ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!

ಬೆಂಗಳೂರು: ನಗದು ಶ್ರೀಮಂತ ಇಂಡಿಯನ್ ಪ್ರೀಮಿಯರ್ ಲೀಗ್‌ ಆರಂಭಕ್ಕೆ ಇನ್ನು ಒಂದು ತಿಂಗಳು ಬಾಕಿಯಿದೆ. ಭಾರತದ ಅದ್ದೂರಿ ಟಿ20 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಟೂರ್ನಿಗೆ ಹಿನ್ನಡೆಯ ಸಂಗತಿಯೆಂದು ಕೇಳಿಬಂದಿದೆ. ಈ ಐಪಿಎಲ್‌ ಸೀಸನ್‌ನ ಮೊದಲ ವಾರದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ತಂಡಗಳ ಆಟಗಾರರು ಪಾಲ್ಗೊಳ್ಳುತ್ತಿಲ್ಲ ಎಂದು ವರದಿಯೊಂದು ಹೇಳಿದೆ.

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

ವರದಿಯಂತೆ ಈ ಎರಡು ತಂಡಗಳ ಆಟಗಾರರು ಮೊದಲ ವಾರದಲ್ಲಿ ಆಡದಿದ್ದರೆ ಆಕರ್ಷಣೀಯ ತಂಡಗಳಾದ ಸನ್ ರೈಸರ್ಸ್ ಹೈದಾರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಹೊಡೆತ ಬೀಳಲಿದೆ.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

2020ರ ಐಪಿಎಲ್ ಸೀಸನ್‌ ಆರಂಭದಲ್ಲಿ ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾ ಆಟಗಾರರು ಯಾಕೆ ಆಡುತ್ತಿಲ್ಲ? ಯಾವ ತಂಡದಿಂದ ಯಾರೆಲ್ಲ ಮಿಸ್ಸಾಗುತ್ತಿದ್ದಾರೆ? ಇಲ್ಲಿದೆ ವಿವರಣೆ.

ಆಡದಿರಲು ಏನು ಕಾರಣ?

ಆಡದಿರಲು ಏನು ಕಾರಣ?

ಇಂಗ್ಲೆಂಡ್‌ಗೆ ಪ್ರವಾಸ ಹೋಗುವ ಆಸ್ಟ್ರೇಲಿಯಾ ತಂಡ ಅಲ್ಲಿ ಸೆಪ್ಟೆಂಬರ್ 4ರಿಂದ ಸೆಪ್ಟೆಂಬರ್ 16ರ ವರೆಗೆ ಟಿ20ಐ ಮತ್ತು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಐಪಿಎಲ್ ಕ್ವಾರಂಟೈನ್ ದಿನಗಳಲ್ಲಿ ಬದಲಾವಣೆ ತರುವ ಮೂಲಕ ಅನುಕೂಲ ಮಾಡಿಕೊಡುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕೇಳಿಕೊಂಡಿದ್ದವು. ಆದರೆ ಬಿಸಿಸಿಐ ಇದಕ್ಕೆ ಅನುಮೋದನೆ ನೀಡಿಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರಿಗೆ ಐಪಿಎಲ್ ಮೊದಲ ವಾರದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಸೆಪ್ಟೆಂಬರ್ 19ರಿಂದ ಆರಂಭ

ಸೆಪ್ಟೆಂಬರ್ 19ರಿಂದ ಆರಂಭ

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 13ನೇ ಆವೃತ್ತಿ ಐಪಿಎಲ್ ಆರಂಭಗೊಳ್ಳಲಿದೆ. ಸೆಪ್ಟೆಂಬರ್ 19ರಂದು ಶುರುವಾಗುವ ಟೂರ್ನಿ ನವೆಂಬರ್ 10ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಶಾರ್ಜಾ, ದುಬೈ ಮತ್ತು ಅಬುಧಾಬಿ ತಾಣಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ.

3 ತಂಡಗಳಿಗೆ ಹೆಚ್ಚು ಹೊಡೆತ

3 ತಂಡಗಳಿಗೆ ಹೆಚ್ಚು ಹೊಡೆತ

ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ಆರಂಭದಲ್ಲಿ ಆಡದಿದ್ದರೆ ಟೂರ್ನಿ ಕೊಂಚ ಮಟ್ಟಿಗೆ ಕಳೆಗುಂದಲಿದೆಯಲ್ಲದೆ, ಮುಖ್ಯವಾಗಿ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಹೆಚ್ಚು ಹೊಡೆತ ಬೀಳಲಿದೆ. ಟೂರ್ನಿ ಆರಂಭದಲ್ಲೇ ಈ ತಂಡಗಳು ನೀರಸ ಪ್ರದರ್ಶನ ನೀಡುವ ಸಾಧ್ಯತೆಯಿದೆ.

ಯಾರ್ಯಾರು ಮಿಸ್ಸಾಗ್ತಾರೆ?

ಯಾರ್ಯಾರು ಮಿಸ್ಸಾಗ್ತಾರೆ?

* ಐಪಿಎಲ್ ಮೊದಲ ವಾರದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ನಿಜಕ್ಕೂ ಮೈದಾನಕ್ಕಿಳಿಯದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ನಾಯಕ ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್) ಮಿಸ್ ಆಗಲಿದ್ದಾರೆ.

* ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಾಯಕ ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಜೋಫ್ರಾ ಆರ್ಚರ್ (ಇಂಗ್ಲೆಂಡ್), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಟಾಮ್ ಕರನ್ (ಇಂಗ್ಲೆಂಡ್), ಜೋಸ್ ಬಟ್ಲರ್ (ಇಂಗ್ಲೆಂಡ್) ಆಡಲಾರರು.

* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಜೋಶುವಾ ಫಿಲಿಪ್ (ಆಸ್ಟ್ರೇಲಿಯಾ), ಮೊಯೀನ್ ಅಲಿ (ಇಂಗ್ಲೆಂಡ್) ಕಾಣಸಿಗಲಾರರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, August 14, 2020, 11:32 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X