ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಲೋಕದ ಕರಾಳ ದಿನಕ್ಕೆ ಐದು ವರ್ಷ

Michael Clarke, Steve Smith Lead Emotional Tributes For Phil Hughes On 5th Death Anniversary
Australia stars remember Philips Hughes

ಅದು 2014ರ ನವೆಂಬರ್ 27. ಯಾವಾಗಲೂ ಸೋಲು ಗೆಲುವಿನ ಲೆಕ್ಕಾಚಾರದಲ್ಲಿರುತ್ತಿದ್ದ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು. ಅಂದು ಬಂದಿದ್ದು ಸೋಲು ಗೆಲುವಿನ ಸುದ್ದಿಯಲ್ಲ ಬದಲಾಗಿ ಸಾವಿನ ಸುದ್ದಿ. ಅದೂ ಮೈದಾನದಲ್ಲೇ ... ಆ ಸುದ್ದಿ ಅಕ್ಷರಶಃ ದಂಗಾಗಿಸಿತ್ತು. ಭರವಸೆಯ ಆಟಗಾರನೊಬ್ಬ ತಲೆಗೆ ಬಿದ್ದ ಬೌನ್ಸರ್ ಹೊಡೆತಕ್ಕೆ ಇಹಲೋಕವನ್ನೇ ತ್ಯಜಿಸಿಬಿಟ್ಟಿದ್ದ.

ಫಿಲಿಪ್ ಹ್ಯೂಸ್.. ಈತನೇ ಆ ನತದೃಷ್ಟ ಕ್ರಿಕೆಟಿಗ. ಕೇವಲ ಮೂರೇ ದಿನ ಕಳೆದಿದ್ದರೆ ಹ್ಯೂಸ್ ತನ್ನ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ತನ್ನ ಜೊತೆಗಾರರನ್ನು ಕುಟುಂಬಸ್ಥರನ್ನು ಕಣ್ಣೀರ ಕಡಲಿಗೆ ತಳ್ಳಿ ಮರೆಯಾಗಿಬಿಟ್ಟಿದ್ದ.

ತಾಯಿ ಕಳೆದುಕೊಂಡ ಮರುದಿನವೇ ಕ್ರಿಕೆಟ್‌ ಅಂಗಳಕ್ಕಿಳಿದ ಪಾಕ್ ಯುವ ವೇಗಿ ಅಂತರಾಷ್ಟ್ರೀಯ ಪದಾರ್ಪಣೆಗೆ ಸಜ್ಜುತಾಯಿ ಕಳೆದುಕೊಂಡ ಮರುದಿನವೇ ಕ್ರಿಕೆಟ್‌ ಅಂಗಳಕ್ಕಿಳಿದ ಪಾಕ್ ಯುವ ವೇಗಿ ಅಂತರಾಷ್ಟ್ರೀಯ ಪದಾರ್ಪಣೆಗೆ ಸಜ್ಜು

ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಭರವಸೆಯನ್ನು ಹುಟ್ಟಿಸಿದ್ದ ಫಿಲಿಪ್ 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರೆ ಎಕದಿನ ತಂಡಕ್ಕೆ 2013ರಲ್ಲಿ ಏಕದಿನ ತಂಡಕ್ಕೆ ಪದಾರ್ಪಣೆಯನ್ನು ಮಾಡಿದ್ದರು. 26ಟೆಸ್ಟ್‌ ಹಾಗೂ 25ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ.

ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವುಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು

ಏನಾಯ್ತು ಅಂದು?

ಏನಾಯ್ತು ಅಂದು?

