ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದ್ಯಾರ್ಥಿ ಭವನ ದೋಸೆ ಸವಿಗೆ ಮಾರುಹೋದ ಕ್ರಿಕೆಟಿಗ ಬ್ರಾಡ್ ಹಾಗ್

Australia cricketer Brad Hogg tasted Vidyarthi Bhavan hotel Dosa

ಬೆಂಗಳೂರು, ಆಗಸ್ಟ್ 19: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಹಾಲಿ ಕ್ರಿಕೆಟ್ ವೀಕ್ಷಣೆ ವಿವರಣೆಗಾರ ಬ್ರಾಡ್ ಹಾಗ್ ಅವರು ಬೆಂಗಳೂರಿನ ಖ್ಯಾತ 'ವಿದ್ಯಾರ್ಥಿ ಭವನ' ಹೊಟೆಲ್‌ಗೆ ಭೇಟಿ ನೀಡಿ ತಿಂಡಿಗಳ ರುಚಿ ಸವಿದಿದ್ದಾರೆ.

ಗಾಂಧಿ ಬಜಾರಿನ ವಿದ್ಯಾರ್ಥಿ ಭವನ ಹೊಟೆಲ್‌ಗೆ ಇಂದು ಬೆಳಿಗ್ಗೆ ಭೇಟಿ ನೀಡಿದ್ದ ಅವರೊಂದಿಗೆ ಕರ್ನಾಟಕದ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಸಹ ಇದ್ದರು. ಪ್ರಸ್ತುತ ನಡೆಯುತ್ತಿರುವ ಕೆಪಿಎಲ್‌ ಟೂರ್ನಿಯ ಶೂಟಿಂಗ್‌ಗಾಗಿ ಅವರು ವಿದ್ಯಾರ್ಥಿ ಭವನಕ್ಕೆ ಬಂದಿದ್ದರು.

ಹೊಟೆಲ್‌ಗೆ ಭೇಟಿ ನೀಡಿದ್ದ ಬ್ರಾಡ್ ಹಾಗ್, ವಿದ್ಯಾರ್ಥಿ ಭವನದ ಖ್ಯಾತ ಮಸಾಲೆ ದೊಸೆ, ಇಡ್ಲಿ, ವಡೆ-ಸಂಬಾರ್, ಚೌ-ಚೌ ಬಾತ್, ಪೂರಿ ಸಾಗುಗಳನ್ನು ಸವಿದಿದ್ದಾರೆ.

ದೋಸೆ ರುಚಿಗೆ ಮಾರುಹೋದ ಬ್ರಾಡ್ ಹಾಗ್

ದೋಸೆ ರುಚಿಗೆ ಮಾರುಹೋದ ಬ್ರಾಡ್ ಹಾಗ್

ದೋಸೆ ಮಾಡುವ ರೀತಿ, ದೋಸೆ ತುಂಬಿದ ತಟ್ಟೆಗಳನ್ನು ಒಂದರಮೇಲೊಂದು ಇಟ್ಟುಕೊಂಡು ಸರ್ವ್ ಮಾಡುವ ರೀತಿ ನೋಡಿ ಬ್ರಾಡ್ ಹಾಗ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ವಿದ್ಯಾರ್ಥಿ ಭವನದ ಮಾಲೀಕರು ಮತ್ತು ಸಿಬ್ಬಂದಿಯ ಜೊತೆ ಫೊಟೊಗಳಿಗೂ ಫೋಸು ನೀಡಿದ್ದಾರೆ.

ನಾಳೆ ಪ್ರಸಾರವಾಗಲಿದೆ ಕಾರ್ಯಕ್ರಮ

ನಾಳೆ ಪ್ರಸಾರವಾಗಲಿದೆ ಕಾರ್ಯಕ್ರಮ

ಬ್ರಾಡ್ ಹಾಗ್ ಅವರು ವಿದ್ಯಾರ್ಥಿಭವನಕ್ಕೆ ಭೇಟಿ ನೀಡಿದ್ದ ಕಾರ್ಯಕ್ರಮವು ನಾಳೆ (ಆಗಸ್ಟ್ 20) ರಂದು ಮಧ್ಯಾಹ್ನ 2:30 ಕ್ಕೆ ಸ್ಟಾರ್ ಸ್ಟೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ. ಕೆಪಿಎಲ್ ಮ್ಯಾಚ್ ಪ್ರಾರಂಭಕ್ಕೆ ಮುನ್ನಾ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್

ಬ್ರಾಡ್ ಹಾಗ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾಗಿದ್ದು, ಈಗ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಇವರು ಐಪಿಎಲ್‌ನಲ್ಲಿಯೂ ಆಡಿದ್ದರು. ಸ್ಪಿನ್ ಬೌಲರ್ ಆಗಿದ್ದ ಬ್ರಾಡ್ ಹಾಗ್, 124 ಏಕದಿನ, 7 ಟೆಸ್ಟ್ 15 ಟಿ20, 21 ಐಪಿಎಲ್ ಮ್ಯಾಚ್‌ಗಳನ್ನು ಆಡಿದ್ದಾರೆ.

1943 ರಲ್ಲಿ ಪ್ರಾರಂಭವಾದ ಹೊಟೆಲ್

1943 ರಲ್ಲಿ ಪ್ರಾರಂಭವಾದ ಹೊಟೆಲ್

1943 ರಲ್ಲಿ ಪ್ರಾರಂಭವಾದ ವಿದ್ಯಾರ್ಥಿ ಭವನ ಹೊಟೆಲ್ ದಶಕಗಳಿಂದ ಪ್ರಸಿದ್ಧಿಯನ್ನು ಉಳಿಸಿಕೊಂಡೇ ಬಂದಿದೆ. ಜನ ಸಾಮಾನ್ಯರ, ರಾಜಕಾರಣಿಗಳು, ಸಿನಿಮಾ ಮಂದಿ, ಬ್ಯುಸಿನೆಸ್‌ಮೆನ್, ಸೆಲೆಬ್ರಿಟಿಗಳ ನೆಚ್ಚಿನ ಹೊಟೆಲ್ ಇದಾಗಿದೆ.

Story first published: Monday, August 19, 2019, 17:46 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X