ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಸರಣಿಗೆ ಜೆರ್ಸಿ ಬದಲಿಸಿದ ಟೀಂ ಆಸ್ಟ್ರೇಲಿಯಾ

ನವೆಂಬರ್‌ ಅಂತ್ಯದಲ್ಲಿ ಭಾರತದ ವಿರುದ್ಧ ನಡೆಯಲಿರುವ ಟಿ-ಟ್ವೆಂಟಿ ಸರಣಿಯಲ್ಲಿ ವಿಶೇಷವಾದ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದ್ದಾರೆ ಆಸ್ಟ್ರೇಲಿಯಾ ಆಟಗಾರರು. ಸ್ಥಳೀಯ ಆಸ್ಟ್ರೇಲಿಯಾದ ಕ್ರೀಡಾಪಟುಗಳ ಪಾತ್ರವನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಹಾಕಿಕೊಂಡಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಎಎಸ್ಐಸಿಎಸ್ ತಯಾರಕ ಸಂಸ್ಥೆ ಮತ್ತು ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಎಂಬ ಇಬ್ಬರು ಸ್ಥಳೀಯ ಮಹಿಳೆಯರ ಸಹಯೋಗದಲ್ಲಿ ಹೊಸ ಜೆರ್ಸಿ ವಿನ್ಯಾಸಗೊಂಡಿದ್ದು, ಬುಧವಾರ (ನವೆಂಬರ್ 11) ಹೊಸ ಜೆರ್ಸಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಅನಾವರಣಗೊಳಿಸಿದೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಮಿಸ್, ಸ್ಟೀವ್ ವಾ ಬೇಸರಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ವಿರಾಟ್ ಕೊಹ್ಲಿ ಮಿಸ್, ಸ್ಟೀವ್ ವಾ ಬೇಸರ

ಈ ಕುರಿತು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಣೆ ನೀಡಿದರುವ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ''ಈ ಶರ್ಟ್ 1868 ರ ಕ್ರಿಕೆಟ್ ತಂಡದ ಕಥೆ ಹೇಳುತ್ತದೆ'' ಎಂದು ತಿಳಿಸಿದೆ.

 Australia to wear Indigenous jersey in T20 series against India

ಭಾರತ ವಿರುದ್ಧದ ಸರಣಿಗೆ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿರುವ ಆಸ್ಟ್ರೇಲಿಯಾ ಪರವಾಗಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಫಸ್ಟ್ ಲುಕ್ ಪ್ರದರ್ಶಿಸಿದ್ದಾರೆ. ಹೊಸ ಜೆರ್ಸಿಯಲ್ಲಿ ಭಾರತದ ವಿರುದ್ಧ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಭಾರತದ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿ ನವೆಂಬರ್ 27 ರಂದು ಸಿಡ್ನಿಯಲ್ಲಿ ಆರಂಭಗೊಳ್ಳಲಿದೆ. ಇದಾದ ಬಳಿಕ ಮೂರು ಟಿ-20 ಅಂತರರಾಷ್ಟ್ರೀಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಟಿ 20 ಸರಣಿ ಡಿಸೆಂಬರ್ 4 ರಂದು ಮನುಕಾ ಓವಲ್‌ನಲ್ಲಿ ಪ್ರಾರಂಭವಾಗಲಿದೆ.

Story first published: Wednesday, November 11, 2020, 15:34 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X