ಮೀರ್ ಪುರ್ (ಬಾಂಗ್ಲಾದೇಶ), ಮಾ.01: ಶ್ರೀಲಂಕಾ ನೀಡಿದ್ದ 139 ರನ್ ಗಳ ಗುರಿ ಮುಟ್ಟಿದ ಧೋನಿ ಪಡೆ, 5 ವಿಕೆಟ್ ಗಳ ಅಂತರದ ಜಯ ದಾಖಲಿಸಿ, ಏಷ್ಯಾಕಪ್ 2016 ರ ಫೈನಲ್ ತಲುಪಿದೆ. ಟೀಂ ಇಂಡಿಯಾ ಇನ್ನು ಮಾರ್ಚ್ 6 ರಂದು ಅಂತಿಮ ಹಣಾಹಣಿಗೆ ಸಿದ್ಧವಾಗಬೇಕಿದೆ.
ಸ್ಕೋರ್ ಕಾರ್ಡ್ ನೋಡಿ
ಶ್ರೀಲಂಕಾ ನೀಡಿದ್ದ 139 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಬಹುಬೇಗ ಪೆವಿಲಿಯನ್ ಸೇರಿಕೊಂಡರು. ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಮತ್ತೊಮ್ಮೆ ಭಾರತದ ಪಾಲಿಗೆ ಆಪತ್ಬಾಂಧವರಾಗಿ ಗೆಲುವಿನ ದಡ ಮುಟ್ಟಿಸಿದ್ದಲ್ಲದೆ, ತಂಡವನ್ನು ಏಷ್ಯಾಕಪ್ ಫೈನಲಿಗೆ ತಲುಪಿಸಿದರು.
ಭಾರತದ ರನ್ ಚೇಸ್: ರಹಾನೆ ಬದಲಿಗೆ ಬಂದ ಧವನ್ 1 ರನ್ ಗಳಿಸಿ ಔಟ್.
* ರೋಹಿತ್ ಶರ್ಮ ಮೂರು ಬೌಂಡರಿ ಜತೆ 15 ರನ್ ಗಳಿಸಿ ಔಟ್
* ಆರಂಭಿಕ ಬ್ಯಾಟ್ಸ್ ಮನ್ ವಿಕೆಟ್ ಕಿತ್ತ ಲಂಕಾದ ವೇಗಿ ಕುಲಶೇಖರ.
* ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 56 ರನ್ (7x4)
* ಸುರೇಶ್ ರೈನಾ 25 ರನ್ ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು.
* ಯುವರಾಜ್ ಸಿಂಗ್ 18 ಎಸೆತಗಳಲ್ಲಿ 35 ರನ್ (3x4,3x6) ಆಕರ್ಷಕ ಆಟ.
* ಶ್ರೀಲಂಕಾ ಪರ ಕುಲಶೇಖರ 2, ಪೆರೆರಾ, ಶನಕ, ಹೆರಾತ್ ತಲಾ 1 ವಿಕೆಟ್ ಪಡೆದರು.
ಏಷ್ಯಾಕಪ್ 2016: ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ
ಯುಎಇ ವಿರುದ್ಧ ಶ್ರೀಲಂಕಾ ತಂಡ 14ರನ್ ಗಳ ಜಯ ದಾಖಲಿಸಿ, ನಂತರ ಬಾಂಗ್ಲಾದೇಶ ವಿರುದ್ಧ 23ರನ್ ಗಳಿಂದ ಸೋಲು ಕಂಡಿದೆ.
ತಂಡದಲ್ಲಿ ಬದಲಾವಣೆ: ಟೀಂ ಇಂಡೀಯಾದಲ್ಲಿ ಅಜಿಂಕ್ಯ ರಹಾನೆ ಬದಲಿಗೆ ಶಿಖರ್ ಧವನ್ ಬಂದಿದ್ದರೆ, ಶ್ರೀಲಂಕಾದಲ್ಲಿ ಗಾಯಳುವಾಗಿರುವ ವೇಗಿ ಲಸಿತ್ ಮಾಲಿಂಗ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ.
ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್ (ಉಪ ನಾಯಕ), ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್, ನಿರೋಶನ್ ಡಿಕ್ ವಾಲ, ಶೇಹಾನ್ ಜಯಸೂರ್ಯ, ಮಿಲಿಂಡಾ ಸಿರಿವರ್ದೆನ, ದಸುನ್ ಶನಕ, ಚಮರ, ಚಮರ ಕಪುಗೆಡರ, ನುವಾನ್ ಕುಲಶೇಖರ, ದುಶ್ಮಂತಾ ಚಮೀರ, ತಿಸಾರಾ ಪೆರೆರಾ, ಸಚಿತ್ರಾ ಸೇನಾನಾಯಕೆ, ರಂಗನಾ ಹೇರಾತ್, ಜೆಫ್ರಿ ವಂಡೆರ್ಸೆ. (ಒನ್ಇಂಡಿಯಾ ಸುದ್ದಿ)