ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿ

ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಮಾತಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೂಡಾ ಮಣೆ ಹಾಕುತ್ತದೆ. ಹೀಗಿರುವಾಗ, ಪಾಕಿಸ್ತಾನದ ಬೆದರಿಕೆಗೆ ಭಾರತ ಜಗ್ಗಲು ಸಾಧ್ಯವೇ?

ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್) 2020ರ ಏಷ್ಯಾ ಕಪ್ ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಭಾರತ ಇದಕ್ಕೆ ತಗಾದೆ ತೆಗೆದಿತ್ತು. ಭಾರತದ ನಡೆಗೆ ಪಾಕ್ ಕೂಡಾ ಆಕ್ರೋಶ ವ್ಯಕ್ತ ಪಡಿಸಿತ್ತು.

ಆದರೆ, ಭಾರತ ಇಲ್ಲದೇ ಏಷ್ಯಾ ಕಪ್ ನಡೆಸಿದರೆ, ಟೂರ್ನಮೆಂಟ್ ಗೆ ಮಜಾ ಬರುವುದಿಲ್ಲ ಎಂದು ಬಿಸಿಸಿಸಿ ಹಾಕಿದ ಷರತ್ತಿಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಒಪ್ಪಿಗೆ ಸೂಚಿಸಿದೆ.

ನೀವ್ ಬರಲ್ಲಾ ಅಂದ್ರೆ ನಾವೂ ಬರಲ್ಲ: ಭಾರತಕ್ಕೆ ಪಾಕ್ ಹೇಳಿದ್ಯಾಕೆ!ನೀವ್ ಬರಲ್ಲಾ ಅಂದ್ರೆ ನಾವೂ ಬರಲ್ಲ: ಭಾರತಕ್ಕೆ ಪಾಕ್ ಹೇಳಿದ್ಯಾಕೆ!

ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಯನ್ನು ನೀಡಿದ್ದು, "ಪಾಕಿಸ್ತಾನಕ್ಕೆ ನಮ್ಮ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎನ್ನುವ ನಮ್ಮ ನಿಲುವು ಅಚಲ" ಎಂದಿದ್ದಾರೆ. ಏಷ್ಯಾ ಕಪ್ ತಟಸ್ಥ ಮೈದಾನದಲ್ಲಿ:

ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ

ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ

ಭಾರತದ ಸೈನಿಕರನ್ನು ಟಾರ್ಗೆಟ್ ಮಾಡಿ ಉಗ್ರ ಕೃತ್ಯ ನಡೆದ ನಂತರ, ಭಾರತ, ಪಾಕಿಸ್ತಾನದ ಜೊತೆಗಿನ ಕ್ರೀಡಾ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿತ್ತು. ಅದಕ್ಕೆ, ಕ್ರಿಕೆಟ್ ಕೂಡಾ ಹೊರತಾಗಿರಲಿಲ್ಲ. ಆದರೆ, ಈ ಬಾರಿಯ ಏಷ್ಯಾ ಕಪ್ ಆತಿಥ್ಯವನ್ನು ಪಾಕ್ ವಹಿಸಿಕೊಂಡಿತ್ತು. ಅಲ್ಲಿಗೆ, ನಾವು ಹೋಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿತ್ತು.

ತಟಸ್ಥ ಮೈದಾನದಲ್ಲಿ ಪಾಕ್ ಜೊತೆ ಕ್ರಿಕೆಟ್

ತಟಸ್ಥ ಮೈದಾನದಲ್ಲಿ ಪಾಕ್ ಜೊತೆ ಕ್ರಿಕೆಟ್

"ಭಾರತ, ಏಷ್ಯಾ ಕಪ್ ನಲ್ಲಿ ಭಾಗವಹಿಸದೇ ಇದ್ದರೆ, ನಾವೇನೂ ಪ್ರತಿರೋಧ ತೋರದೇ ಇರುವುದಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ಟೂರ್ನಮೆಂಟ್ ಅನ್ನು ನಾವು ಬಹಿಷ್ಕರಿಸುತ್ತೇವೆ" ಎಂದು ಪಿಸಿಬಿ ಸಿಇಒ ವಾಸೀಂ ಖಾನ್ ಎಚ್ಚರಿಕೆಯನ್ನು ನೀಡಿದ್ದರು. ತಟಸ್ಥ ಮೈದಾನದಲ್ಲಿ ಪಾಕ್ ಜೊತೆ ಕ್ರಿಕೆಟ್ ಆಡಲು ನಮ್ಮ ತಕರಾರು ಏನೂ ಇಲ್ಲ ಎಂದು ಬಿಸಿಸಿಐ, ತನ್ನ ನಿಲುವನ್ನು ಸ್ಪಷ್ಟ ಪಡಿಸಿತ್ತು.

ಪಾಕ್ ಬಹಿಷ್ಕಾರದ ಬೆದರಿಕೆ: ಡೋಂಟ್ ಕೇರ್ ಅಂದ ಬಲಾಢ್ಯ ಬಿಸಿಸಿಐ

ದುಬೈ ನಲ್ಲಿ ಟೂರ್ನಮೆಂಟ್

ದುಬೈ ನಲ್ಲಿ ಟೂರ್ನಮೆಂಟ್

ಭಾರತದ ಈ ನಿಲುವಿನಿಂದಾಗಿ ಏಷ್ಯಾ ಕಪ್ ಆಯೋಜನೆ ಪಾಕ್ ಕೈತಪ್ಪಿದೆ. ಟೀಂ ಇಂಡಿಯಾ ಆಡದೇ ಇದ್ದರೆ, ಟೂರ್ನಮೆಂಟ್ ಗೆ ಮೌಲ್ಯ ಇರುವುದಿಲ್ಲ ಎನ್ನುವುದನ್ನು ಅರಿತಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್, ದುಬೈ ನಲ್ಲಿ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಿದೆ.

ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆ

ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆ

"ಏಷ್ಯಾಕಪ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಇದರಲ್ಲಿ ಆಡಲಿವೆ" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಮಾರ್ಚ್ ಮೂರರಂದು ನಡೆಯಲಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಗಾಗಿ ದುಬೈಗೆ ತೆರಳುವ ಮುನ್ನ ಗಂಗೂಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಸೆಪ್ಟೆಂಬರ್ ​ನಲ್ಲಿ ನಡೆಯಲಿರುವ ಟೂರ್ನಿಗೆ ಈ ಪಾಕಿಸ್ತಾನ ಆತಿಥ್ಯವಹಿಸಿಕೊಂಡಿತ್ತು.

Story first published: Saturday, February 29, 2020, 12:41 [IST]
Other articles published on Feb 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X