ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆ ನೀಡಿದ ಹರ್ಭಜನ್ ಸಿಂಗ್

Australias off-spinner Nathan Lyon traps batsmen with bounce, says Harbhajan Singh

ನವದೆಹಲಿ: ಆಸ್ಟ್ರೇಲಿಯಾದ ಬೌಲರ್‌ಗಳ ವಿರುದ್ಧ ಆಡುವಾಗ ಅದರಲ್ಲೂ ಆಫ್‌ ಸ್ಪಿನ್ನರ್ ನೇಥನ್ ಲಿಯಾನ್ ಎದುರು ಆಡುವಾಗ ಭಾರತೀಯ ಬ್ಯಾಟ್ಸ್‌ಮನ್‌ಗಳು ತುಂಬಾ ಎಚ್ಚರಿಕೆ ವಹಿಸಬೇಕು. ಆತ ಬೌನ್ಸ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಬಲೆಯಲ್ಲಿ ಬೀಳಿಸಬಲ್ಲರು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಭಾರತ vs ಆಸೀಸ್: ರಿಷಭ್ ಪಂತ್ ಬದಲು ಸಹಾಗೆ ಆದ್ಯತೆ ಸಾಧ್ಯತೆಭಾರತ vs ಆಸೀಸ್: ರಿಷಭ್ ಪಂತ್ ಬದಲು ಸಹಾಗೆ ಆದ್ಯತೆ ಸಾಧ್ಯತೆ

ನೇಥನ್ ಲಿಯಾನ್ ವಿರುದ್ಧ ಆಡುವಾಗ ಭಾರತದ ಬ್ಯಾಟ್ಸ್‌ಮನ್‌ಗಳು ಎಚ್ಚರ ವಹಿಸಬೇಕು. ಲಿಯಾನ್ ಫ್ಲೈಟ್, ಬೌನ್ಸ್ ಮತ್ತು ಸಾಂಪ್ರದಾಯಿಕ ಸ್ಪಿನ್ ಮೂಲಕ ಹೆಚ್ಚು ವಿಕೆಟ್‌ಗಳನ್ನು ಪಡೆಯಬಲ್ಲರು ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಯಶಸ್ವಿ ಸ್ಪಿನ್ನರ್ ಎನಿಸಿದ್ದ ಹರ್ಭಜನ್ ಸಿಂಗ್ ಅವರು ಹೇಳಿದ್ದಾರೆ.

'ನೇಥನ್ ಲಿಯಾನ್ ಬೌಲಿಂಗ್‌ ಮಾಡುವ ರೀತಿ ನನಗೆ ನೋಡಲು ಖುಷಿಯಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡೋದು ಕಷ್ಟ, ಆದರೂ ಲಿಯಾನ್ ಸೊಗಸಾಗಿ ಬೌಲಿಂಗ್ ಮಾಡ್ತಾರೆ. ಫ್ಲೈಟ್ಸ್, ಸ್ಪಿನ್ ಮತ್ತು ಬೌನ್ಸ್‌ನಲ್ಲೂ ಅವರು ವಿಕೆಟ್ ಪಡೆಯುತ್ತಾರೆ,' ಎಂದು ಎಂದು ಎಎನ್‌ಐ ಜೊತೆ ಮಾತನಾಡಿದ ಭಜ್ಜಿ ವಿವರಿಸಿದ್ದಾರೆ.

ಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿ

33ರ ಹರೆಯದ ಲಿಯಾನ್ ಭಾರತದ ವಿರುದ್ಧ ಯಶಸ್ವಿ ಬೌಲರ್ ಎನಿಸಿದ್ದಾರೆ. ಕೇವಲ 18 ಟೆಸ್ಟ್ ಪಂದ್ಯಗಳಲ್ಲಿ 85 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ 96 ಟೆಸ್ಟ್ ಪಂದ್ಯಗಳಲ್ಲಿ ಲಿಯಾನ್ 390 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಯಾನ್ 400 ವಿಕೆಟ್ ಪಡೆದರೆ, ಮುತ್ತಯ್ಯ ಮುರಳೀಧರನ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಬಳಿಕ 400 ವಿಕೆಟ್ ಪಡೆದ 4ನೇ ಸ್ಪಿನ್ನರ್ ಆಗಿ ಗುರುತಿಸಿಕೊಳ್ಳಲಿದ್ದಾರೆ.

Story first published: Monday, December 14, 2020, 20:39 [IST]
Other articles published on Dec 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X