ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'18ರ ಹರೆಯದಲ್ಲಿ ಪೃಥ್ವಿಯ ಶೇ. 10ರಷ್ಟೂ ಆಡುವವರು ನಮ್ಮಲ್ಲಿ ಇರಲಿಲ್ಲ'

At 18, none of us were even 10 per cent of the player Prithvi is: Virat Kohli

ಹೈದರಾಬಾದ್, ಅಕ್ಟೋಬರ್ 15: ಯುವ ಆಟಗಾರ ಪೃಥ್ವಿ ಶಾ ಮೇಲಿನ ಬಿಸಿಸಿಐ ನಂಬಿಕೆ ದುಪ್ಪಟ್ಟಾಗಿದೆ. ಆರಂಭಿಕ ಆಟಗಾರರಾಗಿ ಪೃಥ್ವಿ ಅವರು ಮುರಳಿ ವಿಜಯ್, ಶಿಖರ್ ಧವನ್ ಗಿಂತ ಹೆಚ್ಚು ಭರವಸೆಯ ಆಟಗಾರಾಗಿ ಕಾಣುತ್ತಿದ್ದಾರೆ. ಕಾರಣ ಪೃಥ್ವಿ ಬರೀ ಮೂರು ಇನ್ನಿಂಗ್ಸ್ ಗಳಲ್ಲೇ ಗಳಿಸಿದ 237 ರನ್.

ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳುವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು

ರಾಜ್ ಕೋಟ್ ನಲ್ಲಿ ನಡೆದಿದ್ದ ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡಿದ್ದ ಪೃಥ್ವಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಹೈದರಾಬಾದ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ನಲ್ಲೂ ಪೃಥ್ವಿ ಗಮನಾರ್ಹ 70 ರನ್ ತಂಡಕ್ಕೆ ಸೇರಿಸಿದ್ದರು. ಹೀಗಾಗಿ ಪೃಥ್ವಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

ಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯ

ಪೃಥ್ವಿ ಸಾಧನೆ ಕ್ರಿಕೆಟ್ ವಲಯದ ಎಲ್ಲರಿಂದ ಶ್ಲಾಘಿಸಲ್ಪಡುತ್ತಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಪೃಥ್ವಿಯನ್ನು ಕೊಂಡಾಡಿದ್ದಾರೆ. ತನ್ನ ಆಟದ ಆರಂಭಿಕ ದಿನಗಳನ್ನು ಸ್ಮರಿಸಿದ ಕೊಹ್ಲಿ, 18ರ ಹರೆಯದಲ್ಲಿ ಪೃಥ್ವಿಯ ಶೇ.10ರಷ್ಟೂ ಆಡುವ ಆಟಗಾರರು ನಮ್ಮಲ್ಲಿ ಯಾರೂ ಇರಲಿಲ್ಲ ಎಂದಿದ್ದಾರೆ.

ಒತ್ತಡದ ನಡುವೆಯೂ ಉತ್ತಮ ಆಟ

ಒತ್ತಡದ ನಡುವೆಯೂ ಉತ್ತಮ ಆಟ

ರಾಜ್ ಕೋಟ್ ನಲ್ಲಿನ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲಿ 154 ಎಸೆತಗಳಿಗೆ 134 ರನ್ ಬಾರಿಸಿದ್ದ ಪೃಥ್ವಿ, ಹೈದರಾಬಾದ್ ನಲ್ಲಿನ ದ್ವಿತೀಯ ಟೆಸ್ಟ್ ನಲ್ಲಿ ತನ್ನ ಮೇಲೆ ನಿರೀಕ್ಷೆಯ ಒತ್ತಡವಿದ್ದ ಹೊರತಾಗಿಯೂ 70 ರನ್ ಗಳಿಸಿದ್ದರು.

