ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India Squad Asia Cup : ಏಷ್ಯಾ ಕಪ್‌ಗೆ ಟೀಮ್ ಇಂಡಿಯಾ: ಕಮ್‌ಬ್ಯಾಕ್ ಮಾಡಲಿದ್ದಾರೆ ಪ್ರಮುಖ ಇಬ್ಬರು ಆಟಗಾರರು!

Asia Cup: Team India stars KL Rahul and Deepak Chahar set to comeback in Asia Cup

ಏಷ್ಯಾ ಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು ಟೂರ್ನಿಯ ಮೇಲಿನ ಕಾತುರ ಹೆಚ್ಚುವಂತೆ ಮಾಡಿದೆ. ಹೀಗಾಗಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್ ಕೂಡ ಸಮೀಪಿಸುತ್ತಿದ್ದು ಯಾವೆಲ್ಲಾ ಆಟಗಾರರಿಗೆ ಸ್ಥಾನ ದೊರೆಯಬಹುದು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.

ಏಷ್ಯಾ ಕಪ್‌ನಲ್ಲಿ ಭಾಗವಹಿಸುವ ಪಾಕಿಸ್ತಾನ ತಂಡದ ಆಟಗಾರರ ಬಳಗವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದೀಗ ಭಾರತದ ಸ್ಕ್ವಾಡ್‌ನಲ್ಲಿ ಯಾರೆಲ್ಲಾ ಸ್ಥಾನ ಪಡೆಯಬಹುದು ಎಂಬ ಚರ್ಚೆಗಳು ಜೋರಾಗಿದೆ. ಮುಂದಿನ ಸೋಮವಾರ ಭಾರತ ತಂಡ ಪ್ರಕಟವಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಇಬ್ಬರು ಪ್ರಮುಖ ಆಟಗಾರರು ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಭಾರತದ ಈ ಪ್ಲೇಯರ್ ವಿಶ್ವದ ನಂ 1 ಆಗೋದ್ರಲ್ಲಿ ಅನುಮಾನವಿಲ್ಲ, ವಿಶ್ವಕಪ್‌ಗೆ ಆಯ್ಕೆ ಮಾಡಿ: ಕೃಷ್ಣಮಾಚಾರಿ ಶ್ರೀಕಾಂತ್ಭಾರತದ ಈ ಪ್ಲೇಯರ್ ವಿಶ್ವದ ನಂ 1 ಆಗೋದ್ರಲ್ಲಿ ಅನುಮಾನವಿಲ್ಲ, ವಿಶ್ವಕಪ್‌ಗೆ ಆಯ್ಕೆ ಮಾಡಿ: ಕೃಷ್ಣಮಾಚಾರಿ ಶ್ರೀಕಾಂತ್

ಕೆಎಲ್ ರಾಹುಲ್, ದೀಪಕ್ ಚಾಹರ್ ಕಮ್‌ಬ್ಯಾಕ್

ಕೆಎಲ್ ರಾಹುಲ್, ದೀಪಕ್ ಚಾಹರ್ ಕಮ್‌ಬ್ಯಾಕ್

ಹಿರಿಯ ಆರಂಭಿಕ ಆಟಗಾರ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಭಾರತ ತಂಡದಿಂದ ಹೊರಗುಳಿದಿದ್ದರು. ಏಷ್ಯಾಕಪ್‌ ಮೂಲಕ ಕೆಎಲ್ ರಾಹುಲ್ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ ವೇಗದ ಬೌಲರ್ ದೀಪಕ್ ಚಾಹರ್ ಕೂಡ ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ವಾಪಾಸಾಗುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.

ಯುಎಇನಲ್ಲಿ ನಡೆಯಲಿದೆ ಏಷ್ಯಾ ಕಪ್

ಯುಎಇನಲ್ಲಿ ನಡೆಯಲಿದೆ ಏಷ್ಯಾ ಕಪ್

ಈ ಬಾರಿಯ ಏಷ್ಯಾಕಪ್ ಟೂರ್ನಿ ಯುಎಇನಲ್ಲಿ ಆಯೋಜನೆಯಾಗಲಿದೆ. ದುಬೈ ಹಾಗೂ ಶಾರ್ಜಾ ಕ್ರೀಡಾಂಗಣಗಳು ಈ ಟೂರ್ನಿಯ ಪಂದ್ಯಗಳಿಗೆ ಆತಿಥ್ಯವಹಿಸಲಿದೆ. ಆಗಸ್ಟ್ 27ರಿಂದ ಆರಂಭವಾಗಿ ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯವಾಗಲಿದೆ. ಎರಡನೇ ಬಾರಿಗೆ ಏಷ್ಯಾಕಪ್ ಟಿ20 ಮಾದರಿಯಲ್ಲಿ ಆಯೋಜನೆಗೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾದಲ್ಲಿ ಆಯೋಜನೆಯಾಗಬೇಕಾಗಿತ್ತು. ಆದರೆ ಆರ್ಥಿಕ ಹಾಗೂ ರಾಜಕೀಯದ ಸಂಕಷ್ಟದ ಸಮಯವನ್ನು ಶ್ರೀಲಂಕಾ ಎದುರಿಸುತ್ತಿರುವ ಕಾರಣ ಈ ಟೂರ್ನಿ ಯುಎಇಗೆ ಸ್ಥಳಾಂತರವಾಗಿದೆ.

ಆರಂಭಿಕನಾಗಿಯೇ ಕಣಕ್ಕಿಳಿಯಲಿದ್ದಾರೆ ರಾಹುಲ್

ಆರಂಭಿಕನಾಗಿಯೇ ಕಣಕ್ಕಿಳಿಯಲಿದ್ದಾರೆ ರಾಹುಲ್

ಇತ್ತೀಚೆಗೆ ಭಾರತ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿದ್ದು ಅದರಲ್ಲೂ ಆರಂಭಿಕ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ರಿಷಬ್ ಪಂತ್ ಅವರನ್ನು ಕಣಕ್ಕಿಳಿಸಲಾಗಿತ್ತು. ಹೀಗಾಗಿ ಏಷ್ಯಾಕಪ್ ಹಾಗೂ ವಿಶ್ವಕಪ್‌ನ್ಲಲಿ ಆರಂಭಿಕನಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಗೊಂದಲಗಳು ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಬಿಸಿಸಿಊ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದ್ದು ಕೆಎಲ್ ರಾಹುಲ್ ಆರಂಭಿಕನಾಗಿಯೇ ಆಡಲಿದ್ದಾರೆ ಎಂಬ ಮಾತನ್ನು ಉಲ್ಲೇಖಿಸಿದೆ. "ಕೆಎಲ್ ರಾಹುಲ್ ಸಾಮರ್ಥ್ಯವನ್ನು ಸಾಬೀತುಪಡಿಸುವ ಯಾವುದೇ ಅವಶ್ಯಕತೆಯಿಲ್ಲ. ಅವರೊಬ್ಬ ಕ್ಲಾಸ್ ಆಟಗಾರನಾಗಿದ್ದಯ ಯಾವಾಗೆಲ್ಲಾ ಕಣಕ್ಕಿಳಿಯುತ್ತಾರೋ ಆರಂಭಿಕನಾಗಿಯೇ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ರಿಷಬ್ ಪಂತ್ ಮಧ್ಯಮ ಕ್ರಮಾಂಕದ ಸ್ಪೆಶಲಿಸ್ಟ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ" ಎಂದು ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Story first published: Friday, August 5, 2022, 10:07 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X