25 ನವೆಂಬರ್ 2014ರಂದು ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ದೇಸಿ ಪಂದ್ಯ ಅದು. ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂಸೌತ್ ವೇಲ್ಸ್‌ ನಡುವೆ ಪಂದ್ಯ ನಡೆಯುತ್ತಿತ್ತು. ಸೌತ್‌ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದ ಫಿಲಿಫ್ ಹ್ಯೂಸ್ 63 ರನ್ ಗಳಿಸಿ ಆಟ ಮುಂದುವರೆಸಿದ್ದರು. ನ್ಯೂ ಸೌತ್‌ ವೇಲ್ಸ್‌ನ ವೇಗಿ ಸೀನ್ ಅಬೋಟ್ ಅವರ ಬೌನ್ಸರ್ ಅನ್ನು ಹುಕ್ ಮಾಡುವ ಪ್ರಯತ್ನದಲ್ಲಿ ಹ್ಯೂಸ್ ಎಡವಿಬಿಟ್ಟಿದ್ದರು. ಬೌನ್ಸರ್ ನೇರವಾಗಿ ಹೆಲ್ಮೆಟ್‌ಗೆ ಬಡಿಯದೆ ಕತ್ತು ಹಾಗೂ ಕಿವಿಯ ನಡುವಿನ ಹೆಲ್ಮೆಟ್‌ನ ಖಾಲಿ ಜಾಗಕ್ಕೆ ಬಡಿದಿತ್ತು, ಅಷ್ಟೆ.. ಫಿಲಿಫ್ ಕುಸಿದು ಬಿದ್ದರು. ಎರಡು ದಿನ ಜೀವನ್ಮರಣದ ಮಧ್ಯೆ ಹೋರಾಟ ಮಾಡಿ ಫಿಲಿಫ್ ಹ್ಯೂಸ್ ಕೊನೆಯುಸಿರೆಳೆದರು.

ಗೆಳೆಯನ ನೆನೆದು ಕಣ್ಣೀರಿಟ್ಟ ಅಸ್ಸಿ ಕ್ರಿಕೆಟಿಗರು:

ಗೆಳೆಯನ ನೆನೆದು ಕಣ್ಣೀರಿಟ್ಟ ಅಸ್ಸಿ ಕ್ರಿಕೆಟಿಗರು:

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಉಂಟಾದ ಅತಿದೊಡ್ಡ ಆಘಾತ ಇದು. ಅದರಲ್ಲೂ ಅಂದಿನ ಆಸ್ಟ್ರೇಲಿಯಾ ಉಪನಾಯಕ ಮೈಕಲ್ ಕ್ಲಾರ್ಕ್ ಮತ್ತು ಡೇವಿಡ್ ವಾರ್ನರ್ ಹ್ಯೂಸ್‌ಗೆ ಅತ್ಯಾಪ್ತ ಗೆಳೆಯರು. ಪತ್ರಿಕಾಗೋಷ್ಠಿಯನ್ನು ನಡೆಸಿದ ಸಂರ್ದರ್ಭದಲ್ಲಿ ಮೈಕಲ್ ಕ್ಲಾಕ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಇಡೀ ತಂಡ ಫಿಲಿಫ್ ಹ್ಯೂಸ್ ಕುಟುಂಬದ ಜೊತೆಯಿತ್ತು.

ನೋವಿಗೆ ಸ್ಪಂದಿಸಿದ ಬಿಸಿಸಿಐ

ನೋವಿಗೆ ಸ್ಪಂದಿಸಿದ ಬಿಸಿಸಿಐ

ಈ ದುರಂತ ನಡೆಯುವ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾದಲ್ಲೆ ಇತ್ತು. ಈ ದುರಂತದಿಂದ ಆಸ್ಟ್ರೇಲಿಯಾ ಕ್ರಿಕೆಟಿಗರು ಆಘಾತಗೊಂಡಿದ್ದ ಹಿನ್ನೆಲೆಯಲ್ಲಿ ಸರಣಿಯಲ್ಲಿ ದಿನಾಂಕ ಬದಲಾವಣೆಗೆ ಸ್ಪಂದಿಸಿತ್ತು. ಬಿಸಿಸಿಐನ ಮಾನವೀಯ ಸಂದನೆಗೆ ಕ್ರಿಕೆಟ್ ಆಸ್ಟ್ರೆಲಿಯಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಕೃತಜ್ಞತೆಯನ್ನು ಸಲ್ಲಿಸಿದ್ದರು.

ಅಂತಿಮಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿರಾಟ್ ಕೊಹ್ಲಿ

ಅಂತಿಮಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವಿರಾಟ್ ಕೊಹ್ಲಿ

ಅಂತಿಮಕ್ರಿಯೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು ಹ್ಯೂಸ್ ಕುಟುಂಬಕ್ಕೆ ಸಾಥ್ ನೀಡಿತ್ತು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ಗೌರವ ಸಲ್ಲಿಸಿದ್ದರು. ಭಾರತೀಯ ಕೋಚ್ ರವಿ ಶಾಸ್ತ್ರಿ ಕೂಡ ಹಾಜರಿದ್ದರು.

ಪಾಠ ಕಲಿಸಿದ ದುರಂತ

ಪಾಠ ಕಲಿಸಿದ ದುರಂತ

ಬೌನ್ಸರ್‌ಗಳು ಹೆಲ್ಮೆಟ್‌ಗೆ ಬಡಿಯುವುದು ಸಾಮಾನ್ಯವೆ. ಆದರೆ ಹ್ಯೂಸ್ ಜೀವನ ಅಂತ್ಯವಾಗುವವರೆಗೂ ಇಷ್ಟೊಂದು ದೊಡ್ಡ ದುರಂತ ಸಂಭವಿಸಬಹುದು ಎಂಬ ನಿರೀಕ್ಷೆಯೂ ಇರಲಿಲ್ಲ. ಆದರೆ ಆ ಬಳಿಕ ಬೌನ್ಸರ್‌ಗಳು ತಪ್ಪಿ ಬ್ಯಾಟ್‌ಗೆ ಬಡಿದರೆ ಬೌಲರ್‌ಗಳು ಸ್ಪಂದಿಸುವ ರೀತಿಯೇ ಬದಲಾಗಿ ಹೋಯಿತು. ಆ ಕ್ಷಣ ಒಮ್ಮೆಗೆ ಎಲ್ಲರ ಕಣ್ಮುಂದೆ ಹ್ಯೂಸ್ ಬಂದು ಬಿಡುತ್ತಾರೆ. ತಂಡ ಯಾವುದೇ ಇರಲಿ ಬ್ಯಾಟ್ಸ್‌ಮನ್‌ಯೋಗಕ್ಷೇಮಕ್ಕೆ ಎದುರಾಳಿ ತಂಡ ಆಗಮಿಸುವುದನ್ನು ಕಾಣಬಹುದು.

ಹೆಲ್ಮೆಟ್‌ನಲ್ಲಿ ಸುಧಾರಣೆ

ಹೆಲ್ಮೆಟ್‌ನಲ್ಲಿ ಸುಧಾರಣೆ

ಕ್ರಿಕೆಟ್‌ ಆಟದಲ್ಲಿ ದೇಹದ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳತಾಗುತ್ತೆ. ಬ್ಯಾಟ್, ಪ್ಯಾಡ್ ಗ್ಲೌಸ್ ಇವೆಲ್ಲಾ ಆಟಗಾರನ ರಕ್ಷಣೆಗಾಗಿಯೇ. ಆದರೆ ಹೆಲ್ಮೆಟ್‌ನ ರಚನೆಯಲ್ಲಿ ದೋಷವಿದೆ ಅನ್ನೋದು ತಿಳಿಯಲು ಇಷ್ಟು ದೊಡ್ಡ ದುರಂತ ನಡೆಯಬೇಕಾಗಿತ್ತು. ಕಡೆಗೂ ಇದನ್ನು ಅರ್ಥ ಮಾಡಿಕೊಂಡ ಕ್ರೀಡಾಮಂಡಳಿಗಳು ಹೆಲ್ಮೆಟ್‌ನಲ್ಲಿ ಮತ್ತಷ್ಟು ಸುಧಾರಣೆಗೆ ಸೂಚಿಸಿದ್ದವು.

Story first published: Wednesday, November 27, 2019, 17:36 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X