ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಸಿಸ್ ಕ್ರಿಕೆಟಿಗರು ಕೊಹ್ಲಿಯನ್ನು ಕೆಣಕಲು ಭಯಪಡುತ್ತಿದ್ದಾರೆ, ಅದಕ್ಕೆ ಕಾರಣ...': ಕ್ಲಾರ್ಕ್

Australia Players Were Too Scared to Sledge Virat Kohli: Michael Clarke

ಕ್ರಿಕೆಟ್‌ ಲೋಕದಲ್ಲಿ ಆಸ್ಟ್ರೇಲಿಯಾ ಕಳೆದ ಹಲವಿ ದಶಕಗಳಿಂದ ಪ್ರಾಭಲ್ಯವನ್ನು ಸಾಧಿಸುತ್ತಾ ಬಂದ ರಾಷ್ಟ್ರ. ಆಟದ ಸಂದರ್ಭದಲ್ಲಿ ಎದುರಾಳಿಯ ಮೇಲೆ ನೇರವಾಗಿ ಹಿಡಿತ ಸಾಧಿಸುವುದು ಕಷ್ಟ ಎಂಬಂತಾ ಸಂದರ್ಭದಲ್ಲಿ ಎದುರಾಳಿ ಆಟಗಾರರನ್ನು ಕೆಣಕುವ(ಸ್ಲೆಡ್ಜಿಂಗ್) ಕಲೆಯಲ್ಲೂ ಆಸ್ಟ್ರೇಲಿಯಾ ಎತ್ತಿದ ಕೈ.

ಎದುರಾಳಿಗಳ ಮೇಲೆ ಯಾವ ವಿಧದಲ್ಲಾದರೂ ಸರಿ ಸವಾರಿ ಮಾಡಬೇಕು ಎಂಬ ಮನಸ್ಥಿತಿ ಎಲ್ಲಾ ರಾಷ್ಟ್ರಗಳಿಗಿಂತ ಆಸಿಸ್ ಕ್ರಿಕೆಟಿಗರಿಗೆ ಹೆಚ್ಚು. ಉತ್ತುಂಗ ಕಾಲದಲ್ಲಿದ್ದ ಆಸಿಸ್ ಸದ್ಯ ಕ್ರಿಕೆಟ್ ಲೋಕದಲ್ಲಿ ಬಿಗಿ ಹಿಡಿತವನ್ನು ಸಡಿಲಗೊಳಿಸಿದೆ. ಇದೇ ಸಂದರ್ಭದಲ್ಲಿ ಆಸಿಸ್‌ನ ಈ ಸ್ಲಡ್ಜಿಂಗ್ ಅಸ್ತ್ರವೂ ಕಡಿಮೆಯಾದಂತಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲರ್ಕ್ ಕುತೂಹಲಕರಿ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರು ವಿರಾಟ್ ಕೊಹ್ಲಿ ಮತ್ತು ಇತರ ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಭಯಪಡುತ್ತಿದ್ದಾರೆ ಎಂದಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಆಸಿಸ್ ಕ್ರಿಕೆಟಿಗರು ಮೃದುಸ್ವಭಾವಿಗಳಾಗಿದ್ದಾರೆ

ಆಸಿಸ್ ಕ್ರಿಕೆಟಿಗರು ಮೃದುಸ್ವಭಾವಿಗಳಾಗಿದ್ದಾರೆ

ಆಸ್ಟ್ರೆಲಿಯಾದ ಕ್ರಿಕೆಟಿಗರು ಹಿಂದಿಗಿಂತ ಮೃದುಸ್ವಾಭಾವಿಗಳಾಗಿದ್ದಾರೆ ಎಂದು ಆಸ್ಟ್ರೇಲಿಯಾ ತಮಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ. ಸಾಮ್ಯಾನ್ಯಕ್ಕಿಂತ ಹೆಚ್ಚಿ ಮೃದುಸ್ವಾಭಾವವನ್ನು ಹೊಂದಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ಕುಡ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ಸೇರಿ ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಭಯ

ಕೊಹ್ಲಿ ಸೇರಿ ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಭಯ

ಆಸ್ಟ್ರೇಲಿಯಾ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನು ಸ್ಲಡ್ಜ್ ಮಾಡಲು ಭಯಪಡುತ್ತಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಯಾವ ಆಟಗಾರನನ್ನು ಸ್ಜಡ್ಜ್ ಮಾಡಲು ಆಸ್ಟ್ರೇಲಿಯಾ ಆಟಗಾರರು ಹಿಂದೇಟುಹಾಕುತ್ತಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಆಸ್ಟ್ರೇಲಿಯನ್ನರ ಭಯಕ್ಕೆ ಕಾರಣ ಐಪಿಎಲ್ ಕಾರಣ

