ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ವಿರುದ್ಧ ದೂರು ದಾಖಲು

ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ವಿರುದ್ಧ ದೂರು ದಾಖಲು | PRAVEEN KUMAR | ONEINDIA KANNADA
Assault charge filed against former India cricketer Praveen Kumar

ಮೀರತ್, ಡಿಸೆಂಬರ್ 16: ಟೀಮ್ ಇಂಡಿಯಾದ ಮಾಜಿ ಮಧ್ಯಮ ವೇಗಿ ಪ್ರವೀಣ್ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ದಾರಿಯಲ್ಲಿ ಪ್ರವೀಣ್ ಕಾರು ಕ್ಷಣಕಾಲ ನಿಲ್ಲಿಸಿದ್ದಕ್ಕೆ ಒಬ್ಬ ವ್ಯಕ್ತಿ ಮತ್ತು ಅವರ 7 ವರ್ಷದ ಮಗನ ಮೇಲೆ ಕುಮಾರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಪಾಕ್‌ ಕ್ರಿಕೆಟರ್ ಅಬಿದ್ ಅಲಿಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಪಾಕ್‌ ಕ್ರಿಕೆಟರ್ ಅಬಿದ್ ಅಲಿ

ದೀಪಕ್ ಶರ್ಮಾ ಎಂಬವರು ನೀಡಿರುವ ದೂರಿನಲ್ಲಿ, 'ಸ್ಕೂಲ್‌ ಬಸ್, ನನ್ನ ಮಗನನ್ನು ಮನೆಯ ಮುಂದೆ ಡ್ರಾಪ್ ಕೊಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಶನಿವಾರ ಸಂಜೆಯಾದ್ದರಿಂದ ರಸ್ತೆಯಲ್ಲಿ ಆ ಕ್ಷಣ ಕೊಂಚ ಟ್ರಾಫಿಕ್ ಉಂಟಾಯಿತು,' ಎಂದು ತಿಳಿಸಿದ್ದಾರೆ.

ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?

'ಸ್ಕೂಲ್‌ ಬಸ್‌ನ ಹಿಂದೆ ಪ್ರವೀಣ್ ಅವರ ಕಾರಿತ್ತು. ದಾರಿಯಲ್ಲಿ ಅವರ ಕಾರು ಸ್ವಲ್ಪ ಹೆಚ್ಚು ಕಾಲ ನಿಲ್ಲುವಂತಾಯಿತು ಎಂಬ ಕಾರಣಕ್ಕೆ ಕಾರಿನಿಂದ ಇಳಿದು ಬಂದ ಕುಮಾರ್, ನನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು. ನನ್ನ ಮಗನನ್ನು ತಳ್ಳಿಬಿಟ್ಟರು,' ಎಂದು ದೂರಿನಲ್ಲಿ ವಿವರಿಸಲಾಗಿದೆ.

ಟಿ20 ಕ್ರಿಕೆಟ್; ಪಂತ್ ಬದಲು ಕನ್ನಡಿಗನಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿ?ಟಿ20 ಕ್ರಿಕೆಟ್; ಪಂತ್ ಬದಲು ಕನ್ನಡಿಗನಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿ?

ಮೀರತ್‌ನ ಟಿಪಿ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗಿರುವ ಈ ದೂರನ್ನು ಕ್ರಿಕೆಟಿಗ ಪ್ರವೀಣ್ ನಿರಾಕರಿಸಿದ್ದಾರೆ. 'ಈ ಇಲ್ಲಿ ತಪ್ಪಾಗಿ ದೂರು ನೀಡಲಾಗಿದೆ. ನಾನು ಬಾಲಕನನ್ನು ದೂಡಿಲ್ಲ. ಬದಲಾಗಿ ಆ ಮನುಷ್ಯನೆ (ಶರ್ಮಾ) ನನ್ನ ಕುತ್ತಿಗೆಯಿಂದ ಚೈನ್ ಎಳೆದರು, ನನ್ನ ಮುಖಕ್ಕೆ ಗುದ್ದಿದರು,' ಎಂದು ಪ್ರವೀಣ್ ಹೇಳಿದ್ದಾರೆ.

ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ

ಭಾರತ ಪರ ಪ್ರವೀಣ್ ಕುಮಾರ್ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 27 ವಿಕೆಟ್‌ಗಳು, 67 ಏಕದಿನ ಇನ್ನಿಂಗ್ಸ್‌ಗಳಲ್ಲಿ 77 ವಿಕೆಟ್‌ಗಳು, 10 ಟಿ20 ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. ಮಾರ್ಚ್ 30, 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವೀಣ್ ಕೊನೆಯ ಟಿ20ಐ ಪಂದ್ಯವನ್ನಾಡಿದ್ದರು.

Story first published: Monday, December 16, 2019, 11:18 [IST]
Other articles published on Dec 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X