ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯನ್ ಗೇಮ್ಸ್ 2018: ಕ್ರೀಡಾಹಬ್ಬಕ್ಕೆ ಸಂಪೂರ್ಣ ಸಜ್ಜಾಗಿದೆ ಇಂಡೋನೇಷ್ಯ

Asian Games 2018: Indonesia all set one week out from mega-event

ಜಕಾರ್ತಾ, ಆಗಸ್ಟ್ 11: ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಇನ್ನೊಂದು ವಾರವಷ್ಟೇ ಬಾಕಿಯಿದೆ. ಭಯೋತ್ಪಾದನೆ ಭೀತಿ, ರಸ್ತೆ ಅಪಘಾತ ಮತ್ತು ಜಕಾರ್ತಾದ ಕುಖ್ಯಾತ ವಾಹನ ದಟ್ಟಣೆ ಇತ್ಯಾದಿಗಳ ಮಧ್ಯೆಯೂ ಈ ಪ್ರತಿಷ್ಠಿತ ಕ್ರೀಡಾ ಹಬ್ಬಕ್ಕಾಗಿ ಇಂಡೋನೇಷ್ಯ ಸರ್ವ ರೀತಿಯಲ್ಲೂ ಸಜ್ಜಾಗಿದೆ.

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಘನತೆಗೆ ಧಕ್ಕೆ ತಾರದಿರಿ: ರಾಥೋಡ್ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಘನತೆಗೆ ಧಕ್ಕೆ ತಾರದಿರಿ: ರಾಥೋಡ್

ಆಗಷ್ಟ್ 18ರಿಂದ ಆರಂಭಗೊಂಡು ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟದ ಸ್ಪರ್ಧೆಗಳು ಜಕಾರ್ತಾ ಮತ್ತು ಪಾಲೆಂಬಂಗ್ ತಾಣಗಳಲ್ಲಿ ನಡೆಯಲಿದೆ. 45 ಏಷ್ಯನ್ ರಾಷ್ಟ್ರಗಳಿಂದ ಸುಮಾರು 11,000 ಅಥ್ಲೀಟ್ ಗಳು ಮತ್ತು 5,000 ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟದ ಆತಿಥ್ಯ ವಹಿಸುವುದರಿಂದ ವಿಯೆಟ್ನಾಂ ಹಿಂಸರಿದ ಬಳಿಕ ಕಡಿಮೆ ಅವಧಿಯಲ್ಲಿ (ಹಿಂದಿನ ಸಾರಿ ಆತಿಥ್ಯ ವಹಿಸಿದ ರಾಷ್ಟ್ರಗಳಿಗೆ ಹೋಲಿಸಿದರೆ) ಇಂಡೋನೇಷ್ಯ ದೊಡ್ಡಮಟ್ಟದ ಕ್ರೀಡಾಕೂಟಕ್ಕಾಗಿ ತಯಾರಿ ನಡೆಸಿತ್ತು. ಆದಾಗ್ಯೂ ತಾವು ಕ್ರೀಡಾಕೂಟ ನಡೆಸಲು ಸಂಪೂರ್ಣ ಸಜ್ಜಾಗಿರುವುದಾಗಿ ಆಯೋಜನಾಧಿಕಾರಿಗಳು ತಿಳಿಸಿದ್ದಾರೆ.

'ಕ್ರೀಡಾಕೂಟ ನಡೆಸುವುದಕ್ಕಾಗಿ ಯಾವುದೇ ಸಮಸ್ಯೆಯಿಲ್ಲ. ಒಂದುವೇಳೆ ಇದ್ದರೂ ಅದನ್ನು ನಾವು ಕ್ರೀಡಾಕೂಟ ಆರಂಭಗೊಳ್ಳುವುದಕ್ಕೂ ಮುನ್ನ ಬಗೆಹರಿಸಿಕೊಂಡು ಸಂಪೂರ್ಣ ಸಜ್ಜಾಗಲಿದ್ದೇವೆ' ಎಂದು ಆಯೋಜಕ ಎರಿಕ್ ಥೋಹಿರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ಶನಿವಾರ ಜಕಾರ್ತಾದಲ್ಲಿ ನಡೆಯಲಿರುವ ಕ್ರೀಡಾಕೂಟ ಆರಂಭೋತ್ಸವದ ಟಿಕೆಟ್ ಗಳಲ್ಲಿ ಸುಮಾರು 70 ಶೇ. ಮಾರಾಟವಾಗಿಯಾಗಿದೆ. ಭಾರತದಿಂದ 572 ಕ್ರೀಡಾಪಟುಗಳನ್ನು ಸೇರಿಸಿ ಒಟ್ಟು 800ಕ್ಕೂ ಹೆಚ್ಚು ಮಂದಿ ತೆರಳುವುದರಲ್ಲಿದ್ದು, ಅಧಿಕ ಪದಕಗಳ ನಿರೀಕ್ಷೆಯಿದೆ.

Story first published: Saturday, August 11, 2018, 18:02 [IST]
Other articles published on Aug 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X