ಆಸ್ಟ್ರೇಲಿಯನ್ನರ ಭಯಕ್ಕೆ ಕಾರಣ ಐಪಿಎಲ್ ಕಾರಣ

ಆಸ್ಟ್ರೇಲಿಯನ್ ಆಟಗಾರರು ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಯಾಕೆ ಭಯಪಡುತ್ತಿದ್ದಾರೆ ಎನ್ನಲು ಮಾಜಿ ನಾಯಕ ಕ್ಲಾರ್ಕ್ ಕೊಟ್ಟ ಕಾರಣ ಐಪಿಎಲ್. ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿರುವ ಆಸ್ಟ್ರೇಲಿಯಾದ ಅನೇಕ ಕ್ರಿಕೆಟಿಗರಿಗೆ ಸ್ಲೆಡ್ಜಿಂಗ್ ಐಪಿಎಲ್ ಭವಿಷ್ಯಕ್ಕೆ ಕುತ್ತು ತರಬಹುದು ಎಂಬ ಭಯವಿದೆ ಎಂದಿದ್ದಾರೆ ಮೈಕಲ್ ಕ್ಲಾರ್ಕ್.

ಭಾರತ ಎಷ್ಟು ಬಲಶಾಲಿ ಎಂಬುದು ಎಲ್ಲರಿಗೂ ಗೊತ್ತಿದೆ

ಭಾರತ ಎಷ್ಟು ಬಲಶಾಲಿ ಎಂಬುದು ಎಲ್ಲರಿಗೂ ಗೊತ್ತಿದೆ

ಹಣಕಾಸಿನ ವಿಚಾರಕ್ಕೆ ಬಂದಾಗ ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಎಷ್ಟು ಬಲಿಷ್ಠವಾಗಿದ ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕೆಲ್ಲಾ ಐಪಿಎಲ್ ಪ್ರಮುಖ ಕಾರಣ ಎಂದು ಮೈಕಲ್ ಕ್ಲಾರ್ಕ್ ಕ್ರೋಡಾ ಸುದ್ಧಿ ಸಂಸ್ಥೆಯ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜು

ಐಪಿಎಲ್‌ನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜು

ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಟಗಾರರಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು ಕೋಲ್ಕತಾ ನೈಟ್ ರೈಡರ್ಸ್‌ಗೆ ಭರ್ಜರಿ 15.5 ಕೋಟಿ ರೂ.ಗೆ ಹರಾಜಾಗಿದ್ದಾರೆ. ಐಪಿಎಲ್ ಇತೊಹಾಸದಲ್ಲಿ ಇದೊಂಡು ದಾಖಲೆಯಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್‌ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 10.75 ಕೋಟಿ ರೂಗೆ ಖರೀದಿಸಿದರೆ, ನಾಥನ್ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ 8 ಕೋಟಿ ರೂ. ಖರೀದಿ ಮಾಡಿಕೊಂಡಿದೆ.

ಆಸಿಸ್ ನಾಯಕ ಆರ್‌ಸಿಬಿ ಪಾಲು

ಆಸಿಸ್ ನಾಯಕ ಆರ್‌ಸಿಬಿ ಪಾಲು

ಇನ್ನು ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಅವರು ಆರ್‌ಸಿಬಿ ತಂಡಕ್ಕೆ ಹರಾಜಾಗಿದ್ದಾರೆ. 4.4 ಕೋಟಿ ರೂಪಾಯಿಗೆ ಆರೋನ್ ಫಿಂಚ್ ಮಾರಾಟವಾಗಿದ್ದಾರೆ. ಹೀಗಾಗಿ ಮುಂದಿನ ಟೂರ್ನಿಯಲ್ಲಿ ಆಸಿಸ್‌ನ ನಾಯಕನೇ ವಿರಾಟ್ ಕೊಹ್ಲಿ ತಂಡದ ಕೆಳಗೆ ಆಡಬೇಕಾಗಿದೆ.

Story first published: Tuesday, April 7, 2020, 16:38 [IST]
Other articles published on Apr 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X