ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆಂಡು ತಲೆಗೆ ಬಡಿದರೂ ಕೇರೇ ಮಾಡದ ಆಸೀಸ್ ಬ್ಯಾಟ್ಸ್ಮನ್: ವಿಡಿಯೋ

Australia’s Mark Cosgrove head-butts a bouncer to first slip

ಲಂಡನ್, ಆಗಸ್ಟ್ 22: ಕ್ರಿಕೆಟ್‌ ನಲ್ಲಿ ಬೌನ್ಸರ್ ವೇಳೆ ಚೆಂಡು ತಲೆಗೆ ಬಡಿದು ಗಾಯವಾಗುವುದನ್ನು ತಪ್ಪಿಸಲು ಹೆಲ್ಮೆಟ್ ಜೊತೆಗೆ ಇನ್ನಷ್ಟು ಹೆಚ್ಚಿನ ಸುರಕ್ಷೆ ಬೇಕು ಅನ್ನೋ ಬಗ್ಗೆ ಕ್ರಿಕೆಟ್ ಜಗತ್ತು ಯೋಚಿಸುತ್ತಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಕೂಡ ಹೀಗೆ ಗಾಯಗೊಂಡಿದ್ದರು.

ಭಾರತ vs ವಿಂಡೀಸ್ ಟೆಸ್ಟ್: ಕೀಮೋ ಪೌಲ್ ಔಟ್, ಬಲಿಷ್ಠ ಕಮ್ಮಿನ್ಸ್ ಇನ್!ಭಾರತ vs ವಿಂಡೀಸ್ ಟೆಸ್ಟ್: ಕೀಮೋ ಪೌಲ್ ಔಟ್, ಬಲಿಷ್ಠ ಕಮ್ಮಿನ್ಸ್ ಇನ್!

ಆದರೆ ಇಲ್ಲೊಂದು ವಿಭಿನ್ನ ಘಟನೆಯಿದೆ. ವೇಗಿ ಎಸೆದ ಚೆಂಡು ಬ್ಯಾಟ್ಸ್ಮನ್ ತಲೆಗೆ ಬಡಿಯಿತಾದರೂ ಬ್ಯಾಟ್ಸ್ಮನ್ ಕಿಂತಿತ್ತೂ ಕೇರೇ ಮಾಡದೆ ಮತ್ತೊಂದು ಎಸೆತಕ್ಕೆ ಸಜ್ಜಾದ ವಿಡಿಯೋ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್ ಡಿವಿಷನ್-2 ವೇಳೆ ಸೆರೆಯಾಗಿದೆ.

ಭಾರತ vs ವಿಂಡೀಸ್ ಟೆಸ್ಟ್: ಕೀಮೋ ಪೌಲ್ ಔಟ್, ಬಲಿಷ್ಠ ಕಮ್ಮಿನ್ಸ್ ಇನ್!ಭಾರತ vs ವಿಂಡೀಸ್ ಟೆಸ್ಟ್: ಕೀಮೋ ಪೌಲ್ ಔಟ್, ಬಲಿಷ್ಠ ಕಮ್ಮಿನ್ಸ್ ಇನ್!

ಆಗಸ್ಟ್ 18-21ರ ವರೆಗೆ ನಡೆದಿದ್ದ ಡರ್‌ಹ್ಯಾಮ್‌ vs ಲೀಸೆಸ್ಟರ್‌ಶೈರ್ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಪ್ರತಿನಿಧಿಸಿದ್ದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮಾರ್ಕ್ ಕಾಸ್‌ಗ್ರೋವ್‌ ತಲೆಗೆ (ಅಂದರೆ ಹೆಲ್ಮೆಟ್‌ಗೆ) ಎದುರಾಳಿ ತಂಡದ ಬೌಲರ್ ಎಸೆತ ಚೆಂಡು ತಾಗಿತ್ತು. ವಿಶೇಷವೆಂದರೆ ಇಲ್ಲಿ ಆ ಬೌನ್ಸರ್‌ಗೆ ಪುಲ್‌ ಶಾಟ್ ಹೊಡೆಯುವ ಬದಲು ಮಾರ್ಕ್‌ಗ್ರೋವ್ ತಾನೇ ತಲೆಯನ್ನು ಒಡ್ಡಿದ್ದರು.

ಚೆಂಡು ಕಾಸ್‌ಗ್ರೋವ್‌ ತಲೆಗೆ ಬಡಿದು ಮತ್ತೆ ಫಸ್ಟ್ ಸ್ಲಿಪ್‌ನಲ್ಲಿದ್ದ ಫೀಲ್ಡರ್‌ನ ಕೈ ಸೇರಿತ್ತು. ಮಾರ್ಕ್ ತಲೆಗೆ ಚೆಂಡು ಬಡಿದಾಗ ಆಡುತ್ತಿದ್ದ ಆಟಗಾರರೆಲ್ಲ ಒಮ್ಮೆ ಅವಕ್ಕಾದರಾದರೂ ಕಾಸ್‌ಗ್ರೋವ್‌ ಮಾತ್ರ ತನಗೆ ಏನೂ ಆಗಿಲ್ಲವೆಂಬಂತೆ ಮತ್ತೆ ಆಡಲು ಅಣಿಯಾಗಿದ್ದರು.

ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆಲ್ಲಬಹುದು: ವಿಂಡೀಸ್ ಮಾಜಿ ನಾಯಕಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆಲ್ಲಬಹುದು: ವಿಂಡೀಸ್ ಮಾಜಿ ನಾಯಕ

ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಬೌನ್ಸರ್‌ನಿಂದಾಗಿ ಕುತ್ತಿಗೆ ಭಾಗಕ್ಕೆ ಗಾಯವಾಗಿ ಸ್ಮಿತ್ 3ನೇ ಆ್ಯಷಸ್ ಟೆಸ್ಟ್‌ನಿಂದಲೇ ಹೊರಗುಳಿಯಬೇಕಾಗಿದೆ. ಈ ನಡುವೆ ಆಸೀಸ್ ಆಟಗಾರ ಬೌನ್ಸರ್‌ಗೆ ತಾನೇ ತಲೆ ಒಡ್ಡಿದ್ದು ಕೆಲವರಿಗೆ ತಮಾಷೆಯಾಗಿ ಕಾಣಿಸಿದೆ. ಜೋಫ್ರಾ ಆರ್ಚರ್ ಎಸೆತಕ್ಕೆ ಹೀಗೇ ಆಡಬೇಕಿದೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್‌ಸನ್ ಇನ್‌ಸ್ಟಾಗ್ರಾಮ್‌ ವಿಡಿಯೋದ ಜೊತೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

Story first published: Thursday, August 22, 2019, 18:00 [IST]
Other articles published on Aug 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X