ ಮುಖ್ಯಸ್ಥ

Asia Cup: Sri Lanka ready to host, says SLC chief Shammi Silva

ಕೊಲಂಬೋ, ಜೂನ್ 9: ಈ ವರ್ಷದ ಏಷ್ಯಾಕಪ್ ನಡೆಸುವ ಬಗ್ಗೆ ನಿರ್ಧಾರ ಮುಂದೂಡಲಾಗಿದೆ. ಆದರೆ ಏಷ್ಯಾಕಪ್ ಟಿ20 ಟೂರ್ನಿ ನಡೆಸಲು ಶ್ರೀಲಂಕಾ ಸಿದ್ಧವಿದೆ ಎಂದು ಶ್ರೀಲಂಕಾ ಕ್ರಿಕೆಟ್‌ನ ಮುಖ್ಯಸ್ಥ ಶಮ್ಮಿ ಸಿಲ್ವಾ ಹೇಳಿದ್ದಾರೆ. ಏಷ್ಯಾಕಪ್ ಅಸಲಿಗೆ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದಲ್ಲಿ ಟೂರ್ನಿ ನಡೆಸಲು ಪಾಕಿಸ್ತಾನ ಕೂಡ ಒಪ್ಪಿಕೊಂಡಿದೆ ಎಂದು ಸಿಲ್ವಾ ಹೇಳಿದ್ದಾರೆ.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಸಬಹುದು ಎಂದು ಒಪ್ಪಿಕೊಂಡಿವೆ ಎಂದು ಶಮ್ಮಿ ಸಿಲ್ವಾ ಹೇಳಿದ್ದಾರೆ. ಹಿಂದಿನ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಸಲು ಆಕ್ಷೇಪ ಕೇಳಿ ಬಂದರೆ ತಟಸ್ಥ ತಾಣವಾದ ಯುಎಇಯಲ್ಲಿ ನಡೆಸಲಾಗುತ್ತದೆ ಎನ್ನಲಾಗಿತ್ತು.

ಆಗಿನ ಬೌಲರ್‌ಗಳ ಮುಂದೆ ಇವರ ಆಟ ನಡೆಯದು: ರೋಹಿತ್, ಎಬಿಡಿಗೆ ದಿಗ್ಗಜ ಬೌಲರ್‌ನ ಸವಾಲುಆಗಿನ ಬೌಲರ್‌ಗಳ ಮುಂದೆ ಇವರ ಆಟ ನಡೆಯದು: ರೋಹಿತ್, ಎಬಿಡಿಗೆ ದಿಗ್ಗಜ ಬೌಲರ್‌ನ ಸವಾಲು

ಹಿಂದಿನ ಯೋಜನೆಯಂತೆ ಈ ವರ್ಷದ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯುವುದರಲ್ಲಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ತೆರಳಲು ರಾಜಕೀಯ ಕಾರಣ ಅಡ್ಡಿಯಾಗಿರುವುದರಿಂದ ಪಿಸಿಬಿಯು ಏಷ್ಯಾಕಪ್ ಆತಿಥ್ಯವನ್ನು ಬೇರೆ ದೇಶಕ್ಕೆ ಬಿಟ್ಟುಕೊಡಬೇಕಾಗಿ ಬಂದಿದೆ.

ನೀಲಿಚಿತ್ರ ಲೋಕಕ್ಕೆ ಕಾಲಿಟ್ಟ ಮಹಿಳಾ 'ಸೂಪರ್ ಕಾರ್ ರೇಸರ್' ರಿನೀ ಗ್ರೇಸಿ!ನೀಲಿಚಿತ್ರ ಲೋಕಕ್ಕೆ ಕಾಲಿಟ್ಟ ಮಹಿಳಾ 'ಸೂಪರ್ ಕಾರ್ ರೇಸರ್' ರಿನೀ ಗ್ರೇಸಿ!

'ನಾವು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಜೊತೆ ಚರ್ಚೆ ನಡೆಸಿದ್ದೇವೆ. ಸದ್ಯದ ಈ ಪರಿಸ್ಥಿತಿಯಲ್ಲಿ ಈ ಬಾರಿಯ ಏಷ್ಯಾಕಪ್ ಆವೃತ್ತಿಯನ್ನು ಶ್ರೀಲಂಕಾದಲ್ಲಿ ನಡೆಸಲು ಅವರು ಈಗಾಗಲೇ ಒಪ್ಪಿದ್ದಾರೆ,' ಎಂದು ಶಮ್ಮಿ ಸಿಲ್ವಾ ಹೇಳಿರುವುದಾಗಿ ಶ್ರೀಲಂಕಾ ಮಾಧ್ಯಮ 'ಸೈಕ್ಲೋನ್ ಟುಡೇ' ವರದಿ ಮಾಡಿದೆ.

Story first published: Tuesday, June 9, 2020, 17:52 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X