ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾ

Ashes Test
ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್ ಇಲೆವೆನ್ ತಂಡವನ್ನ ಘೋಷಿಸಿದೆ. ಹೊಸ ನಾಯಕ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಕಾಂಗರೂ ಪಡೆ ಇಂಗ್ಲೆಂಡ್ ವಿರುದ್ಧ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದೆ.

ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ಲೇಯಿಂಗ್ 11 ತಂಡವನ್ನ ಆಸೀಸ್ ಕಣಕ್ಕಿಳಿಸಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಡಿಸೆಂಬರ್ 8ರ ಬುಧವಾರದಿಂದ ಪ್ರಾರಂಭವಾಗುವ ಆ್ಯಷಸ್ ಟೆಸ್ಟ್‌ಗೆ ಆಸ್ಟ್ರೇಲಿಯಾ ಪರ ಅಲೆಕ್ಸ್‌ ಕ್ಯಾರಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ.

ಅಲೆಕ್ಸ್ ಕ್ಯಾರಿಗೆ ತಂಡದಲ್ಲಿ ಸ್ಥಾನ

ಅಲೆಕ್ಸ್ ಕ್ಯಾರಿಗೆ ತಂಡದಲ್ಲಿ ಸ್ಥಾನ

ಈಗಾಗಲೇ ಆಸೀಸ್ ಪರ 45 ಏಕದಿನ ಪಂದ್ಯಗಳು, 38 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅಲೆಕ್ಸ್ ಕ್ಯಾರಿ ದೀರ್ಘ ಸ್ವರೂಪದ ಕ್ರಿಕೆಟ್ ಆಡಲು ಮೊದಲ ಬಾರಿಗೆ ಆಸೀಸ್ ತಂಡ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ 45 ಪ್ರಥಮ ದರ್ಜೆ ಪಂದ್ಯಗಳನ್ನು ಅಲೆಕ್ಸ್ ಆಡಿದ್ದಾರೆ, ಅಲ್ಲಿ ಅವರು ಐದು ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ ಸುಮಾರು 2500 ರನ್ ಗಳಿಸಿದ್ದಾರೆ.

ವಿವಾದಾತ್ಮಕ ಸೆಕ್ಸ್‌ಟಿಂಗ್ ಪ್ರಕರಣದ ಬಳಿಕ ಆಸೀಸ್ ಮಾಜಿ ನಾಯಕ ಟಿಮ್ ಪೈನ್ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ಯಾಟ್‌ ಕಮಿನ್ಸ್‌ರನ್ನು ನೂತನ ಟೆಸ್ಟ್ ತಂಡದ ನಾಯಕನಾಗಿ, ಸ್ಟಿವನ್ ಸ್ಮಿತ್‌ರನ್ನ ಉಪನಾಯಕನನ್ನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ.

ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್‌ ನಡುವೆ ತೀರ್ವ ಸ್ಪರ್ಧೆ

ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್‌ ನಡುವೆ ತೀರ್ವ ಸ್ಪರ್ಧೆ

ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ನಡುವೆ ಒಬ್ಬರನ್ನು ಆಯ್ಕೆ ಮಾಡಲು ತುಂಬಾ ಕಷ್ಟವಾಯಿತು ಎಂದು ಆಸೀಸ್ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ. 34ರ ಹರೆಯದ ಖವಾಜಾ ಅವರು ಈ ತಿಂಗಳ ಕೊನೆಯಲ್ಲಿ 35 ವರ್ಷಕ್ಕೆ ಕಾಲಿಡಲಿದ್ದಾರೆ ಮತ್ತು ಅವರು ಸ್ವಲ್ಪ ಸಮಯದವರೆಗೆ ತಂಡದಿಂದ ಹೊರಗಿದ್ದರು. ಆದ್ರೆ ಮತ್ತೆ ಕಾಂಗರೂ ಪಡೆಯ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ

ನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರ

ಬಲಿಷ್ಠ ಬೌಲಿಂಗ್‌ ಪಡೆಯೇ ಆಸೀಸ್‌ಗೆ ಆಧಾರ

ಬಲಿಷ್ಠ ಬೌಲಿಂಗ್‌ ಪಡೆಯೇ ಆಸೀಸ್‌ಗೆ ಆಧಾರ

ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ವೇಗದ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನಥಾನ್ ಲಿಯಾನ್ ಅವರ ಏಕೈಕ ಸ್ಪಿನ್-ಬೌಲಿಂಗ್ ಆಯ್ಕೆಯಾಗಿ ಉಳಿದಿದ್ದಾರೆ. ಇತ್ತೀಚೆಗಷ್ಟೇ ಕೋಚ್ ಜಸ್ಟಿನ್ ಲ್ಯಾಂಗರ್, ಬ್ರಿಸ್ಬೇನ್‌ನಲ್ಲಿ ಪಿಚ್‌ಗಳ ಪರಿಸ್ಥಿತಿಗಳ ಹೊರತಾಗಿಯೂ ಮೂವರ ಪೇಸರ್ ಕಣಕ್ಕಿಳಿಯುವ ಸಿದ್ಧತೆಗಳ ಕುರಿತು ಮಾತನಾಡಿದರು.

ತಮ್ಮ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ ಹೇಳಿದ್ದಿಷ್ಟು

ಆಸ್ಟ್ರೇಲಿಯಾ ಪ್ಲೇಯಿಂಗ್ 11:

ಆಸ್ಟ್ರೇಲಿಯಾ ಪ್ಲೇಯಿಂಗ್ 11:

ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೋಶ್ ಹೇಜಲ್‌ವುಡ್

ಪ್ಲೇಯಿಂಗ್‌ 11 ಘೋಷಣೆ ಮಾಡದ ಇಂಗ್ಲೆಂಡ್

ಪ್ಲೇಯಿಂಗ್‌ 11 ಘೋಷಣೆ ಮಾಡದ ಇಂಗ್ಲೆಂಡ್

ಇಂಗ್ಲೆಂಡ್ ನಾಯಕ, ಜೋ ರೂಟ್, ಇದಕ್ಕೆ ವಿರುದ್ಧವಾಗಿ, ಮೊದಲ ಟೆಸ್ಟ್‌ಗೆ ಯಾವ ಆಟಗಾರರನ್ನ ಆಡಿಸಲಿದ್ದೇವೆ ಎಂದು ಘೋಷಿಸಲು ನಿರಾಕರಿಸಿದ್ದಾರೆ. ಬ್ರಿಸ್ಬೇನ್‌ನ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ಕುರಿತು ಅಂತಿಮ ಕರೆಯನ್ನು ತೆಗೆದುಕೊಳ್ಳುವ ಮೊದಲು ಪರಿಸ್ಥಿತಿಗಳನ್ನು ಸ್ವಲ್ಪ ಹೆಚ್ಚು ನಿರ್ಣಯಿಸುವ ಕುರಿತು ಅವರು ಮಾತನಾಡಿದರು.

"ನಾವು ಟೇಬಲ್ ಮೇಲೆ ಎಲ್ಲಾ ಆಯ್ಕೆಗಳನ್ನು ಹೊಂದಿದ್ದೇವೆ (ಆದರೆ) ನಾವು ಇನ್ನೂ ತಂಡವನ್ನು ಹೆಸರಿಸಲು ಹೋಗುತ್ತಿಲ್ಲ" ಎಂದು ರೂಟ್ ಹೇಳಿದರು. ಒಂದು ವೇಳೆ ಪ್ಲೇಯಿಂಗ್ 11 ಘೋಷಿಸಿದ್ರೆ, ಆಸ್ಟ್ರೇಲಿಯಾ ಅದಕ್ಕೆ ತಕ್ಕನಾದ ರಣತಂತ್ರ ಹೆಣೆಯಬಹುದು ಎಂಬ ಕಾರಣವೂ ಇರಬಹುದು.

Story first published: Monday, December 6, 2021, 10:29 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X