ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 
ಆಶಸ್ ಸರಣಿಗೆ ಮುನ್ನ ಸರ್ಜರಿಗೆ ಒಳಗಾಗಲಿದ್ದಾರೆ ಆಸಿಸ್ ನಾಯಕ ಟಿಮ್ ಪೈನ್

Australia test captain Tim Paine to undergo surgery before the Ashes

ಬೆಂಗಳೂರು, ಸೆಪ್ಟೆಂಬರ್ 13: ಸದ್ಯ ವಿಶ್ವ ಕ್ರಿಕೆಟ್ ಐಪಿಎಲ್ ಹಾಗೂ ಟಿ20 ವಿಶ್ವಕಪ್‌‌ನತ್ತ ದೃಷ್ಟಿನೆಟ್ಟಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಮುಂಬರುವ ಆಶಸ್‌ಗೆ ಸಜ್ಜಾಗುತ್ತಿದ್ದಾರೆ. ಟೆಸ್ಟ್ ಸ್ಪೆಶಲಿಸ್ಟ್ ಕ್ರಿಕೆಟಿಗನಾಗಿರುವ ಪೈನ್ ತನ್ನ ಮುಂದಿರುವ ಗುರಿಗೆ ಸಿದ್ಧತೆಯನ್ನು ಆರಂಭಿಸಿದ್ದಾರೆ. ಇದರ ಭಾಗವಾಗಿ ಪೈನ್ ಕುತ್ತಿಗೆ ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಟಿಮ್ ಪೈನ್ ಅವರ ಕುತ್ತಿಗೆಯ ನರ ಸೆಟೆದುಕೊಂಡಿದ್ದು ಸಾಕಷ್ಟು ನೋವಿಗೆ ಕಾರಣವಾಗಿದೆ. ಹೀಗಾಗಿ ಟಿಮ್ ಪೈನ್ ಸೆಪ್ಟೆಂಬರ್ 14ರಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಚೇತರಿಸಿಕೊಂಡು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಶಸ್ ಟೆಸ್ಟ್ ಸರಣಿಗೆ ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ ಟಿಮ್ ಪೈನ್.

5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!

ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿಯನ್ನು ನೀಡಿದ್ದು ಟಿಮ್ ಪೈನ್ ಅವರ ಕುತ್ತಿಗೆ ಭಾಗದಲ್ಲಿ ನೋವಿನಿಂದಾಗಿ ಪೈನ್ ತೊಂದನೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಅಭ್ಯಾಸಕ್ಕೂ ಸಾಧ್ಯವಾಗುತ್ತಿಲ್ಲ. ಚಿಕಿತ್ಸೆಗೂ ಸ್ಪಂದಿಸಿಲ್ಲ. ತಜ್ಞ ವೈದ್ಯರ ಸಲಹೆಯಂತೆ ಪೈನ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಾಹಿತಿಯನ್ನು ನೀಡಿದೆ.

ಇನ್ನು ಈ ಬಗ್ಗೆ ಸ್ವತಃ ಟಿಮ್ ಪೈನ್ ಕೂಡ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ, ತಜ್ಞರು ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯಕೀಯ ತಂಡ ಒಮ್ಮತದಿಂದ ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದಾರೆ. ಈ ಬೇಸಿಗೆಗೆ ಸಿದ್ಧತೆಯನ್ನು ನಡೆಸಲು ಇದು ಸಾಕಷ್ಟು ಉತ್ತಮ ಸಮಯಾವಕಾಶವನ್ನು ನೀಡುತ್ತದೆ" ಎಂದು ಟಿಮ್ ಪೈನ್ ಹೇಳಿದ್ದಾರೆ. "ಈ ತಿಂಗಳಾಂತ್ಯಕ್ಕೆ ದೈಹಿಕ ಚಟುವಟಿಕೆಯನ್ನು ಪುನಾರಂಭಿಸಲು ಸಜ್ಜಾಗುವ ನಿರೀಕ್ಷೆಯಿದೆ. ಅಕ್ಟೋಬರ್ ತಿಂಗಳಿನಲ್ಲಿ ಸಂಪೂರ್ಣವಾಗಿ ಅಭ್ಯಾಸಕ್ಕೆ ಸಿದ್ಧವಾಗಲಿದ್ದೇನೆ. ಮೊದಲ ಟೆಸ್ಟ್‌ಗೆ ಮುನ್ನವೇ ನಾನು ಕಣಕ್ಕಿಳಿಯಲು ಸಂಪೂರ್ಣವಾಗಿ ಸಜ್ಜಾಗಲಿದ್ದೇನೆ. ಈ ಮೂಲಕ ಮುಂಬರುವ ದೊಡ್ಡ ಬೇಸಿಗೆಯತ್ತ ಎದುರುನೋಡುತ್ತಿದ್ದೇನೆ" ಎಂದಿದ್ದಾರೆ ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಬ್ರಿಸ್ಬೇನ್‌ನ ಗಾಬಾದಲ್ಲಿ ಡಿಸೆಂಬರ್ 8ರಿಂದ ಆರಂಭವಾಗಲಿದೆ. ಅದಾದ ಬಳಿಕ ನಾಲ್ಕು ಪಂದ್ಯಗಳು ಕ್ರಮವಾಗಿ ಅಡಿಲೇಡ್, ಮೆಲ್ಬರ್ನ್, ಸಿಡ್ನಿ ಹಾಗೂ ಪರ್ತ್‌ನಲ್ಲಿ ನಡೆಯಲಿದೆ. ಈ ಬಾರಿಯ ಆಶಸ್ ಸರಣಿ ಟಿಮ್ ಪೈನ್ ಪಾಲಿಗೂ ಅಗ್ನಿ ಪರೀಕ್ಷೆಯಾಗಿರಲಿದೆ. ಕಳೆದ ಭಾರತದ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ ಸೋಲು ಕಂಡ ಬಳಿಕ ಸಾಕಷ್ಟು ಟೀಕೆಗಳು ಟಿಮ್ ಪೈನ್ ವಿರುದ್ಧ ಕೇಳಿ ಬಂದಿತ್ತು. ಟೆಸ್ಟ್ ನಾಯಕತ್ವದಿಂದ ಪೈನ್ ಕೆಳಗಿಳಿಯಲೇ ಬೇಕು ಎಂಬ ಒತ್ತಾಯಗಳು ಜೋರಾಗಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಪೈನ್‌ಗೆ ಬೆಂಬಲವಾಗಿ ನಿಂತಿದ್ದು ನಾಯಕನಾಗಿ ಮುಂದುವರಿಸಿದೆ. ಈಗ ತವರಿನಲ್ಲಿಯೇ ನಡೆಯುವ ಆಶಸ್ ಸರಣಿಯಲ್ಲಿ ಗೆದ್ದು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸುವ ಅನಿವಾರ್ಯತೆಯಲ್ಲಿದ್ದಾರೆ ಆಸಿಸ್ ತಂಡದ ನಾಯಕ ಟಿಮ್ ಪೈನ್.

Story first published: Tuesday, September 14, 2021, 0:11 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X