ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯಾ vs ಆಸ್ಟ್ರೇಲಿಯಾ: ನಾಲ್ಕನೇ ದಿನದಾಟದಲ್ಲಿ ಮತ್ತೆ ಆಸಿಸ್ ಪ್ರೇಕ್ಷಕರ ದುರ್ವರ್ತನೆ

At least 5 fans removed from SCG after Mohammed Siraj complains of another misbehaviour

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಸಿಡ್ನಿ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸಿಸ್ ಪ್ರೇಕ್ಷಕರ ದುರ್ವರ್ತನೆ ಸಾಕಷ್ಟು ಖಂಡನೆಗೆ ಒಳಗಾಗಿದೆ. ಮೂರನೇ ದಿನದಾಟದ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಜನಾಂಗೀಯ ನಿಂದನೆಯ ದೂರು ದಾಖಲಿಸಿದ ಬಳಿಕ ನಾಲ್ಕನೇ ದಿನವೂ ಪ್ರೇಕ್ಷಕರಿಂದ ಇದೇ ರೀತಿಯ ಘಟನೆ ಮರುಕಳಿಸಿದೆ.

ಸಿಡ್ನಿ ಅಂಗಳದಲ್ಲಿ ಪಂದ್ಯದ ನಾಲ್ಕನೇ ದಿನ ಭಾರತ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಪ್ರೇಕ್ಷಕರು ಮತ್ತೆ ನಿಂದಿಸಿರುವ ಘಟನೆ ನಡೆದಿದೆ. ಹೀಗಾಗಿ ಪಂದ್ಯ ಸುಮಾರು 8 ನಿಮಿಷಗಳ ಕಾಲ ಸ್ಥಗಿತವಾಗಿತ್ತು. ಬಳಿಕ ಕೆಲ ಪ್ರೇಕ್ಷಕರ ವಿರುದ್ಧ ತಕ್ಷಣದ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.

ಬಲಿಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳು vs ಆರ್‌ ಅಶ್ವಿನ್: ಕುತೂಹಲಕಾರಿ ಅಂಕಿ ಅಂಶಗಳು!ಬಲಿಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳು vs ಆರ್‌ ಅಶ್ವಿನ್: ಕುತೂಹಲಕಾರಿ ಅಂಕಿ ಅಂಶಗಳು!

ಆರು ಮಂದಿ ಹೊರಕ್ಕೆ

ಆರು ಮಂದಿ ಹೊರಕ್ಕೆ

ಕ್ಯಾಮರೂನ್ ಗ್ರೀನ್ ಎರಡು ಸಿಕ್ಸರ್ ಬಾರಿಸಿದ ಬಳಿಕ ಮೊಹಮ್ಮದ್ ಸಿರಾಜ್ ಬೌಂಡರಿ ಲೈನ್ ಸಮೀಪ ಫೀಲ್ಡಿಂಗ್‌ಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರು ದುರ್ವರ್ತನೆ ತೋರಿದ ಘಟನೆ ನಡೆದಿದೆ. ಈ ವಿಚಾರವನ್ನು ನಾಯಕ ಅಜಿಂಕ್ಯ ರಹಾನೆ ಫೀಲ್ಡ್ ಅಂಪೈರ್‌ಗಳ ಗಮನಕ್ಕೆ ತಂದರು. ಬಳಿಕ ಮೈದಾನದ ಭದ್ರತಾ ಸಿಬ್ಬಂದಿಗಳು ಕನಿಷ್ಠ ಆರು ಜನರನ್ನು ಈ ವಿಚಾರವಾಗಿ ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ.

ಕೋಪಕೊಂಡಿದ್ದ ಸಿರಾಜ್

ಕೋಪಕೊಂಡಿದ್ದ ಸಿರಾಜ್

ವೇಗಿ ಮೊಹಮ್ಮದ್ ಸಿರಾಜ್ ಈ ಬೆಳವಣಿಗೆಯಿಂದ ಸಾಕಷ್ಟು ಕೋಪಗೊಂಡಿದ್ದರು. ಈ ಸಂದರ್ಭದಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ಉಪನಾಯಕ ರೋಹಿತ್ ಶರ್ಮಾ ಮೊಹಮ್ಮದ್ ಸಿರಾಜ್ ಅವರನ್ನು ಸಮಾಧಾನ ಪಡಿಸಿದರು.

ಮೂರನೇ ದಿನದಾಟದಲ್ಲೂ ಹೀಗೆ ಆಗಿತ್ತು

ಮೂರನೇ ದಿನದಾಟದಲ್ಲೂ ಹೀಗೆ ಆಗಿತ್ತು

ಇದೇ ರೀತಿ ಮೂರನೇ ದಿನದಾಟದ ವೇಳೆಯಲ್ಲೂ ಪ್ರೇಕ್ಷಕರಿಂದ ಕಟ್ಟ ನಡವಳಿಕೆ ಕಂಡುಬಂದಿತ್ತು. ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾ ಅಭಿಮಾನಿಗಳು ನಿಂದನೆಯನ್ನು ಮಾಡಿದ್ದರು. ಹೀಗಾಗಿ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಈ ಘಟನೆಯ ಬಗ್ಗೆ ದೂರನ್ನು ನೀಡಿತ್ತು. ಆದರೆ ಇದಾದ ಮರು ದಿನವೇ ಇಂತಾ ಘಟನೆ ಮತ್ತೊಮ್ಮೆ ನಡೆದಿರುವುದು ದುರದೃಷ್ಟಕರ.

Story first published: Sunday, January 10, 2021, 16:30 [IST]
Other articles published on Jan 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X