ಐಪಿಎಲ್‌ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ

Asia Cup Will Go Ahead In Either Sri Lanka Or Uae: Pcb Ceo

ಏಷ್ಯಾಕಪ್ ಈ ಹಿಂದೆ ನಿಗದಿಯಾಗಿದ್ದ ಸಮಯಕ್ಕೇ ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ವಾಸಿಮ್ ಖಾನ್ ಹೇಳಿದ್ದಾರೆ. ಸದ್ಯ ಮುಂದೂಡಲ್ಪಟ್ಟಿರುವ ಐಪಿಎಲ್ ನಡೆಸುವ ಸಲುವಾಗಿ ಏಷ್ಯಾಕಪ್ ಟೂರ್ನಿಯನ್ನು ರದ್ದುಗೊಳಿಸಬಹುದು ಎಂಬ ಊಹಾಪೋಹವನ್ನು ಅವರು ನೇರವಾಗಿ ತಳ್ಳಿಹಾಕಿದ್ದಾರೆ.

ಕೆಲ ಸಂಗತಿಗಳು ಸರಿಯಾದ ಸಮಯದಲ್ಲಿ ಸ್ಪಷ್ಟವಾಗುತ್ತದೆ. ಶ್ರೀಲಂಕಾದಲ್ಲಿ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಇಲ್ಲ. ಹಾಗಾಗಿ ಅಲ್ಲಿ ಏಷ್ಯಾಕಪ್ ನಡಸಲು ಸಾಧ್ಯವಾಗಬಹುದು ಎಂದು ಭಾವಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ಯುಎಇ ಆಯೋಜನೆಗೆ ಸಿದ್ಧವಾಗಿದೆ ಎಂದು ವಾಸಿಮ್ ಖಾನ್ ಹೇಳಿದ್ದಾರೆ.

ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!

ಈ ಬಾರಿಯ ಏಷ್ಯಾಕಪ್‌ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಳ್ಳಬೇಕಾಗಿತ್ತು. ಅದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ಪಾಳ್ಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಾರಿಯ ಶ್ರೀಲಂಕಾದಲ್ಲಿ ನಡೆಸಲು ಒಪ್ಪಿಗೆಯನ್ನು ನೀಡಿದೆ. ಇದನ್ನು ಸ್ವತಃ ಪಿಸಿಬಿ ಮುಖ್ಯಸ್ಥ ವಾಸಿಮ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಾಸಿಮ್ ಖಾನ್ ಪಾಕಿಸ್ತಾನದ ಮುಂದಿನ ಸರಣಿಗಳ ಬಗ್ಗೆ ಮಾಹಿತಿ ನೀಡಿದರು. ಜಿಂಬಾಬ್ವೆ ವಿರುದ್ಧ ತವರಿಲ್ಲಿ ಸರಣಿಯನ್ನು ಆಯೋಜಿಸಿದ ನಂತರ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ಪಾಕ್ ತೆರಳಲಿದೆ. ಬಳಿಕ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ಪ್ರವಾಸಕ್ಕೆ ಸಿದ್ಧವಾಗಿದೆ. ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಹಾಗೂ ಕೆಲ ಟಿ20 ಪಂದ್ಯಗಳನ್ನು ನಡೆಸಲಾಗುತ್ತದೆ. ಎಂದು ಬಹಿರಂಗಪಡಿಸಿದರು.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಇನ್ನು ಕೊರೊನಾ ವೈರಸ್‌ನ ಕಾರಣದಿಂದಾಗಿ ಪಾಕಿಸ್ತಾನ ಸೂಪರ್ ಲೀಗ್‌ನ ಅಂತಿಮ ಹಂತದ ಐದು ಪಂದ್ಯಗಳು ನಡೆಯಲು ಬಾಕಿ ಉಳಿದಿದೆ. ಅದನ್ನು ಮುಂದುವರಿಸಲು ನವೆಂಬರ್‌ನ ಸಮಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಡುತ್ತಿದೆ ಎಂದು ವಾಸಿಮ್ ಖಾನ್ ತಿಳಿಸಿದರು.

For Quick Alerts
ALLOW NOTIFICATIONS
For Daily Alerts
Story first published: Wednesday, June 24, 2020, 19:30 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X