ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೈಂಗಿಕ ದೌರ್ಜನ್ಯ ಆರೋಪ: ಮಹಿಳಾ ಕ್ರಿಕೆಟ್ ತಂಡದ ಕೋಚ್ ಅಮಾನತು

Atul Bedade Suspended As Baroda Women’s Cricket Coach For Alleged Sexual Harassment

ಬರೋಡ: ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಮಹಿಳಾ ಕ್ರಿಕೆಟ್ ತಂಡದ ಕೋಚ್‌ನನ್ನು ಸಮಾನತು ಗೊಳಿಸಿರುವ ಘಟನೆ ನಡೆದಿದೆ. ಅತುಲ್ ಬೆಡಾಡೆ ಎಂಬ ಕೋಚ್ ವಿರುದ್ಧ ಈ ಆರೋಪ ಕೇಳಿ ಬಂದಿದ್ದು ತಕ್ಷಣವೇ ಈತನನ್ನು ಕರ್ತವ್ಯದಿಂದ ಅಮಾನತುಗೊಳಿಸುವ ಆದೇಶವನ್ನು ನೀಡಿಲಾಗಿದೆ.

ಅತುಲ್ ಬೆಡಾಡೆ ಬರೋಡಾ ಕ್ರಿಕೆಟ್ ಅಸೋಸಿಯೇಶನ್‌(ಬಿಸಿಎ)ನ ಕೋಚ್‌ ಆಗಿದ್ದರು. ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತಿಯನ್ನು ನೀಡುತ್ತಿದ್ದರು. ಸದ್ಯ ಆರೋಪದ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸಲು ತಂಡವನ್ನು ರಚನೆ ಮಾಡಲಾಗಿದ ಎಂದು ಬರೊಡಾ ಕ್ರಿಕೆಟ್ ಅಸೋಸಿಯೇಶನ್ ಹೇಳಿದೆ.

ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್

ಈ ಆರೋಪದ ಹಿನ್ನೆಲೆಯಲ್ಲಿ ಕೋಚ್ ಅತುಲ್ ಬೆಡಾಡೆಗೆ ಅಮಾನತು ಪತ್ರವನ್ನು ಬಿಸಿಎ ಕಳುಹಿಸಿದೆ. ಆದರೆ ಈ ಪತ್ರದಲ್ಲಿ ಅತುಲ್ ಬೆಡಾಡೆ ವಿರುದ್ಧ ನಿಖರವಾಗಿ ಯಾವುದೇ ಆರೋಪವನ್ನು ಮಾಡಿಲ್ಲ. ಆದರೆ 'ದೈಹಿಕತೆಯ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳು', 'ತಂಡದ ಸದಸ್ಯರ ಸ್ಥೈರ್ಯವನ್ನು ನಿರುತ್ಸಾಹಗೊಳಿಸುವ ಪ್ರತಿಕ್ರಿಯೆಗಳು', 'ಮಹಿಳಾ ತಂಡದ ತರಬೇತುದಾರನ ಅನಿಯಂತ್ರಿತ ಕೋಪ', 'ಅಸಂಸದೀಯ ಭಾಷೆಯ ಬಳಕೆ', ಮತ್ತು 'ಲಿಂಗ ಸಂವೇದನೆಯನ್ನು ಮರೆತುಬಿಡುವ ವರ್ತನೆ' ಈ ವಿಚಾರಗಳನ್ನು ಪಟ್ಟಿ ಮಾಡಲಾಗಿದೆ ಎಂದು ಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್‌ ಕೊರೊನಾವೈರಸ್ ಸೋಂಕಿತಸ್ಕಾಟ್ಲೆಂಡ್ ಕ್ರಿಕೆಟರ್ ಮಜೀದ್ ಹಕ್‌ ಕೊರೊನಾವೈರಸ್ ಸೋಂಕಿತ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಎ ಕಾರ್ಯದರ್ಶಿ ಅಜಿತ್ ಲೆಲೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬೆಡಾಡೆ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಆರೋಪವನ್ನು ಹೊತ್ತಿರುವ ಅತುಲ್ ಬೆಡಾಡೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ವಿರುದ್ಧ ಈ ರೀತಿ ಬಂದಿರುವ ಆರೋಪ ಆಶ್ಚರ್ವನ್ನುಂಟು ಮಾಡುತ್ತಿದೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ವಿಚಾರವಾಗಿ ನನ್ನಕಡೆಯಿಂದ ಶೀಘ್ರದಲ್ಲೇ ಸ್ಪಷ್ಟೀಕರಣವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

Story first published: Sunday, May 3, 2020, 10:49 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X