ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಷಸ್ ಸ್ಪಾಟ್ ಫಿಕ್ಸಿಂಗ್, ಭಾರತೀಯ ಮೂಲದ ಬುಕ್ಕಿಗಳು ಯಾರು?

By Mahesh

ಬೆಂಗಳೂರು, ಡಿಸೆಂಬರ್ 14: ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಷಸ್ ಸರಣಿಯ ಮೂರನೇ ಪಂದ್ಯ ಇಂದು ಆರಂಭಗೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ಫಿಕ್ಸಿಂಗ್ ಬಾಂಬ್ ಸಿಡಿದಿದೆ.

ಭಾರತೀಯ ಮೂಲದ ಬುಕ್ಕಿಗಳು ಈ ಪಂದ್ಯ ಫಿಕ್ಸ್ ಮಾಡಲು ಯತ್ನಿಸಿದ ಬಗ್ಗೆ ದಿ ಸನ್ ವರದಿ ಮಾಡಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನಿಖೆಗೆ ಮುಂದಾಗಿದೆ.

ಪಂದ್ಯದ ಬಗ್ಗೆ ಮಾಹಿತಿ ಸೋರಿಕೆ, ಸ್ಪಾಟ್ ಫಿಕ್ಸಿಂಗ್ ಮಾಡಲು ಕೆಲ ಮಿಲಿಯನ್ ಪೌಂಡ್ ಗಳಷ್ಟು ಮೊತ್ತವನ್ನು ಇಬ್ಬರು ಬುಕ್ಕಿಗಳು ಡಿಮ್ಯಾಂಡ್ ಮಾಡಿದ್ದಾರೆ. ಕ್ರಿಕೆಟ್‌ನಲ್ಲಿನ ಬೆಟ್ಟಿಂಗ್ ಈಗ ಕೇವಲ ಫಲಿತಾಂಶದ ಮೇಲಷ್ಟೇ ನಡೆಯುವುದಲ್ಲ.ಸ್ಪಾಟ್ ಬೆಟ್ಟಿಂಗ್ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಹಾಗೆ ಇದೆಯಾದರೂ ಈಗ ಟೆಸ್ಟ್ ಕ್ರಿಕೆಟ್ ಗೂ ಕಾಲಿಸಿರುವುದು ಆತಂಕಕಾರಿ ಯಾರು ಈ ಇಬ್ಬರು ಬುಕ್ಕಿಗಳು, ಸನ್ ನಡೆಸಿದ ಕುಟುಕು ಕಾರ್ಯಾಚರಣೆ ಹೇಗೆ ನಡೆಯಿತು.. ವಿವರ ಮುಂದಿದೆ..

ಸ್ಪಾಟ್ ಫಿಕ್ಸಿಂಗ್ ಮೊತ್ತ ಎಷ್ಟು? ಯಾರು ಬುಕ್ಕಿಗಳು?

ಸ್ಪಾಟ್ ಫಿಕ್ಸಿಂಗ್ ಮೊತ್ತ ಎಷ್ಟು? ಯಾರು ಬುಕ್ಕಿಗಳು?

ಭಾರತೀಯ ಮೂಲದ ಸೊಬರ್ಸ್ ಜೊಬನ್ ಹಾಗೂ ಪ್ರಿಯಾಂಕ್ ಅವರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಫಿಕ್ಸ್ ಮಾಡಲು ಸರಿ ಸುಮಾರು 140,000 ಪೌಂಡ್ ಬೇಡಿಕೆ ಒಡ್ಡಿದ್ದರು.
ಫಿಕ್ಸ್ ಮಾಡುವುದು ಹೇಗೆ?
* ಯಾವ ಓವರ್ ಗೆ ಎಷ್ಟು ರನ್ ಎಂದು ನಾವು ಹೇಳುತ್ತೇವೆ. ಆಮೇಲೆ ಓವರ್ ಗೆ ಎಷ್ಟು ಬೇಕೋ ಅಷ್ಟು ಬೆಟ್ ಕಟ್ಟಿ.
ಫಿಕ್ಸ್ ಆಗಿರೋದು ಗೊತ್ತಾಗೋದು ಹೇಗೆ?
* ಮೈದಾನದಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆಟಗಾರರು ಸಿಗ್ನಲ್ ನೀಡುತ್ತಾರೆ. ಗ್ಲೌವ್ಸ್ ಬದಲಾಯಿಸುವುದು, ಮುಂತಾದ ಸಿಗ್ನಲ್ ನೀಡುತ್ತಾರೆ.

