ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಧ್ಯಮ ವೇಗದ ಬೌಲಿಂಗ್‌ಗೆ ತಿಣುಕಾಡುತ್ತಿದ್ದ ಲ್ಯಾಂಗರ್‌ಗೆ ನೆರವಾಗಿದ್ದರು ದಿಗ್ಗಜ ಕ್ರಿಕೆಟಿಗ

Australia coach Justin Langer reveals how Sir Don Bradman helped him overcome weakness

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟೀನ್ ಲ್ಯಾಂಗರ್ ಆಸಿಸ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಆಗಿಯೂ ಸಾಕಷ್ಟು ಖ್ಯಾತರಾಗಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರೆನಿಸಿರುವ ಜಸ್ಟಿನ್ ಲ್ಯಾಂಗರ್ ಈಗ ಕೋಚ್ ಆಗಿಯೂ ಶ್ರೇಷ್ಠ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

ಆದರೆ ಬ್ಯಾಟ್ಸ್‌ಮನ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಒಂದು ವಿಚಾರದಲ್ಲಿ ಸಾಕಷ್ಟು ಹಿನ್ನೆಡೆಯನ್ನು ಕಂಡಿದ್ದರಂತೆ. ಅದೇನೆಂದರೆ ಮಧ್ಯಮ ಕ್ರಮಾಂಕದ ಬೌಲಿಂಗ್ ಎದುರಿಸಲು ಲ್ಯಾಂಗರ್ ಸಾಕಷ್ಟು ತಿಣುಕಾಡುತ್ತಿದ್ದರು ಎಮಬುದನ್ನು ಸ್ವತಃ ಲ್ಯಾಂಗರ್ ಬಹಿರಂಗಪಡಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆಭಾರತ vs ಆಸ್ಟ್ರೇಲಿಯಾ: ರಿಚರ್ಡ್ಸನ್ ಹೊರಕ್ಕೆ, ಆ್ಯಂಡ್ರ್ಯೂ ಟೈ ಒಳಕ್ಕೆ

ಆದರೆ ಜಸ್ಟಿನ್ ಲ್ಯಾಂಗರ್ ಎದುರಿಸುತ್ತಿದ್ದ ಈ ಸಮಸ್ಯೆಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ನೀಡಿದ ಸಲಹೆಯ ಕಾರಣದಿಂದಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದರು. ಯಸ್, ವಿಶ್ವ ಟೆಸ್ಟ್ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ ಎನಿಸಿರುವ ಡಾನ್ ಬ್ರಾಡ್ಮನ್ ಜಸ್ಟಿನ್‌ ಲ್ಯಾಂಗರ್ ಸಮಸ್ಯೆಗೆ ಪರಿಹಾರವನ್ನು ನೀಡಿದ್ದರು.

ಜಸ್ಟಿನ್ ಲ್ಯಾಂಗರ್ ತನ್ನ ಬ್ಯಾಟಿಂಗ್‌ನಲ್ಲಿನ ಈ ಸಮಸ್ಯೆ ಬಗ್ಗೆ ಡಾನ್ ಬ್ರಾಡ್ಮನ್‌ಗೆ ಪತ್ರವನ್ನು ಬರೆದು ತಿಳಿದಿದ್ದರಂತೆ. ಇದಕ್ಕೆ ಬ್ರಾಡ್ಮನ್ ಅದ್ಭುತವಾಗಿ ಉತ್ತರವನ್ನು ನಿಡಿದ್ದರು. "ನಾನು ಯಾವುದೇ ಕ್ರಮವನ್ನು ತೆಗದುಕೊಂಡಿರಲಿಲ್ಲ. ಸಾಮಾನ್ಯ ಹಾಗೂ ಸಂವೇದನಾಶೀಲ ಧೂಮಪಾನ ಹಾಗೂ ಕುಡಿಯದ ವೃತ್ತಿ ಜೀವನವನ್ನು ಹೊರತುಪಡಿಸಿ" ಎಂದು ತಿಳಿಸಿದ್ದರು.

ಪಿಎಸ್‌ಎಲ್‌ 2020: ಬಾಬರ್ ದರ್ಬಾರ್, ಕರಾಚಿ ಕಿಂಗ್ಸ್ ವಿನ್ನರ್ಪಿಎಸ್‌ಎಲ್‌ 2020: ಬಾಬರ್ ದರ್ಬಾರ್, ಕರಾಚಿ ಕಿಂಗ್ಸ್ ವಿನ್ನರ್

ಇದರ ಜೊತೆಗೆ "ನೀವು ವಿಶೇಷವಾಗಿ ಮಧ್ಯಮ ವೇಗಿಗಳನ್ನು ಮತ್ತು ಅವರೊಂದಿಗೆ ನೀವು ಹೊಂದಿರುವ ಸ್ವಲ್ಪ ಸಮಸ್ಯೆಯನ್ನು ಉಲ್ಲೇಖಿಸುತ್ತೀರಿ. ಅವರ ವಿರುದ್ಧ, ನಾನು ಯಾವಾಗಲೂ ಸ್ವಲ್ಪ ಹಿಂದಕ್ಕೆ ಮತ್ತು ಅಡ್ಡಲಾಗಿ ಹೋಗುವ ಮೂಲಕ ಡೆಲಿವರಿಗೆ ಮೊದಲು ಚಲಿಸಲು ಪ್ರಾರಂಭಿಸುತ್ತಿದ್ದೆ. ವಾಸ್ತವವಾಗಿ, ನನ್ನ ಬ್ಯಾಟಿಂಗ್‌ನ ಮುಖ್ಯ ಆಧಾರವೆಂದರೆ ಬ್ಯಾಕ್ ಪ್ಲೇ ಆಗಿತ್ತು. ಏಕೆಂದರೆ ಇದು ಅನೇಕ ಹೊಡೆತಗಳಲ್ಲಿ ಬ್ಯಾಟ್ಸ್‌ಮನ್‌ಗೆ ಹೆಚ್ಚಿನ ಬಲ ನೀಡುತ್ತದೆ" ಎಂದು ಡಾನ್ ಬ್ರಾಡ್ಮನ್ ಹೇಳಿದ್ದರು ಎಂದು ಕ್ರಿಕೆಟ್.ಕಾಮ್.ಎಯು ಜಸ್ಟಿನ್ ಲ್ಯಾಂಗರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

Story first published: Friday, November 20, 2020, 14:49 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X