ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಆಸೀಸ್ ವೇಗಿ ಮೇಗನ್ ಶುಟ್

Australia’s Megan Schutt scripts history with maiden ODI hat-trick

ಆ್ಯಂಟಿಗುವಾ, ಸೆಪ್ಟೆಂಬರ್ 12: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ್ತಿಯಾಗಿ ಬಲಗೈ ವೇಗಿ ಮೇಗನ್ ಶುಟ್ ಗುರುತಿಸಿಕೊಂಡಿದ್ದಾರೆ. ಅವರು ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 3 ಎಸೆತಗಳಲ್ಲಿ ಸತತ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೇರಿ ಕೋಮ್ 'ಪದ್ಮ ವಿಭೂಷಣ', ಸಿಂಧು 'ಪದ್ಮಭೂಷಣ' ಪ್ರಶಸ್ತಿಗೆ ಆಯ್ಕೆಮೇರಿ ಕೋಮ್ 'ಪದ್ಮ ವಿಭೂಷಣ', ಸಿಂಧು 'ಪದ್ಮಭೂಷಣ' ಪ್ರಶಸ್ತಿಗೆ ಆಯ್ಕೆ

ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 11) ನಡೆದ ಪಂದ್ಯದಲ್ಲಿ ಮೇಗನ್ ಶುಟ್ ಈ ಸಾಧನೆ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ್ತಿಯಾಗಿಯೂ ಶುಟ್ ದಾಖಲೆ ಇತಿಹಾಸ ನಿರ್ಮಿಸಿದ್ದಾರೆ. ಈ ಮೊದಲು ಅಂತಾರಾಷ್ಟ್ರೀಯ ಟಿ20ಯಲ್ಲಿ ಮೇಗನ್ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರು.

ಲಂಕಾ ಕ್ರಿಕೆಟರ್ಸ್ ನಿಲುವಿಗೆ ಪಾಕ್ ಮಾಜಿ ಆಟಗಾರ ರಮೀಝ್ ರಾಜಾ ಕಿಡಿ!ಲಂಕಾ ಕ್ರಿಕೆಟರ್ಸ್ ನಿಲುವಿಗೆ ಪಾಕ್ ಮಾಜಿ ಆಟಗಾರ ರಮೀಝ್ ರಾಜಾ ಕಿಡಿ!

ಕಳೆದ ವರ್ಷ ಭಾರತ ವಿರುದ್ಧದ ಟಿ20 ಪಂದ್ಯದಲ್ಲಿ ಮೇಗನ್ ಶುಟ್ ಕ್ರಮವಾಗಿ ಸ್ಮೃತಿ ಮಂಧಾನ, ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ವಿಕೆಟ್‌ಗಳನ್ನು ಮುರಿದು ಚೊಚ್ಚಲ ಬಾರಿಗೆ ಅಂತಾರಾಷ್ಟ್ರೀಯ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ಕಡೇ ಎಸೆತಗಳಿಗೆ ವಿಕೆಟ್

ಕಡೇ ಎಸೆತಗಳಿಗೆ ವಿಕೆಟ್

ವಿಶೇಷವೆಂದರೆ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಒಟ್ಟು 10 ಓವರ್‌ ಎಸೆದಿದ್ದ ಮೇಗನ್ ಅವರಿಗೆ 9.3 ಓವರ್‌ಗಳವರೆಗೂ ಒಂದೇ ಒಂದು ವಿಕೆಟ್ ಲಭಿಸಿರಲಿಲ್ಲ. ಆದರೆ ಉಳಿದ ಕೊನೇ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳ ದೊರೆತುಬಿಟ್ಟವು.

ಅಂತಿಮ ಓವರ್

ಅಂತಿಮ ಓವರ್

ವೆಸ್ಟ್ ಇಂಡೀಸ್‌ ಇನ್ನಿಂಗ್ಸ್‌ನ ಕೊನೇ ಓವರ್‌ನಲ್ಲಿ ಅಂದರೆ 49.4, 49.5 ಮತ್ತು 50ನೇ ಓವರ್‌ನಲ್ಲಿ ಕ್ರಮವಾಗಿ ಚಿನೆಲ್ಲೆ ಹೆನ್ರಿ, ಕರಿಷ್ಮ ರಾಮಹಾರಕ್ ಮತ್ತು ಅಫಿ ಫ್ಲೆಚರ್ ವಿಕೆಟ್‌ಗಳು ಮೇಗನ್ ಶುಟ್‌ಗೆ ಲಭಿಸಿತು.

11ನೇ ಹ್ಯಾಟ್ರಿಕ್ ಸಾಧನೆ

11ನೇ ಹ್ಯಾಟ್ರಿಕ್ ಸಾಧನೆ

ಮಹಿಳಾ ಏಕದಿನದಲ್ಲಿ ಹ್ಯಾಟ್ರಿಕ್ ವಿಕೆಟ್ ಲಭಿಸುತ್ತಿರುವುದು ಇದು 11ನೇ ಸಾರಿ. ಅಲ್ಲದೆ ಶಟ್ ಅವರು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 7ನೇ ಕ್ರಿಕೆಟರ್ (ಪುರುಷರು, ಮಹಿಳೆಯರು ಇಬ್ಬರನ್ನೂ ಸೇರಿಸಿ) ಆಗಿ ಗುರುತಿಸಿಕೊಂಡಿದ್ದಾರೆ.

ಪೆರ್ರಿಗೆ 150 ವಿಕೆಟ್‌ಗಳು

ಪೆರ್ರಿಗೆ 150 ವಿಕೆಟ್‌ಗಳು

ವಿಂಡೀಸ್ 1 ವಿಕೆಟ್ ಮುರಿದ ಆಸೀಸ್ ವೇಗಿ ಎಲ್ಲಿಸ್ ಪೆರ್ರಿ, ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ ಪಡೆದ 3ನೇ ಆಟಗಾರ್ತಿಯಾಗಿ ಗಮನ ಸೆಳೆದರು. ಪಂದ್ಯವನ್ನು ಆಸ್ಟ್ರೇಲಿಯಾ ಮಹಿಳಾ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿತು.

Story first published: Thursday, September 12, 2019, 15:33 [IST]
Other articles published on Sep 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X