ಅಜಾಗರೂಕನಲ್ಲ

ಅಜಾಗರೂಕನಲ್ಲ

ಹೈದರಾಬಾದ್ ಟೆಸ್ಟ್ ಬಳಿಕ ಪೃಥ್ವಿಯ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, 'ತನಗೆ ಲಭಿಸಿದ ಅವಕಾಶವನ್ನು ಪೃಥ್ವಿ ಬಹಳ ಸೊಗಸಾಗಿ ಬಳಸಿಕೊಂಡರು. ಪೃಥ್ವಿ ಒಬ್ಬ ನಿರ್ಭೀತ ಆಟಗಾರ. ಆದರೆ ಆತ ಅಜಾಗರೂಕನಲ್ಲ' ಎಂದರು. (ಚಿತ್ರ ಕೃಪೆ: ಎಎನ್‌ಐ)

ಭರ್ಜರಿ 10 ವಿಕೆಟ್ ಜಯ

ಭರ್ಜರಿ 10 ವಿಕೆಟ್ ಜಯ

ಹೈದರಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ vs ಭಾರತ ದ್ವಿತೀಯ ಟೆಸ್ಟ್ ನಲ್ಲಿ ವಿಂಡೀಸ್ ಕೊಂಚ ಉತ್ತಮ ಆಟ ಪ್ರದರ್ಶಿಸಿತಾದರೂ ಭಾರತ 10 ವಿಕೆಟ್ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ 2-0ಯಿಂದ ಸರಣಿ ಜಯಿಸಿತ್ತು. ಮೊದಲ ಟೆಸ್ಟ್ ನಲ್ಲೂ ಭಾರತ 272 ರನ್ ಭರ್ಜರಿ ಜಯ ಗಳಿಸಿತ್ತು.(ಚಿತ್ರದಲ್ಲಿ ಸರಣಿ ಶ್ರೇಷ್ಠ ಪೃಥ್ವಿ)

ಇಂಗ್ಲೆಂಡ್ ನಲ್ಲೇ ಗಮನಿಸಿದ್ದೆವು

ಇಂಗ್ಲೆಂಡ್ ನಲ್ಲೇ ಗಮನಿಸಿದ್ದೆವು

'ಪೃಥ್ವಿ ಶಾ ತನ್ನ ಆಟದ ಬಗ್ಗೆ ಅಷ್ಟೇ ಭರವಸೆ ಉಳ್ಳವರು. ನಾವಿದನ್ನು ಇಂಗ್ಲೆಂಡ್ ನಲ್ಲೇ ಗಮನಿಸಿದ್ದೆವು. ಇಂಗ್ಲೆಂಡ್ ನಲ್ಲಿ ಪೃಥ್ವಿ ನೆಟ್ ಅಭ್ಯಾಸ ನಡೆಸುತ್ತಿದ್ದಾಗ ಅವರ ದಿಟ್ಟ ಆಟದ ಬಗ್ಗೆ ನಮಗೆ ನಂಬಿಕೆ ಮೂಡಿತ್ತು' ಎಂದು ಕೊಹ್ಲಿ ತಿಳಿಸಿದರು.

ಆಸೀಸ್ ಸೀರೀಸ್ ಗೂ ವಿಶ್ವಾಸ ಮತ

ಆಸೀಸ್ ಸೀರೀಸ್ ಗೂ ವಿಶ್ವಾಸ ಮತ

'ಪೃಥ್ವಿಯ ಆಟ ನಮ್ಮೆಲ್ಲರ ನಂಬಿಕೆ ಗಳಿಸಿದೆ. ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದ ಆಯ್ಕೆಗೆ ಸಂಬಂಧಿಸಿ ತಂಡದ ನಾಯಕನ ಮತವನ್ನಂತೂ ಪೃಥ್ವಿ ಖಂಡಿತಾ ಪಡೆಯಲಿದ್ದಾರೆ' ಎಂದು ಕೊಹ್ಲಿ ಹೇಳಿದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಡಿಸೆಂಬರ್ 6ರಿಂದ ಆರಂಭಗೊಳ್ಳಲಿದೆ.

Story first published: Monday, October 15, 2018, 15:20 [IST]
Other articles published on Oct 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X