ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ನೆಪ ಹೇಳಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡರೆ 4 ವರ್ಷ ನಿಷೇಧ

Athletes Face Four-Year Ban For Avoiding Dope Testing With Corona Excuse

ಕೊರೊನಾ ವೈರಸ್‌ನ ಕಾರಣದಿಂದಾಗಿ ಉದ್ದೀಪನ ಪರೀಕ್ಷೆಯ ವಿಚಾರದಲ್ಲಿ ಹೊಸ ನಿಯಮವನ್ನು ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ಕೊರನಾ ವೈರಸ್‌ನ ನೆಪವನ್ನು ಹೇಳಿ ಉದ್ದೇಶಪೂರ್ವಕವಾಗಿ ಕ್ರೀಡಾಪಟುಗಳು ಡೋಪಿಂಗ್ ಟೆಸ್ಟ್‌ ತಪ್ಪಿಸಿಕೊಂಡರೆ ನಾಲ್ಕು ವರ್ಷಗಳ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.

ಉದ್ದೀಪನ ಪರೀಕ್ಷೆಗೆ ಆಗಮಿಸಿ ಡೋಪ್ ಕಂಟ್ರೋಲ್ ಅಧಿಕಾರಿಗಳಿಗೆ ಸ್ಯಾಂಪಲ್ ನೀಡುವ ಸಂದರ್ಭದಲ್ಲಿ ಕ್ರೀಡಾಪಟುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಬೇಕು ಮತ್ತು ಗ್ಲೌಸ್ ಧರಿಸಿರಬೇಕು ಎಂದು ತಿಳಿಸಿದೆ. ಇದಕ್ಕೆ ನಿರಾಕರಿಸಿದರೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಎಂದು ನಾಡಾ ತಿಳಿಸಿದೆ.

ವಿಶ್ವ ದಾಖಲೆಯ ಕ್ಷಣದಲ್ಲಿ ಪತ್ನಿ ಕಣ್ಣೀರು: ಕಾರಣ ಹೇಳಿದ ರೋಹಿತ್ ಶರ್ಮಾವಿಶ್ವ ದಾಖಲೆಯ ಕ್ಷಣದಲ್ಲಿ ಪತ್ನಿ ಕಣ್ಣೀರು: ಕಾರಣ ಹೇಳಿದ ರೋಹಿತ್ ಶರ್ಮಾ

ಡೋಪಿಂಗ್ ಟೆಸ್ಟ್‌ಗೆ ಒಳಪಡುವ ಮುನ್ನ ಕ್ರೀಡಾಪಟುಗಳು ತಾವು ಕೊರೊನಾ ವೈರಸ್‌ನ ಲಕ್ಷಣಗಳನ್ನು ಹೊಂದಿಲ್ಲ ಎಂಬುದನ್ನು ಧೃಡಪಡಿಸಬೇಕಾಗುತ್ತದೆ ಎಂದು ನಾಡಾ ತಿಳಿಸಿದೆ.

ದೇಶದಲ್ಲಿ ಕ್ರೀಡಾಚಟುವಟಿಕೆಗಳು ಮತ್ತು ರಾಷ್ಟ್ರೀಯ ಶಿಬಿರಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ನಾಡಾ ಟೀಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಸಂಭಾವ್ಯ ಕ್ರೀಡಾಪಟುಗಳ ಉದ್ದೀಪನಾ ಪರೀಕ್ಷೆಗೆ ಸಜ್ಜಾಗಿದೆ. ಅದಕ್ಕಾಗಿ ಈ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ.

ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!ವಿರಾಟ್ ಕೊಹ್ಲಿ ಅಲ್ಲ : ಯಾರು ಶ್ರೇಷ್ಠ ಪ್ರಶ್ನೆಗೆ ಜಾಫರ್ ನೀಡಿದ ಉತ್ತರ ಇದು!

ನಾಡಾದ ಉದ್ದೀಪನಾ ಪುನರಾರಂಭದಲ್ಲಿ ಮೊದಲಿಗೆ ಟೊಕಿಯೋ ಒಲಿಂಪಿಕ್ಸ್ ಸಂಭಾವ್ಯರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪಟ್ಟಿಯಲ್ಲಿ 110 ಕ್ರೀಡಾಪಟುಗಳಿದ್ದಾರೆ. ಆಥ್ಲೀಟ್‌ಗಳು ಮತ್ತು ವೇಟ್‌ಲಿಫ್ಟರ್‌ಗಳನ್ನು ಪಟಿಯಾಲದ ಎನ್‌ಐಎಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಹಿಳಾ ಮತ್ತು ಪುರುಷರ ಹಾಕಿ ತಂಡದ ಉದ್ದೀಪನ ಪರೀಕ್ಷೆ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಡೆಯಲಿದೆ.

Story first published: Sunday, June 7, 2020, 13:57 [IST]
Other articles published on Jun 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X