ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಐವರು ಅನನುಭವಿಗಳು

Australia include five uncapped players in Test squad for series against Pakistan

ಮೆಲ್ಬರ್ನ್, ಸೆಪ್ಟೆಂಬರ್ 11: ಪಾಕಿಸ್ತಾನದ ವಿರುದ್ಧ ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಐವರು ಪಾದಾರ್ಪಣೆ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಆಗಿನ ನಾಯಕ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮೆರಾನ್ ಬೆನ್‌ಕ್ರಾಫ್ಟ್ ಅಮಾನತ್ತಾದ ಬಳಿಕ ಆಸ್ಟ್ರೇಲಿಯಾದ ಆಯ್ಕೆದಾರರು ಹೊಸ ಆಯ್ಕೆಗಳತ್ತ ಮುಖಮಾಡಿದ್ದಾರೆ.

ಏಷ್ಯಾ ಕಪ್ 2018 ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ!ಏಷ್ಯಾ ಕಪ್ 2018 ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ!

ಟಿ20 ಮತ್ತು ಏಕದಿನ ಕ್ರಿಕೆಟ್‌ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾಗಿ ಪರಿಚಿತರಾಗಿರುವ ಆರೋನ್ ಫಿಂಚ್ ಮತ್ತು ಟ್ರಾವಿಸ್ ಹೆಡ್‌ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

Australia include five uncapped players in Test squad for series against Pakistan

ಅನುಭವಿ ವೇಗಿಗಳಾದ ಜೋಶ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಗಾಯಗೊಂಡಿರುವುದರಿಂದ ಆಸ್ಟ್ರೇಲಿಯಾದ ಅನನುಭವಿಗಳ ತಂಡ ಎರಡು ಪಂದ್ಯಗಳ ಸರಣಿಯಲ್ಲಿ ಪಾಕ್ ಜತೆ ಸೆಣಸಲಿದೆ.

ಮಿಖಾಯೆಲ್ ನೆಸೆರ್, ಬ್ರೆಂಡನ್ ದೊಗೆಟ್ ಮತ್ತು ಮರ್ನಸ್ ಲ್ಯಾಬಸ್ಚೆಗ್ನ್ ಪಾದಾರ್ಪಣೆ ಮಾಡಲಿರುವ ಐವರಲ್ಲಿ ಸೇರಿದ್ದಾರೆ.

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನಮ್ಮ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರಾಷ್ಟ್ರೀಯ ಆಯ್ಕೆದಾರ ಟ್ರೆವರ್ ಹನ್ಸ್ ಹೇಳಿದ್ದಾರೆ.

ಏಷ್ಯಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗಿದ ಮೆಲುಕಿದು..ಏಷ್ಯಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗಿದ ಮೆಲುಕಿದು..

ಭುಜದ ನೋವಿನಿಂದ ಬಳಲುತ್ತಿದ್ದ ಅನುಭವಿ ಶಾನ್ ಮಾರ್ಷ್ ಚೇತರಿಸಿಕೊಂಡಿರುವುದು ಆಸ್ಟ್ರೇಲಿಯಾಕ್ಕೆ ಸಮಾಧಾನ ತಂದಿದೆ. ಉಸ್ಮಾನ್ ಖವಾಜಾ, ಆಲ್‌ರೌಂಡರ್ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಅಥವಾ ಮರ್ನಸ್ ಲ್ಯಾಬಸ್ಚೆಗ್ನ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ನಿಭಾಯಿಸಬೇಕಿದೆ.

ಆಸ್ಟ್ರೇಲಿಯಾ ಎ ತಂಡದ ಭಾರತ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿರುವ ಪೀಟರ್ ಹ್ಯಾಂಡ್‌ಸ್ಕಂಬ್ ಮತ್ತು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪೀಟರ್ ಸಿಡ್ಲ್ ತಂಡಕ್ಕೆ ಮರಳಿದ್ದಾರೆ.

ಆರ್ ಸಿಬಿ ಕ್ಯಾಪ್ಟನ್ ಬದಲಾಯಿಸಲ್ಲ, ಕೊಹ್ಲಿಯೇ ನಾಯಕ!ಆರ್ ಸಿಬಿ ಕ್ಯಾಪ್ಟನ್ ಬದಲಾಯಿಸಲ್ಲ, ಕೊಹ್ಲಿಯೇ ನಾಯಕ!

ದುಬೈನಲ್ಲಿ ಅಕ್ಟೋಬರ್ 7 ರಿಂದ ಮೊದಲ ಟೆಸ್ಟ್ ಮತ್ತು ಅಬುದಾಬಿಯಲ್ಲಿ ಅಕ್ಟೋಬರ್ 16 ರಿಂದ ಎರಡನೆಯ ಟೆಸ್ಟ್ ನಡೆಯಲಿದೆ.

ಆಸ್ಟ್ರೇಲಿಯಾ ತಂಡ:
ಆರೋನ್ ಫಿಂಚ್, ಮ್ಯಾಟ್ ರೆನ್‌ಶಾ, ಬ್ರೆಂಡನ್ ಡೊಗೆಟ್, ಮಿಖಾಯೆಲ್ ನೆಸೆರ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಟಿಮ್ ಪೈನ್ (ನಾಯಕ), ಟ್ರಾವಿಸ್ ಹೆಡ್, ಮರ್ನಸ್ ಲ್ಯಾಬಸ್ಚೆಗ್ನ್, ನಥಾನ್ ಲಿಯಾನ್, ಜಾನ್ ಹೊಲ್ಯಾಂಡ್, ಆಷ್ಟೊನ್ ಅಗರ್, ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್.

Story first published: Tuesday, September 11, 2018, 15:37 [IST]
Other articles published on Sep 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X