ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾನಸಿಕ ಒತ್ತಡಕ್ಕೆ ಮತ್ತೋರ್ವ ಕ್ರಿಕೆಟರ್ ವಿರಾಮ

ಆಸ್ಟ್ರೇಲಿಯಾ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯದ ಕಾರಣ ನೀಡಿ ತಾತ್ಕಾಲಿಕವಾಗಿ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಮ್ಯಾಕ್ಸ್‌ವೆಲ್ ಈ ನಿರ್ಧಾರದ ನಂತರ ಕ್ರಿಕೆಟ್‌ ಆಟಗಾರರ ಮಾನಸಿಕ ಆರೋಗ್ಯ ಹಾಗೂ ಒತ್ತಡಗಳ ಕುರಿತಾಗಿ ಸಾಕಷ್ಟು ಚರ್ಚೆ ನಡೆದಿದೆ. ಇದರ ಬೆನ್ನಿಗೇ ಆಸ್ಟ್ರೇಲಿಯಾದ ಮತ್ತಿಬ್ಬರು ಆಟಗಾರರು ಇದೇ ಕಾರಣವನ್ನು ನೀಡಿ ತಾತ್ಕಾಲಿಕ ವಿರಾಮವನ್ನು ಪಡೆದುಕೊಂಡಿದ್ರು. ಈ ಲಿಸ್ಟ್‌ಗೆ ಇದೀಗ ಮೊತ್ತೋರ್ವ ಕ್ರಿಕೆಟರ್‌ ಸೇರ್ಪಡೆಯಾಗಿದ್ದಾರೆ.

ಆ ದಿನ ನನಗೆ ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತು: ವಿರಾಟ್ ಕೊಹ್ಲಿಆ ದಿನ ನನಗೆ ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತು: ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್ ಸೋಫೀ ಮೊಲಿನೆಕ್ಸ್‌ ಇದೀಗ ಮಾನಸಿಕ ಆರೋಗ್ಯದ ಕಾರಣವನ್ನು ನೀಡಿ ವಿರಾಮವನ್ನು ಬಯಸಿದ್ದಾರೆ.ಮಹಿಳಾ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮೊನೆಲಿಕ್ಸ್‌ ಈಗಾಗಲೇ ತಂಡದ ಮ್ಯಾನೇಜ್‌ಮೆಂಟ್‌ಗೆ ಈ ವಿಚಾರವಾಗಿ ಮನವಿಯನ್ನು ಮಾಡಿದ್ದು ಮ್ಯಾನೇಜ್‌ಮೆಂಟ್‌ ಕೂಡ ಈ ಮನವಿಗೆ ಪೂರಕವಾಗಿ ಸ್ಪಂದಿಸಿ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ.

Aussie cricketer takes break over mental health

ರೆನೆಗೇಡ್ಸ್‌ ತಂಡದ ಮುಖ್ಯ ಕೋಚ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ತಂಡ ಸಂಪೂರ್ಣ ಸಹಕಾರವನ್ನು ಮೊಲಿನೆಕ್ಸ್‌ಗೆ ನೀಡಲಿದೆ. ಅವರಿಗೆ ಬೇಕಾದ ಸಮಯಾವಕಾಶ ನೀಡುತ್ತಿದ್ದು, ತಂಡ ಮೊಲಿನೆಕ್ಸ್ ಜೊತೆಗಿರಲಿದೆ ಎಂದಿದ್ದಾರೆ. ಮೊಲಿನೆಕ್ಸ್ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡವನ್ನು 1 ಟೆಸ್ಟ್‌ 3 ಏಕದಿನ 17 ಟಿಟ್ವೆಂಟಿ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ.

ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ ಪಡೆದ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ ಪಡೆದ ಆಲ್ ರೌಂಡರ್ ಮ್ಯಾಕ್ಸ್ ವೆಲ್

ಮಾರ್ಕಸ್‌ ಟ್ರೆಸ್ಕೋಥಿಸ್ 2016ರಲ್ಲಿ ಮಾನಸಿಕ ಸಮಸ್ಯೆಯ ಕಾರಣವನ್ನು ನೀಡಿ ವಿಶ್ರಾಂತಿಯನ್ನು ಬಯಸಿದ್ದರು. ಆದರೆ ಆ ಸಂದರ್ಭದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಮ್ಯಾಕಕ್ಸ್‌ವೆಲ್ ಹೇಳಿಕೆಯ ಬಳಿಕ ಈ ವಿಚಾರಕ್ಕೆ ಪೂರಕವಾದ ಧ್ವನಿ ಕೇಳಿ ಬರುತ್ತಿದೆ. ಭಾರತೀಯ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡ ತಾನು ಮಾನಸಿಕ ಒತ್ತಡವನ್ನು ಅನುಭವಿಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದರು. ಇಂಗ್ಲೆಂಡ್ ತಂಡದ ಆಟಗಾರ ಮೊಯಿನ್ ಅಲಿ ಕೂಡ ಹೇಳಿಕೆಯನ್ನು ನೀಡಿದ್ದಾರೆ.

Story first published: Friday, November 22, 2019, 16:39 [IST]
Other articles published on Nov 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X