ಆಸ್ಟ್ರೇಲಿಯಾ ಟೀಮ್ ಸದಸ್ಯನ ಸಾಥ್

ಆಸ್ಟ್ರೇಲಿಯಾ ಟೀಮ್ ಸದಸ್ಯನ ಸಾಥ್

ಮೈದಾನದಲ್ಲಿರುವ ಆಟಗಾರನ ಸಿಗ್ನಲ್ ಸಿಕ್ಕ ಬಳಿಕ ಪ್ರೇಕ್ಷಕರ ಬಳಿ ಕುಳಿತ ಸ್ಪಾಟರ್ ಒಬ್ಬ ಬುಕ್ಕಿಗಳಿಗೆ ಸೂಚನೆ ನೀಡುತ್ತಾನೆ. ಕ್ಷಣಾರ್ಧದಲ್ಲಿ ಮಿಲಿಯನ್ ಗಟ್ಟಲೇ ಹಣದ ಬೆಟ್ಟಿಂಗ್ ಭೂಗತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ನಡೆಯಲಿದೆ.
ಆಸ್ಟ್ರೇಲಿಯಾ ತಂಡದ ಮೆದು ಸ್ವಭಾವದ ಆಟಗಾರನೊಬ್ಬನನ್ನು ಸದ್ಯಕ್ಕೆ ಟಾರ್ಗೆಟ್ ಮಾಡಿದ್ದೇವೆ. ವಿಶ್ವಕಪ್ ವಿಜೇತ ಆಲ್ ರೌಂಡರ್ ಒಬ್ಬ ಇದಕ್ಕೆ ನೆರವು ನೀಡುತ್ತಿದ್ದಾನೆ ಎಂದು ಬುಕ್ಕಿಗಳು ಹೇಳಿದ್ದಾರೆ.

ಜೊಬನ್ ಯಾರು?

ಜೊಬನ್ ಯಾರು?

ಭಾರತದ ರಾಜ್ಯವೊಂದರ ಪರ ಆಡಿದ್ದ ಅನುಭವವಿರುವ ಜೊಬನ್ ಈಗ ಪ್ರಮುಖ ಬುಕ್ಕಿಯಾಗಿದ್ದಾರೆ. 31 ವರ್ಷ ವಯಸ್ಸಿನ ಜೊಬನ್ ಒಮ್ಮೆ ವಿರಾಟ್ ಕೊಹ್ಲಿ ನಾಯಕತ್ವದ ದೆಹಲಿ ವಿರುದ್ಧ ಆಡಿದ್ದಾನೆ ಕೂಡಾ.

ದೆಹಲಿಯ ವಸಂತ್ ವಿಹರ್ ನಲ್ಲಿ ನೆಲೆಸಿದ್ದು, ರಷ್ಯಾದ ಮಾರ್ಷಲ್ ಆರ್ಟಿಸ್ಟ್ ಪಟುವಿನೊಂದಿಗೆ ಮದುವೆ ಗೊತ್ತಾಗಿದೆ.

ಪ್ರಿಯಾಂಕ್ ಸಕ್ಸೇನಾ ಯಾರು?

ಪ್ರಿಯಾಂಕ್ ಸಕ್ಸೇನಾ ಯಾರು?

ಉದ್ಯಮಿ ಪ್ರಿಯಾಂಕ್ ಸಕ್ಸೇನಾ ಹಾಗೂ ಜೊಬೆನ್ ಇಬ್ಬರು ಜೊತೆಗಾರರು. ತಂಬಾಕು ಹಾಗೂ ಮಸಾಲೆ ಪದಾರ್ಥಗಳನ್ನು ದಕ್ಷಿಣ ಆಫ್ರಿಕಾಕ್ಕೆ ಮಾರುತ್ತಿದ್ದಾನೆ.

ಭ್ರಷ್ಟ ಕ್ರಿಕೆಟರ್ ಗಳ ಜತೆ ಸಂಪರ್ಕದಲ್ಲಿದ್ದು, ಜೊಬೆನ್ ತರುವ ಡೀಲ್ ಗಳನ್ನು ಬೆಳೆಸುವುದು ಈತನ ಕೆಲಸ.

ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಎಂದರೇನು ?

ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಎಂದರೇನು ?

ಟಾಸ್ ಗೆಲ್ಲುವುದರಿಂದ ಹಿಡಿದು ಆಟಗಾರರ ಮತ್ತು ಬೌಲರುಗಳ ನಿರ್ವಹಣೆಯ ಮೇಲೆ ಪ್ರತಿಯೊಂದು ಓವರಿನ ಆಧಾರದಲ್ಲೂ ಬೆಟ್ಟಿಂಗ್ ನಡೆಯುತ್ತದೆ. ಪ್ರತಿ ಓವರಿನಲ್ಲಿ ಎಷ್ಟು ರನ್ ಹೋಗುತ್ತದೆ, ಮೇಡನ್ ಆಗುತ್ತದೋ ಇಲ್ಲವೋ, ವಿಕೆಟ್ ಬೀಳುತ್ತದೋ ಇಲ್ಲವೋ ಎಂದು ಕೂಡ ಬೆಟ್ ಕಟ್ಟಬಹುದು. ಹೊಸದಾಗಿ ಕ್ರೀಸಿಗೆ ಬರುವ ಬ್ಯಾಟ್ಸ್‌ಮನ್ 10 ರನ್ ಗಳಿಸುತ್ತಾನೋ ಇಲ್ಲವೋ ಅಥವಾ ಮುಂದಿನ ಓವರಿನಲ್ಲಿ ಬೌಂಡರಿ ಬಾರಿಸುತ್ತಾನೋ ಇಲ್ಲವೋ ಮುಂಚಿತಾಗಿಯೂ ಬೆಟ್ ಕಟ್ಟಲಾಗುತ್ತದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X